ಪುಟ:ಮಿಂಚು.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

ಮಿಂಚು

ನಗೆಯ ಮುಖವಾಡ ಧರಿಸಿದಳು, ಮೃದುಲಾಬೆನ್ ಜತೆ ತಾನೂ ಇರುವ ಪತ್ರಿಕಾ ಗೋಷ್ಠಿಯ ಸುದ್ದಿ ದೇಶದ ಹಲವು ಪತ್ರಿಕೆಗಳಲ್ಲಿ ಬಂದೀತು. ರಾಷ್ಟ್ರ ವ್ಯಾಪ್ತಿಯ ಖ್ಯಾತಿ. ಆದರೆ ಕಲ್ಯಾಣನಗರದಲ್ಲಿ ಯಾರಾದರೂ ಅದನ್ನು ಓದಿದರೊ? ಇದಾರಿ ಹಿಡಿದ ಮಾರಿಗೆ ಅವಿವೇಕಿ ನೀಡುವ ಅಹ್ವಾನ. ಇವತ್ತು ಸಂಜೆಯೇ ಒಂದೆರಡು ಮುಖ್ಯ ವಿಷಯ ತಿಳಿಸಬೇಕು....

***

ಆ ಸಂಜೆ ಬಾಲ್ಕನಿಯಲ್ಲಿ ಕುಳಿತಾಗ ಮೃದುಲಾಬೆನ್ ಕೇಳಿದಳು:

"ಬೆಳಗಿನಿಂದೀಚೆಗೆ ಸ್ವಲ್ಪ ಸಪ್ಪಗಿದೀಯಲ್ಲ ಪುಟ್ಟಾ?"

"ಅಕ್ಕನಿಂದ ಮುಚ್ಚು ಮರೆಯಾಕೆ? ನಾನು ಇಲ್ಲಿಗೆ ಹೊರಟುದಕ್ಕೆ ಮುನ್ನ ಕಿಷ್ಕಿಂಧೆಯಲ್ಲಿ ಸ್ವಲ್ಪ ಗದ್ದಲವಾಯ್ತು."

"ಹಾಗಾದರೆ, ತಕ್ಷಣವೆ ಅಲ್ಲಿಗೆ ಹಿಂತಿರುಗಿ ಹೋಗಬಾರದು.'

"ನನ್ನ ಉತ್ಕರ್ಷ ನೋಡಿ ಕರುಬಿದ ಕೆಲವು ಜನ ಹೊಸ ಆಡಳಿತ ಸಮಿತಿ ಬೇಕು ಅಂತ ಹಟ ಹಿಡಿದು___"

"ಗೊತ್ತಾಯ್ತು ಬಿಡು. ನಾನು ಅನುಭವಿಸದ್ದೆ ಇದೆಲ್ಲ? ಸುಳ್ಳು ಆರೋಪಹೊರಿಸಿ ನೀನು ಆಶ್ರಮ ಬಿಡುವ ಹಾಗೆ ಮಾಡಿದ್ರು. ಈಗ ನಿನ್ನ ತೋಳುಗಳಲ್ಲಿ ಬಲವರ್ಧನೆಯಾಗೋಕು. ನಿನ್ನ ಸಾಮರ್ಥ್ಯ ಸದ್ಗುಣಗಳನ್ನ ಬಣ್ಣಿಸಿ ಒಂದೆರಡು ಪತ್ರಿಕೆಗಳಲ್ಲಿ ಪರಿಚಯ ಲೇಖನಗಳನ್ನು ಬರೆಸುವುದು ಕಷ್ಟದ ಕೆಲಸವೇನಲ್ಲ. ಆದರೆ ಕಿಂಧೆಯವರ ಕೈಗೆ ಆ ಸಂಚಿಕೆಗಳು ಸಿಗಬಾರದು."

"ಭಾರತೀ ಅನಾಥಾಶ್ರಮ ನಿಮ್ಮ ಅದ್ಭುತ ಕಲ್ಪನೆ, ಆ ಯೋಜನೆಯನ್ನು ಕಾರ್ಯಗತಗೊಳಿಸುವವರು ನೀವು. ಸ್ವಲ್ಪ ಕಾಲ ನಾನು ಮರೆಯಲ್ಲಿರೋದು ಅಗತ್ಯ."

ಪುಟ್ಟವ್ವನನ್ನೇ ನೋಡುತ್ತ ಕೆಲ ನಿಮಿಷ ಮೌನವಾಗಿದ್ದು ಮೃದುಲಾಬೆನ್ ಅಂದಳು:

"ನಿನ್ನ ಶ್ರೇಯಸ್ಸು ನನಗೆ ಮುಖ್ಯ, ಯೋಜನೆಯನ್ನ ಹಂತಗಳಲ್ಲಿ ಪೂರೈಸೋಣ. ಜಿಲ್ಲೆಗೊಂದು ಅನಾಥಾಶ್ರಮ ಐದು ವರ್ಷ ಕಳೆದ ಮೇಲೆ ಈ ಅವಧಿಯಲ್ಲಿ ಪ್ರತಿ ರಾಜ್ಯದ ರಾಜಧಾನಿ ಯಲ್ಲೊಂದು ಸಾಕು. ಕೆಲವು ಹೆಸರು ಹೇಳಿ, ಮುಂತಾದ ರಾಜ್ಯ ರಾಜಧಾನಿಗಳಲ್ಲಿ ಎಂದರೆ ಸರಿ. ಕಲ್ಯಾಣನಗರದ ಪ್ರಸ್ತಾಪ ಬೇಡ, ಅಖಿಲ ಭಾರತ ಭಾರತೀ ಅನಾಥಾಶ್ರಮ ಸಮಿತಿಗೆ ಮೊದಲ ಅಧ್ಯಕ್ಷೆ ನಾನು, ನನ್ನ ಉತ್ತರಾಧಿಕಾರಿ ನೀನು. ಸದ್ಯಕ್ಕೆ ನನ್ನ ಸಹಾಯಕಿಯಾಗಿರುವಂತೆ ಅಲಹಾಬಾದಿನಿಂದ ಕರುಣಾದೇವೀನ ಕರೆಸ್ತೀನಿ. ಇಪ್ಪತ್ತು ಸ್ವಯಂಸೇವಕಿಯರು ಸಾಕು. ನಗರದಲ್ಲಿ ನೀನೂ ನನ್ನ ಜತೆ ನಿಧಿ ಸಂಗ್ರಹಕ್ಕೆ ಬಾ, ಪತ್ರಿಕಾಗೋಷ್ಠಿಯಲ್ಲಿ