ಪುಟ:ಮಿಂಚು.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

254 ಮಿಂಚು

 “ಅತ್ಯಂತ ಸ್ವಾಭಾವಿಕ ಸಾವು, ಸಂದೇಹವೇ ಇಲ್ಲ.." 
 “ನಿಜ, ನಿನ್ನೆ ಶಾಸಕಾಂಗ ಸಭೆಯಲ್ಲೇ ಅವರಿಗೆ ಇಂಥ ಅಟ್ಯಾಕ್ ಆಗೋದು ಸಾಧ್ಯವಿತ್ತು. ಅಷ್ಟು ಉದ್ವಿಗ್ನರಾಗಿದ್ದರು."
  ಡ್ರೈವರ್ ಕರೀಂ ಬಂದ-ದರಿಯಾ ದೌಲತ್ ಗೆ ಧಾವಿಸಲು ಸಿದ್ಧನಾಗಿದ್ದವನು;
 “ಎಲ್ಲ ದೇವರ ಆಟ. ಏನುಂಟು ನಮ್ಮ ಕೈಲಿ ?” ಎಂದ, ವ್ಯಥೆಯಿಂದ.
  ಗುಪ್ತಚಾರ ದಳದ ಮುಖಸ್ಥ ಪರಶುರಾಮನನ್ನು ಬದಿಗೆ ಕರೆದು, "ಬೀಗ ನೀವು ತೆಗೆದಿರಾ ?” ಎಂದು ಕೇಳಿದ.
 “ನಸುಕಿನಲ್ಲಿ ಹೊರಡ್ಬೇಕಾದವರು, ತಟ್ಟಿದರೂ ಏಳೋದಿಲ್ಲವಲ್ಲ ಅಂತ,ಡ್ಯೂಪ್ಲಿಕೇಟ್ ಕೀ ತಂದೆ. ಸಣ್ಣಗೆ ತಟ್ಟಿದರೂ ಸಾಕು ಯಾವಾಗಲೂ ಏಳುವ ಅಭ್ಯಾಸ ಅವರದು.” (ಬಾಗಿಲು ಮುಚ್ಚದೆಯೇ ಒಮ್ಮೊಮ್ಮೆ ಮಲಗುವುದೂ ಇತ್ತು. ಇವರಿಗೆ ಯಾಕೆ ಹೇಳಬೇಕು ಅದನ್ನು? ಉತ್ತರ ಕೊಡುವಾಗ ಹುಷಾರಾಗಿರ ಬೇಕಪ್ಪ).
 ಬೆಳಕು ಹರಿಯಿತು, ಮುಖ್ಯ ಕಾರ್ಯದರ್ಶಿಗೆ, ಲಕ್ಶ್ಮೀಪತಯ್ಯನಿಗೆ, ರಂಗ ಧಾಮನಿಗೆ ಪ್ರತಿ ಪಕ್ಷದ ನಾಯಕರಿಗೆ, ಅನಾಥ ಆಶ್ರಮದವರಿಗೆ,ಕೃಷ್ಣಪ್ರಸಾದ್ ರಿಗೆ ಕರೆ ಹೋಯಿತು. ಕರೀ೦ ಪರಶುರಾಮರಿಗೆ ವಿನ೦ತಿಮಾಡಿ ತನ್ನ ಒಡೆಯರಿಗೂ ಧನಂಜಯಕುಮಾರನಿಗೂ ಫೋನ್ ಸುದ್ದಿ ಮುಟ್ಟಿಸಿದ. ವಾರ್ತಾ ಇಲಾಖೆಯಾ ನಿರ್ದೆಶಕರಿಗೆ ಪರಶುರಾಮ ವಿಷಯ ತಿಳಿಸಿದ. ಬೆಳಗಿನ ಪತ್ರಿಕೆಯಲ್ಲಿ ಬರುವಂತಿಲ್ಲ; ಆದರೆ ಆಕಾಶವಾಣಿಯ ಪ್ರದೇಶ ಸಮಾಚಾರದಲ್ಲಿ ಬಿತ್ತರವಾಗಲೇಬೇಕು: ಅಂತ್ಯ ವಿಧಿಯ ಸಮಯವನ್ನು ಯಾರು ಗೊತ್ತುಮಾಡುತ್ತಾರೆ ? ಸಂಪುಟದ ಅಧಿಕಾರ ಗ್ರಹಣಕ್ಕೆ ಸೌದಾಮಿನಿ ಅಡ್ಡಿಯಾದಳಲ್ಲ? ಸಮಾರಂಭ ಏನಿದ್ದರೂ ಸಂಜೆಗೇ. ನಿರ್ದೇಶಕ ಹೊರಟುಬಂದ,
 ರಾಜ್ಯಪಾಲರಿಗೆ ತಿಳಿಸಲು ಹೋದ ವಿಶ್ವಂಭರ ಅಲ್ಲಿಂದಲೆ ನಕುಲದೇವರಿಗೆ ಫೋನ್ ಮಾಡಿದ. ಅವರು ಧಾವಿಸಿ ಬಂದರು. ಮೂವರೂ ಮಾತನಾಡುತ್ತ ಗೃಹಕಾರ್ಯಾಲಯ ತಲಪಿದರು.
 ಯಾವ ಮುಖ ವಿಕಾರವೂ ಇಲ್ಲ, ಒಂದಿಷ್ಟೂ ದುರ್ನಾತವಿಲ್ಲ, ಧನಂಜಯ ಕುಮಾರ ಮಾರ್ಕೆಟಿಗೆ ಹೋಗಿ ನಾಲ್ಕು ಬುಟ್ಟಿ ತುಂಬ ಹೂ ತ೦ದ, ಊದುಕಡ್ಡಿಯ ಕಟ್ಟು ಕಟ್ಟುಗಳನ್ನೇ ಹಚ್ಚಿದರು. ಇಂಥದೇನೂ ಇಲ್ಲದೆ, ಅದು ಸಾವಿನ ಕೊಠಡಿ ಎನಿಸಿಕೊಳ್ಳುವುದಾದರೂ ಹೇಗೆ ?
 ನಕುಲದೇವ್ ಮುಖದಮೇಲೆ ವಿಷಾದ ಬೆರೆತ ಗಾಂಭೀರ್ಯದ ತೆರೆ ಇಳಿಸಿ, “ದುಡುಕು ಬುದ್ಧಿ, ದುರ್ಬುದ್ಧಿಯಲ್ಲ; ಎಲ್ಲದಕ್ಕೂ ಅವಸರ. ಇನ್ನೆರಡು ಮೂರು ಮಹಾ ಚುನಾವಣೆ ಕೂಡ ನೋಡಬಹುದಾಗಿತ್ತು, ಹೊರಟೇ ಹೋದು!” ಎಂದ.