ಪುಟ:ಮಿಂಚು.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 255

 ರಾಜ್ಯಪಾಲ: “ವರ್ಣಮಯ ಬದುಕು.” 
 ಎಕ್ಸ್ ಪ್ರೆಸ್ ಟ್ರಾವೆಲ್ಸ್ನವರು : “ನಮ್ಮ ಗಾಡಿಯಲ್ಲಿ ಸಫರ್ ಮಾಡುವಾಗ ಪ್ರಾಣ ಹೋಗಿದ್ದಿದ್ರೆ ಬಹಳ ಫಜೀತಿಯಾಗ್ತಿತ್ತು."
 ವಿದ್ಯಾಧರ : “ಸ್ನೇಹಪರ ವ್ಯಕ್ತಿ.ಕಿಷ್ಕಿಂಧೆಗೆ ಈ ಸಾವು ತುಂಬಲಾಗದ ನಷ್ಟ."
 ರಂಗಧಾಮನ್ : “ಅಸಮಾನ ಟೆನ್ನಿಸ್ ಆಟಗಾರ್ತಿ."
 ಬಾಲಾಜಿ-ಸಂಗಪ್ಪ : “ನಿಸ್ಟೃಹ, ಪ್ರಾಮಾಣಿಕ ವ್ಯಕ್ತಿತ್ವ." 
 ಸುಲೋಚನಾಬಾಯಿ : “ನಾರೀಲೋಕದ ಒಂದು ತಾರೆ ಅಸ್ತಂಗತವಾಯಿತು.” 
 ನಕುಲದೇವ್ ಮತ್ತು ರಾಜ್ಯಪಾಲರು ಸಲಹೆ ಇತ್ತರು, ವಿಶ್ವಂಭರನಿಗೆ : “ಪ್ರಮಾಣ ವಚನ ಸ್ವೀಕಾರವಂತೂ ಸಂಜೆಗೆ ಹೋಯಿತು. ದೊಡ್ಡದಲ್ಲ, ಸಕಲ ಪ್ರಭುತ್ವ ಮರ್ಯಾದೆಗಳೊಂದಿಗೆ ಹನ್ನೊಂದು ಗಂಟೆಗೆ అంತ್ಯ ವಿಧಿ. ಯಾರಿಗೂ ಕಾಯಬೇಕಾದ್ದಿಲ್ಲವಲ್ಲ. ನೀವೊಂದು ಪುಟ್ಟ ಭಾಷಣ ಮಾಡಿ."
 “ಭಾಷಣ ನಕುಲದೇವರು ಮಾಡ್ಲಿ " ಎಂದ ವಿಶ್ವಂಭರ. 
 ನಕುಲದೇವ್ ಒಪ್ಪಲಿಲ್ಲ : 
 “ಬೇಡ, ನೀವು ಸಾಕು."
  ಆಕಾಶವಾಣಿಯಿಂದ ಬಿತ್ತರಗೊಂಡುದನ್ನು ಕೇಳಿದೊಡನೆ ಧರ್ಮಮಠದ ಸ್ವಾಮೀಜಿ ಧಾವಿಸಿ ಬಂದರು. ಪರಶುರಾಮ ಅಲ್ಲಿದ್ದ ಪ್ರಭೃತಿಗಳಿಗೆ ಅವರ ಪರಿಚಯ ಮಾಡಿಕೊಟ್ಟ, ಸ್ವಾಮೀಯು ಅಂದರು; 
 “ಸೌದಾಮಿನಿ ದೇವಿ ನಮ್ಮ ಮಠಕ್ಕೆ ನಡೆದುಕೊಳ್ತಿದ್ರು, ದಂತೇಶ್ವರಿ ಅವರ ಕುಲದೇವತೆ."
 “ಆ ದೇವತಾವಿಗ್ರಹ ಅಲ್ಲಿ ಪೆಟ್ಟಿಗೆಯಲ್ಲಿದೆ" ಎಂದ ಗುಪ್ತಚಾರ ದಳದ ಮುಖ್ಯಸ್ಥ.
ಸ್ವಾಮೀಜಿ ಮುಂದುವರಿಸಿದರು : 
 “ನಮ್ಮ ರಿವಾಜಿನ ಪ್ರಕಾರ ಮೊದಲು ಅಗ್ನಿ ಸ್ಪರ್ಶ, ಹನ್ನೊಂದನೇ ದಿನ ಅಸ್ಥಿ ಭಸ್ಮ ಎಲ್ಲ ಮಣ್ಣಿನ ಮಡಕೆಗಳಲ್ಲಿ ತುಂಬಿ ಮಣ್ಣಿನಲ್ಲಿ ಹೂಳೋದು. ಆರ್ಯರು ಬರುವುದಕ್ಕೆ ಮೊದಲೇ ಈ ನಮ್ಮ ದೇಶದಲ್ಲಿ ರೂಢಿಯಲ್ಲಿದ್ದ ಪದ್ಧತಿ ಇದು.”
 ವಿಶ್ವಂಭರನೆಂದ: 
 “ಎಲ್ಲ ಧಾರ್ಮಿಕ ಭಾವನೆಗಳನ್ನೂ ನಾವು ಗೌರವಿಸುತ್ತೇವೆ. ತಾವೇ ಈ ಅಂತ್ಯ ವಿಧಿಕರ್ಯದ ನೇತೃತ್ವ ವಹಿಸೋಣಾಗಲಿ. ನಮ್ಮ ಸರಕಾರದ ಸಂಪೂರ್ಣ ಒಪ್ಪಿಗೆ ಎದೆ.”
           *       *        *