ಪುಟ:ಮಿಂಚು.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

256ಮಿಂಚು
ಕಲ್ಯಾಣನಗರದ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಧ್ವನಿವರ್ಧಕಗಳು ಕೇಳಿರಿ !
ಕೇಳಿರಿ !” ಮೊಳಗಿದವು. ಮುಖ್ಯಮಂತ್ರಿಯ ನಿಧನದ ನಿಮಿತ್ತ ಶಾಲೆ ಕಾಲೇಜು
ಗಳಿಗೆ, ಸರಕಾರಿ ಕಚೇರಿಗಳಿಗೆ ರಜಾ, ಮಾಜಿ ಚೀಫ್ ಮಿನಿಸ್ಟರ್ ಸೌದಾಮಿನಿ
ಮಾತಾಜಿಯವರ ಪಾರ್ಥಿವ ಶರೀರಕ್ಕೆ, ಹನ್ನೊಂದು ಗಂಟೆಗೆ ಸರಿಯಾಗಿ ಹರಿಶ್ಚಂದ್ರ
ಘಾಟ್‌ನಲ್ಲಿ ಧರ್ಮಮಠದ ಸ್ವಾಮೀಜಿಯವರಿಂದ ಅಂತ್ಯ ಸಂಸ್ಕಾರ, “ಕೇಳಿರಿ !
ಕೇಳಿರಿ !”
ಗನ್ ಕ್ಯಾರಿಯೇಜ್‌ನಲ್ಲಿರಿಸಿದ ಪುಷ್ಪಾಚ್ಛಾದಿತ ಶವವನ್ನು ರಾಜಧಾನಿಯ
ಉದ್ದಕ್ಕೆ ಅಗಲಕ್ಕೆ ಮೆರವಣಿಗೆಯಲ್ಲಿ ಒಯ್ದರು. ಮುಂದೆ ಪೊಲೀಸ್ ಪಟಾಲಂ.
ಹಿಂದಿನಿಂದ ಕಾರುಗಳು.
ಕೊನೆಯ ಕಾರನ್ನು ಕರೀಂ ನಡೆಸುತ್ತಿದ್ದ. ಧನಂಜಯಕುಮಾರನೂ ಕರೀಮನ
ಕಂಪೆನಿಯ ಒಡೆಯನೂ ಆ ಕಾರಿನಲ್ಲಿದ್ದರು.
ಸ್ಮಶಾನದ ಒಳಗೆ-ಹೊರಗೆ, ರಸ್ತೆಗಳಲ್ಲಿ, ಮನೆ ಮಹಡಿಗಳಲ್ಲಿ, ಮರಗಳ
ರೆಂಬೆ ಕೊಂಬೆಗಳಲ್ಲಿ ಜನ ಕಿಕ್ಕಿರಿದಿದ್ದರು.
ಸೀಳು ಸೌದೆಗಳಿಂದ ಅಣಿಗೊಳಿಸಿದ್ದ ಅಟ್ಟಣಿಗೆಯ ಮೇಲೆ, ಪೊಲೀಸ್ ಅಧಿ
ಕಾರಿಗಳು ವಾಹನದಿಂದ ತಾವು ಹೊತ್ತು ಇಳಿಸಿದ ಶವವನ್ನು ಇರಿಸಿದರು. ಅವರದೇ
ಧ್ವನಿವರ್ಧಕ ವಿಶ್ವಂಭರನ ನೆರವಿಗೆ ಬಂತು,
“ಬಾಂಧವರೇ ! ಹಿಂದೆಂದೂ ಅನುಭವಿಸದ ಸಂಕಟದಿಂದ ನಾನು ಬಾಧಿತನಾಗಿ
ದ್ದೇನೆ. ಕಂಠ ಉಮ್ಮಳಿಸುತ್ತಿದೆ, ಅಶ್ರುಭರದಿಂದ ದೃಷ್ಟಿ ಜಡವಾಗಿದೆ, ಇನ್ನು ಹೆಚ್ಚು
ನಾನು ಮಾತನಾಡಲಾರೆ. ನಮ್ಮ ರಾಷ್ಟ್ರ ಪಕ್ಷದ ಹಿರಿಯ ಹುದ್ದರಿಗೆ ನಮ್ಮ ಮಾಜಿ
ಮುಖ್ಯಮಂತ್ರಿಗೆ ಇದೋ ಕಿಂಧೆಯ ಶೋಕತಪ್ತ ವಿದಾಯ !”
ಶವದ ಮೇಲೆ ಸೌದೆ ಒಟ್ಟಿದರು. ಸೂಚನೆ ಬಂದೊಡನೆ ಪೊಲೀಸ್ ದಂಡು
'ಸಲಾಮಿ' ನುಡಿಯಿತು. ಆಕಾಶದತ್ತ ಗುಂಡುಗಳು ಹಾರಿದಾಗ ಕರೀಂ ಒಂದೇ
ಸಮನೆ ತನ್ನ ಕಾರಿನ ಹಾರ್ನ್ ಒತ್ತಿದ. “ಸಾಕು ! ನಿಲ್ಲು !” ಎಂದು ಅವನ ಯಜ
ಮಾನ ಗದರಿಸಿ ತಡೆಯಬೇಕಾಯಿತು.
ಹಸಿ ಸೌದೆ ಹೊಗೆಯುಗುಳುತ್ತ ಕಷ್ಟ ಕೊಟ್ಟಿತು. ಡಬ್ಬ ಡಬ್ಬ ಸೀಮೆ ಎಣ್ಣೆ
ಸುರಿದರು.
ಕಂಠ ಬಿರಿಯುವಂತೆ ಜಯಘೋಷ ಮಾಡಿತು ಜನಸ್ತೋಮ :
“ಸೌದಾಮಿನಿದೇವಿ ಚಿರಾಯುವಾಗಲಿ !”
-0-