ಪುಟ:ಮಿಂಚು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

23

"ಈ ಸಮಾಜಸೇವೆಯಿಂದಾಗಿ ನಳಪಾಕದ ಪದವಿ ನನಗೆ ದಕ್ಕಲಿಲ್ಲ."

ಇವತ್ತು ಹೀಗೆ ಹೇಳುವಂತಿಲ್ಲ, ಹೇಳಿದರೆ ಮೃದುಲಾ ಛೇಡಿಸುತ್ತಿದ್ದಳು,

"ಮೈ ಬಗ್ಗದ ಸೋಮಾರಿ."

....ಸಂಜೆ, ವಿನೋದ್ ಬಿಸಿಬಿಸಿ ಸಿಹಿ ಕಟ್ಟಿಸಿಕೊಂಡು ಬಂದ.

ಮೃದುಲಾ ಅಂದಳು:

"ಡಬ್ಲ್ ಸಿಹಿ, ನೀನೊಂದು, ಇದೊಂದು."

ಜುಮ್ಕಿ ನಕ್ಕಳು. ಹಾಗೆ ನಕ್ಕು, ಮಾಜಿಯ ಬಗ್ಗ ಳಿಂದ ಪಾರಾಗಲು ಅಡುಗೆ ಮನೆಯ ರಕ್ಷಣೆ ಪಡೆದಳು. ಮೃದುಲಾ ಅವಳನ್ನು ಕರೆದು ಅಂದಳು:

"ಮೀರಾಭಜನ್ ಜೋಡಿ ರೆಕಾರ್ಡರ್ ಚಾಲೂ ಮಾಡು."

ಜುಮ್ಕಿ ಯಾರ ಕಡೆಗೂ ನೋಡದೆ ಅಣತಿ ಈಡೇರಿಸಿದಳು.' ಪಿಸುದನಿಯ ಶ್ರೇಣಿಯಲ್ಲಿ ಲತಾ ಮಂಗೇಶ್ಕರ್ ಮಿಾರೆಯಾದಳು. ವಾತಾವರಣ ನಿರ್ಮಾಣಕ್ಕೆ ಭಜನೆಯ ಗುಂಯಾರವ, ಮಾಜಿಯ ಕಲಾಭಿರುಚಿಯ ವೈಖರಿಯನ್ನು ಬಲ್ಲವಳು ಜುಮ್ಮಿ.

ವಿನೋದ್ ಮನವಿ ಪತ್ರವನ್ನೋದಿದ.

ಪುಟ್ಟವ್ವ ಅಂದಳು:

"ಬಹನ್‌ಜಿ ಜತೆ ನಾನೂ ಇದಕ್ಕೆ ಸಹಿ ಹಾಕಿಲ್ಲ ಅಂತ ಬೇಸರ, ಭಾರತೀ ಅನಾಥಾಶ್ರಮದ ಈ ಸಲದ ಶೃಂಖಲೆಗೆ ಮೃದುಲಾಬೆನ್ ಒಬ್ಬರೇ ಕೀರ್ತಿಭಾಜನರು, ಮುಂದೆ ನನ್ನ ದೇನಾದರೂ ಯೋಜನೆ ಇದ್ದಾಗ ನೇರವಾಗಿ ಇಲ್ಲಿಗೆ ಬರೇನೆ, ನಿಮಗೆ ತೊಂದರೆ ಕೊಡೇನೆ, ವಿನೋದ್ ಭಯ್ಯ."

"ಸುಸ್ವಾಗತ, ಸದಾ, ಸರ್ವದಾ."

"ದೇಣಿಗೆಗೆ ವರಮಾನ ತೆರಿಗೆವಿನಾಯಿತಿ ಕೊಟ್ಟೇ ಕೊಡ್ತಾರೆ."

"ಮೊದಲು ಲೆಟರ್ ಹೆಡ್ಸ್, ವರಮಾನ ತೆರಿಗೆ ಕಮಿಶನರ್‌ರೊಂದಿಗೆ ಪತ್ರ ವ್ಯವಹಾರ, ವಿನಂತಿಪತ್ರದಲ್ಲಿ ವಿನಾಯತಿ ಅನುಜ್ಞೆಯ ಸೇರ್ಪಡೆ, ಒಂದೊಂದು ಲಕ್ಷ ಕೊಡುವವರ ಎಂಟು ಹತ್ತು ಹೆಸರುಗಳು ವಿನಂತಿ ಪತ್ರದಲ್ಲಿರಬೇಕು."

ಮೃದುಲಾಬೆನ್ ಮಾರೆಯ ಭಜನೆಗೆ ಅಡ್ಡಿಯಾಗಬಾರದೆಂದು, ಮೇಜನ್ನು ಮೆಲ್ಲನೆ ತಟ್ಟಿ ಅಂದಳು:

"ಭೇಷ್ ವಿನೋದ್! ಮುದ್ರಣದ ಜವಾಬ್ದಾರಿ ನಿನ್ನದು, ಒಂದು ವಾರದಲ್ಲಿ ಎಲ್ಲ ಸಿದ್ಧವಾಗಬೇಕು, ಇನ್ನೊಂದು ವಾರದಲ್ಲಿ ಕರುಣಾ ಬಂದ್ಬಿಡ್ತಾಳೆ."

"ಅವಳೇ ಕಾರ್ಯದರ್ಶಿ ಅನ್ನಿ," ಎಂದ ವಿನೋದ, ಅವನ ದೃಷ್ಟಿಯಲ್ಲಿ ಕರುಣಾ ಜಂಭದ ಕೋಳಿ, ಅವಳೊಡನೆ ವಿನೋದನ ಸ್ನೇಹ ಅಲ್ಪಾಯುವಾಗಿತ್ತು, ಬೇರೆ ಇಬ್ಬರು ಹುಡುಗಿಯರು ಅವನಿಗಿಷ್ಟ. ಆದರೆ ಒಪ್ಪಬೇಕು. ಕರುಣಾಳಲ್ಲಿ ರೂಪದ ಜತಗೆ ಚುರುಕು ಮೆದುಳೂ ಇತ್ತು,