ಪುಟ:ಮಿಂಚು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

25

ರೆಕಾರ್ಡ್ ಪ್ಲೇಯರ್ ಕರ್ ಕರೆಂದಿತು. ಈಗ ಜುಮ್ಮಿ ಚಿಗರೆ, ಸಿತಾರ್ ನಿದ್ದೆಹೋಯಿತು.

ಅವರು ಸೋಫಾಗಳತ್ತ ಸಾಗಿದರು.

ಜುಮ್ಕಿ ವಿನೋದ್ ಭಯ್ಯನಿಗೆ 555 ಬ್ರಾಂಡಿನ ಸಿಗರೇಟು ತಂದುಕೊಟ್ಟಳು.

ಮೃದುಲಾಬೆನ್ ರಾಣಿಯಾದಳು:

"ಜುಮ್ಕಿ, ಟೇಬ್‌ಲ್ ಸ್ವಚ್ಛಮಾಡಿ ನೀನು ಊಟ ಮುಗಿಸು."

"ಹ್ಞ, ಮಾಜಿ."

ಗಡಿಯಾರ ನೋಡಿ ವಿನೋದನೆಂದ:

"ಒಂಭತ್ತು ಹದಿನೈದು, ನ್ಯೂಸ್ ಆಗೋಯ್ತು."

"ನಿನಗೆ ನ್ಯೂಸಿನ ಹುಚ್ಚು. ರೇಡಿಯೊ ಹಾಕಲಾ?"

"ಬೇಡ."

ಪುಟ್ಟವ್ವ ಅಂದಳು:

"ನಾನು ಜುಮ್ಮಿ ವಿಷಯ ಯೋಚಿಸ್ತಿದ್ದೆ....."

ಮೃದುಲಾ ಆ ಮಾತನ್ನು ತುಂಡರಿಸಿದಳು:

ಅಡುಗೆ ರುಚೀದ್ದು ತಾನೆ? (ಹುಡುಗಿ ಅಡುಗೆಮನೆಯಲ್ಲಿ ಉಣ್ಣುತ್ತಿರುವ ಳೆಂಬುದನ್ನು ಖಚಿತಪಡಿಸಿಕೊಂಡು) ತಬ್ಬಲಿ ಹುಡುಗಿ ಇಲ್ಲಿಗೆ ಬಂದಾಗ ಒಡ್ಡು ಒಡ್ಡಾಗಿದ್ದು, ಅವಳನ್ನು ತಿದ್ದಿ ಈ ಸ್ಥಿತಿಗೆ ತಂದೆ."

"ನೀವು ಮುಟ್ಟಿದ್ದು ಚಿನ್ನ ವಾಗದೆ ಮೃದುಲಾಬೆನ್." ಎಂದಳು ಪುಟ್ಟವ್ವ.

....ಜುಮ್ಕಿ ಮಲಗುವ ಕೊಠಡಿಗಳಲ್ಲಿ ನೀರಿಟ್ಟಳು. ಅವಳು ಬಲ್ಲಳು: ಈ ರಾತ್ರೆ ಹಾಲು ಇಡಬೇಕಾದುದಿಲ್ಲ.

ವಿನೋದ ಮನೆಗೆ ಹೊರಡಲಿಲ್ಲ. ಇವನೂ ಗೆಸ್ಟ್ ರೂಮಿಗೆ ಓಹೋ! ಜುಮ್ಮಿ ಬಾಲ್ಕನಿಗೆ ಹೋದಳು.

ವಿನೋದ 'ಗುಡ್‌ನೈಟ್' ಹೇಳಲು ಮೃದುಲಾಳ ಶಯ್ಯಾ ಕೊಠಡಿಗೆ ಹೋಗಿ ದೀಪ ಆರಿಸಿ, ಮೃದುಲಾಗೆ ಮುತ್ತಿಟ್ಟ,

"ನೀನು ಒಳ್ಳೆಯವನು. ಇನ್ನು ಹೋಗು" ಎಂದಳು ಭಾರತಿ ಅನಾಥಾಶ್ರಮ ಪ್ರತಿಷ್ಠಾನದ ಸಂಚಾಲಕಿ ಮತ್ತೆ ಸ್ವಿಚ್ ಹಾಕಿ, ವಿನೋದ ಅತಿಥಿಗಳ ಕೊಠಡಿಗೆ ನಡೆದ. ಬಾಲ್ಕನಿಯ ಬಾಗಿಲು ಹಾಕಿ ಒಳದಿಕ್ಕಿಗೆ ಬರುತ್ತಿದ್ದ ಜುಮ್ಮಿ ಸಿಕ್ಕಿದಳು, ಮುತ್ತು ಕೊಟ್ಟು ಬಾಯಿ ಮುಚ್ಚಿ ಅಂಗಾಂಗಗಳ ಮೇಲೆ ಕೈ ಆಡಿಸಿದ.

ಒಳಗಿನಿಂದ ಮಾಜಿಯ ಸ್ವರ ಕೇಳಿಸಿತು: "ಜುಮ್ಮಾ! ಬಾ ಇಲ್ಲಿ."

"ಬಂದೆ, ಮಾಜೀ."


ಸ್ವರ ಯಾಕೋ ಒಂದು ಥರಾ ಇದೆಯಲ್ಲ ಎಂದು, "ಎಲ್ಲಿದೀಯಾ?" ಎಂದಳು ಒಡತಿ.