ಪುಟ:ಮಿಂಚು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

26

ಮಿಂಚು

"ಬಂದೆ."

"ಮುಖ ತೊಳ್ಕೊಂಡು ಬಾ. ನಿದ್ದೆ ಬರ್ತಿದೆ."

ಆ ರಾತ್ರೆ ಅಲ್ಲಿಯೇ ಶಯನ,

ಅತಿಥಿಗಳ ಕೊಠಡಿಯಲ್ಲಿ ಒಂದು ಮಂಚದ ಮೇಲೆ ಕಳ್ಳನಿದ್ದೆ ಯ ಸುಂದರಿ ಯಾಗಿದ್ದಳು ಪುಟ್ಟವ್ವ, ಮೃದುಲಾಬೆನ್ ಕೊಟ್ಟಿದ್ದ ಬಿಳಿಯ ಹೌಸ್‌ಕೋಟ್. ಹಳೆಯದು? ಈ ಚಿತ್ತಾರ? ಇಲ್ಲಿ ತನ್ನ ಪಾಲಿಗಂತೂ ಇದು ಹೊಸದು. ವಿನೋದ ದೀಪ ಆರಿಸಿ, ಇಬ್ಬರೂ ಪೂಸಿಕೊಂಡಿದ್ದ ಸುಗಂಧ ದ್ರವ್ಯಗಳ ಕಲಹದಲ್ಲಿ ಮೈ ಮರೆಯಲು ಅಣಿಯಾದ.