ಪುಟ:ಮಿಂಚು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

28

ಮಿಂಚು

ಗೋಷ್ಠಿ ಏರ್ಪಡಿಸೋ ಜವಾಬ್ದಾರಿ ನನ್ನದು. ಗುಂಡುಪಾರ್ಟಿ, ಐದುಸಾವಿರ ಬೇಕಾದೀತು. ಅಲ್ಲಿ, ನಗದು ಇಂದು ಕಡ ನಾಳೆ." "ಒಪ್ಪಿಗೆ ಕರುಣಾ, ಟಿಪ್ಪಣಿ ಮಾಡಿಕೊ." ತನ್ನ ನೀರವತೆ ಇತರರಿಗೆ ದುಸ್ಸಹವಾದೀತೆಂದು ಪುಟ್ಟವ್ವ ಅಂದಳು: - "ಒಂದು ಒಳ್ಳೆಯ ಟ್ಯಾಕ್ಸಿ ಗೊತ್ಮಾಡಿಕೊಂಡು, ಸುಮುಹೂರ್ತದಲ್ಲಿ, ಪತಿಗಳಲ್ಲಿಗೆ ಹೊರಡ್ಬೇಕು ಅಲ್ವ ಮೃದುಲಾಬೆನ್?" "ಹ್ಞ" ಎಂದು ಮೃದುಲಾ ಕೂಗಿ ಹೇಳಿದಳು: "ಜುಮ್ಕಿ, ಕರುಣಾಗೆ ಡಯರಿ ತಂದ್ಕೊಡು; ಚಹಾಕ್ಕೆ ನೀರಿಡು," ಮೊದಲ ಎರಡು ಹೆಸರುಗಳ ಸೂಚನೆ. ವಿನೋದನ ಪ್ರತಿಕ್ರಿಯೆ. ಮೃದು ಲಾಜಿಯ ತೀರ್ಪು. ...ಚಹಾದ ಕಪ್ಪುಗಳು ಬರಿದಾಗುತ್ತಿದ್ದಂತೆ ಮೃದುಲಾ ಸಪ್ಪಗಿನ ಸ್ವರದಲ್ಲಿ ಅಂದಳು: "ಯಾವತ್ತೂ ಈ ಬೃಹತ್ ಯೋಜನೆಯ ಕನಸು ಕಂಡಿದ್ದೆ, ಆದರೆ ಒಪ್ಪಲೇ ಬೇಕು, ಕನಸು ಈಗ ಮೂರ್ತರೂಪ ತಳೆದದ್ದಕ್ಕೆ ಕಾರಣ ಈ ನನ್ನ ಪುಟ್ಟ." ತೊಟ್ಟಿಕ್ಕಲು ಧಾವಿಸಿದ ಕಂಬನಿಯನ್ನು ತಡೆಹಿಡಿಯಲು, "ಹೆಹ್ಹೆಹ್ಹೆ" ಎಂದು ಸದ್ದು ಮಾಡುತ್ತ ಪುಟ್ಟವ್ವ ನಕ್ಕಳು, ಸಮಜಾಯಿಕೆಯ ನವುರು ಮಾತು. ಆದರೂ ಕಿವಿಗೆ ಇಂಪಾಗಿತ್ತು. ಮರುಕ್ಷಣವ ಪುಟ್ಟವ್ವನ ಒಳದನಿ ಉಲಿಯಿತು: "ಯೋಜನೆ ಯಶಸ್ವಿಯಾಗ್ತದೆ. ಇಡೀ ತಿಂಗಳು ನಾನು ಯಾಕೆ ಇಲ್ಲಿರಬೇಕು? ಎರಡು ಲಕ್ಷ ಕೈಗೆ ಬಿದ್ದೊಡನೆ ಜಗದಲಪುರಕ್ಕೆ ಗಾಡಿಬಿಡಬೇಕು." ಭಾರತೀ ಅನಾಥಾಶ್ರಮ ಪ್ರತಿಷ್ಠಾನಕ್ಕೆ ಯಾರು ಎಷ್ಟು ಹಣ ಬೇಕಾದರೂ ವಂತಿಗೆ ನೀಡಬಹುದು. ವರಮಾನ ತೆರಿಗೆಯಿಂದ ಆ ಮೊತ್ತಕ್ಕೆ ವಿನಾಯಿತಿಯುಂಟು, ಕರುಣಾ ವಿವಿಧಭಾರತಿ ಜಾಹೀರಾತಿನಂತೆ ಘೋಷಿಸಿದಳು: "ತೆರಿಗೆ ವಿನಾಯಿತಿ! ತೆರಿಗೆ ವಿನಾಯಿತಿ!" ಪುಟ್ಟವ್ವ ಧ್ವನಿ ಸೇರಿಸಿದಳು: "ನಿಮ್ಮಲ್ಲಿರುವ ಹಣವನ್ನೆಲ್ಲ ಕೊಟ್ಟು ಬಿಡಿ! ಪೂರ್ತಿ ತೆರಿಗೆ ವಿನಾಯತಿ!"

ಇಂಥ ಸಂದರ್ಭದಲ್ಲಿ ಹಿತೈಷಿಯನ್ನು ಕಾಣದೆ ಇರುವುದು ಅಪಚಾರ-ಎನಿ ಸಿತು ಮೃದುಲಾಗೆ, "ಕರುಣಾ, ಸಾಯಂಕಾಲ ಫೋನ್ ಸಾಹುಕಾರರಲ್ಲಿಗೆ ಹೋಗಿ ಬರೋಣ." ತನ್ನನ್ನು ಕರೆಯಲಿಲ್ಲ, ಕರೆಯುವುದಿಲ್ಲ ಎಂದು ಪುಟ್ಟವ್ವನಿಗೆ ಪಿಚ್ಚೆನಿಸಿತ್ತು, "ಇವರು ಹೋಗಲಿ, ವಿನೋದ ಹಿಂದುಳಿದರೆ ಸಾಕು" ಎಂದುಕೊಂಡಳು. (ಇವತ್ತು ರಾತ್ರಿ ಪಾಳಿ, ನಾನಿನ್ನು ಹೊರಡಬೇಕು,"ಎನ್ನ ಬೇಕೆ ಮಹಾರಾಯ? "ಸಂಗ್ರಹ ಆರಂಭಕ್ಕೆ ಘಳಿಗೆ..."