ಪುಟ:ಮಿಂಚು.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

29

–ಪುಟ್ಟವ್ವ ರಾಗವೆಳೆಯುತ್ತಿದ್ದಂತೆ ಕರುಣಾ ನಕ್ಕು, ಅಂದಳು :
“ಅಯ್ಯೋ ! ಬಹೆನ್‌ಜಿ! ಅವರು ನೀಡುವುದು ಒಂದು ಸಹಿ ಮಾತ್ರ. ನಾಮ
ಮಾತ್ರ ವಂತಿಗೆ. ರಶೀತಿ ಕೊಡಬೇಕಾಗಿಲ್ಲ,”
“ಆದರೂ ಘಳಿಗೆ ನೋಡಬೇಕಪ್ಪ.”
ಮೃದುಲಾ ಡಯರಿ ತೆರೆದು ದಿನದ ಹಾಳೆ ಬಿಡಿಸಿ, ವಾರ, ತಿಥಿ, ನಕ್ಷತ್ರ ಗಮನಿಸಿದಳು.
“ಪುಟ್ಟಾ, ಈ ದಿನ ಈ ಹೊತ್ತು ಬಿಟ್ಟರಿಲ್ಲ. ಐದು ವರ್ಷ ಅವಧಿಯೊಳಗೆ
ಐವತ್ತು ಲಕ್ಷ ದಾಟ್ತೇವೆ!"
ಹಲ್ಲಿ ಲೊಚಗುಟ್ಟಿತು.
ಮೃದುಲಾ ಅರಚಿದಳು :
“ಕೇಳಿಸ್ತಾ ಎಲ್ಲರಿಗೂ ?”
***
ಗೊತ್ತುಪಡಿಸಿದ್ದ ಟ್ಯಾಕ್ಸಿ ರಭಸದಿಂದ ಓಡಾಡಿತು. ಸಂಗ್ರಹಕಾರ್ಯ ಭರ
ದಿಂದ ನಡೆಯಿತು.
ಎರಡು ವಾರ ಕಳೆದ ಮೇಲೆ ಪುಟ್ಟವ್ವನಿಗೆ ಹೊಸ ಸೂಟ್‌ಕೇಸ್‌ಗಳು ಬಂದುವು.
ಒಂದು, ಆರಿವೆ ಇತ್ಯಾದಿ ತುಂಬಲು. ಇನ್ನೊಂದು, ಕೈಯಲ್ಲೆ ಹಿಡಿದುಕೊಳ್ಳಲು.
ಅದರಲ್ಲಿತ್ತು ಮೃದುಲಾ ಮಾತುಕೊಟ್ಟಿದ್ದ ಮೊತ್ತದ ಅರ್ಧಾಂಶ.
“ಉಳಿದರ್ಧ ನಿನ್ನೂರಿಗೆ ನೇರವಾಗಿ ಬರ಼್ತದೆ. ಹೇಗೂ ಅಲ್ಲಿಗೆ ನಾವು
ಬರ಼್ತೇವಲ್ಲ. ಅಲ್ಲಿ ಸಂಗ್ರಹಿಸಿದ ಹಣದಿಂದಲೇ ಕೊಡ್ತೇವೆ.”
ಪುಟ್ಟವ್ವ ಆಕ್ಷೇಪಿಸಲಿಲ್ಲ. ಅವಳ ಸಮಸ್ಯೆ ಪ್ರಯಾಣದ್ದು.
“ಕಷ್ಟದ ಪ್ರವಾಸವಂತೆ.” ಎಂದಳು.
ವಿವರ ಕಲೆಹಾಕಿ ವಿನೋದ ಮೃದುಲಾಬೆನ್ ಗೆ ಕಾರ್ಡು ಬರೆದ.
“ಇಲ್ಲಿಂದ ನಾಗಪುರ, ರಾಯಪುರ ರೈಲುಮಾರ್ಗ. ಅಲ್ಲಿಂದ ಬಸ್ಸಿನಲ್ಲಿ ನೇರ
ಜಗದಲಪುರಕ್ಕೆ. ಅದು ಬಸ್ತಾರ್‌ ಪ್ರದೇಶದಲ್ಲಿದೆ. ಆದಿವಾಸಿಗಳು ಹೆಚ್ಚು . ಶುಭ
ಪ್ರಯಾಣ ಕೋರುತ್ತಿದ್ದೇನೆ. ತಿಳಿಸಿಬಿಡಿ.”
“ಬೀಳ್ಕೊಡಲು ವಿನೋದ ಬರುವುದಿಲ್ಲ ಹಾಗಾದರೆ—”
ಮೃದುಲಾ ಕೇಳಿದಳು :
“ಜತೆಗೆ ಯಾರಾದರೂ ಬೇಕಾ ? ಸೂಟ್‌ಕೇಸ್‌ಗಳಿವೆಯಲ್ಲ ?”
“ಜುಮ್ಕೀನ ಕಳಿಸೋಕಾಗುತ್ತ ?"