ಪುಟ:ಮಿಂಚು.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಿಂಚು

31

ಹೊರಡುವುದಕ್ಕೆ ಮುನ್ನ, ವಿಶೇಷ ಭೋಜನವಿರಲಿಲ್ಲ. ಆದರೆ ಜುಮ್ಕಿ ಚಿಕ್ಕ
ದಾದರೂ ಚೊಕ್ಕವಾದ ಅಡುಗೆ ಮಾಡಿದಳು. ಅಂದು ಸಂಜೆ ಬೇಗನೆ ಊಟ. ಕರುಣಾ
ಟ್ಯಾಕ್ಸಿ ತರಲು ಹೋದಾಗ ಜುಮ್ಕಿ ಪುಟ್ಟವ್ವನ ಪಾಲಿನ ಬಾದಾಮಿಹಾಲು ಕೊಟ್ಟಳು.
ಜುಮ್ಕಿ ಕೇಳಿದಳು :
“ಮತ್ಯಾವಾಗ ಬರ಼್ತೀರಿ ದೀದಿಜಿ ?"
ಹುಡುಗಿಯ ಮುಂಗುರುಳನ್ನು ನೆವರಿಸಿ ಪುಟ್ಟವ್ವ ಅಂದಳು :
“ನಿನ್ನ ಮದುವೆಗೆ ಮುಂಚೆ ಬಲ್ತಿನಿ, ಜುಮ್ಕಿ.”
ಟ್ಯಾಕ್ಸಿ ಬಂತು. ಮೃದುಲಾ_ಪುಟ್ಟವ್ವ ಪರಸ್ಪರ ತಬ್ಬಿಕೊಂಡರು.
“ಕಾಗದ ಬರಿ, ಪುಟ್ಬಾ.”
"ಹೂಂ ಬಹೆನ್.”
.....ಪುಟ್ಟವ್ವನನ್ನು ಸ್ಥಾನದಲ್ಲಿ ಪ್ರತಿಷ್ಠಾಪಿಸಿ, (ಶಾಲು ಹೊದಿಸಿದ ಸಣ್ಣ
ಸೂಟ್‌ಕೆಸು ದಿಂಬು) ಕರವಸ್ತ್ರದಿಂದ ಕಣ್ಣುಗಳನ್ನು ತೀಡಿ, ರೈಲು ನಿಲ್ದಾಣದಲ್ಲಿ
ಕರುಣಾ ವಿದಾಯ ನುಡಿದಳು ಅಕ್ಕನಿಗೆ, ಕೈಯಾಡಿಸುತ್ತ.