ಪುಟ:ಮಿಂಚು.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ನಾಗಪುರ ದಾಟಿದ ಮೇಲೆ ನಿಲ್ದಾಣಗಳಲ್ಲಿ “ಧರ್ಮೇಂದರ್ ಬಾಬಾ ಜಯ
ಹೋ" ಘೋಷ ಕೇಳಿಸತೊಡಗಿತು. ಪುಟ್ಟವ್ವ ಖುಶಿ ಪಟ್ಟಳು, ಇನ್ನು ಏಕಾಕಿತನದ
ಬೇಸರವಿಲ್ಲ, ಯಾತ್ರಾರ್ಥಿಗಳ ಸಂಖ್ಯೆ ಬಹಳ ದೊಡ್ಡದಲ್ಲ. ತನಗೆ ತಿಳಿಯದೆ?
ಮಠಾಧೀಶರು ತಿರುಪತಿ ವೆಂಕಟರಮಣನಾಗುವುದು ಸಾಧ್ಯವಿಲ್ಲ. ಕುರುಡು ನಂಬಿಕೆಗೂ
ಜಾಗೃತ ಶ್ರದ್ಧೆಗೂ ವ್ಯತ್ಯಾಸ ಉಂಟು. ತಿರುಪತಿ ಹುಂಡಿಯೊಳಗೆ ಇಳಿ ಬಿಡುವುದು
ಲಾಭದ ಒಂದು ಪಾಲು. ಅದಕ್ಕೆ ಲಂಚ ಎಂದು ಹೆಸರಿಟ್ಟು ತಾನೇಕೆ ಪಾಪಿಯಾಗಲಿ?
ರಾಯಪುರ ಹತ್ತಿರ ಬರುತ್ತಿದ್ದಂತೆ ಪುಟ್ಟವ್ವನಿದ್ದ ಸೆಕೆಂಡ್ ಕ್ಲಾಸ್ ಡಬ್ಬಿಗೂ
ಮವರ ಒಂದು ಯಾತ್ರಿಕ ತಂಡ ನುಗ್ಗಿತು. ಹಳದಿ ರುಮಾಲು ಕೊರಳಲ್ಲಿ ರುದ್ರಾಕ್ಷಿ-
ಗಂಡಸರಿಗೆ. ಸ್ತ್ರೀಯೊಬ್ಬಳಿದ್ದಳು. ಉಟ್ಟಿದ್ದ ಸೀರೆ ಹಳದಿ. ತನ್ನ ಸೀರೆಗಳಲ್ಲಿ
ಎರಡು ಬಿಳಿ ಬಣ್ಣದವಿದ್ದು ವು. ಕಲ್ಯಾಣನಗರ ಬಿಡುವುದಕ್ಕೆ ಮುನ್ನ ಧರ್ಮೇಂದ್ರ
ಮಠದ ಸ್ವಾಮಿಯನ್ನು ಕೇಳಬೇಕಾಗಿತ್ತು__ಸೀರೆಯ ಬಣ್ಣದ ಬಗೆಗೆ. ಮಾನಸಿಕ
ತಳಮಳ ಅಡ್ಡಿ ಬಂತು. 'ಪತ್ರ'ಭಿಕ್ಷೆ ಆದೊಡನೆ ಹೊರಟೇ ಬಿಟ್ಟೆ. ಮೃದುಲಾ
ಮಾಯಿ ಶ್ರೇಷ್ಠಮಟ್ಟದ ಯೋಗಿನಿಯಾಗಬಹುದಿತ್ತು. ಲೌಕಿಕದ ಸೆಳೆತವೆ ತೀವ್ರ
ವಾಯಿತೇನೊ. ಹಳದಿ ಸೀರೆ ಸಾಮಾನ್ಯ ಭಕ್ತಿಯರಿಗೆ. ತನಗೆ ವಿಶೇಷ ಸ್ಥಾನ
ಸಿಗುವುದು ಖಂಡಿತ. “ಬಿಳಿ ಧರಿಸು" ಎನ್ನಬಹುದು ತನ್ನನ್ನು ಉದ್ದೇಶಿಸಿ.
ಕಣ್ಣಿಗೆ ಬಿದ್ದು ದೊಂದೇ ಬಸ್ಸು, ರಾಯಪುರದಲ್ಲಿ ಇಳಿದಾಗ. ಬಸ್ಸಿನ ಕಂಡಕ್ಟರ್
ರೈಲು ನಿಲ್ದಾಣದಿಂದ ಹೊರಬಂದ ಯಾತ್ರಾರ್ಥಿಗಳು ಎಷ್ಟು ಜನ ಎಂಬುದನ್ನು
ಎಣಿಸಿದ. ಕೈಗಳಲ್ಲಿ ಸೂಟ್‌ಕೇಸಿದ್ದ ಮಹಿಳೆಯ ಬಳಿ ಸಾರಿ "ಜಗದಲ್‌ಪುರ್‌?" ಎಂದು
ಕೇಳಿದ. ಹಿಂದೂಸ್ಥಾನಿಯಲ್ಲಿ ಪುಟ್ಟವ್ವನೆಂದಳು :
“ಹೌದಣ್ಣ. ದರ್ಮೇಂದರ್ ಬಾಬಾ ದರ್ಶನ ಎಷ್ಟು ಗಂಟೆಗೆ ಆಗ್ತದೆ?"
“ಕತ್ತಲಾಗೋದರೊಳಗೆ ಅಲ್ಲಿ ಇರ಼್ತೀವಿ. ನಿಮ್ಮ ಸೂಟ್‌ಕೇಸ್ ಮೋಟಾರಿ
ನಲ್ಲಿಟ್ಟು ಈ ನಿಲ್ದಾಣದಲ್ಲೇ ಸ್ನಾನಗೀನ ಮಾಡಿಬಿಡಿ. ಕ್ಯಾಂಟೀನ್ ಫಸ್ಟ್‌ಕ್ಲಾಸ್.
ನಾಗಪುರದಿಂದ ಬಂದೀರಾ  ?"
“ಮುಂಬಯಿಯಿಂದ."
ಅರ್ಧ ಫಂಟೆಯಲ್ಲಿ ಪೊಂ ಪೊಂ ಮೇಟಾರು ಹೊರಟಿತು. ದಾರಿಯುದ್ದಕ್ಕೂ
ಅದು ಆಪೋಶನ ತೆಗೆದುಕೊಂಡ ಆದಿವಾಸಿಗಳು ಹಲವರು, ಪಟ್ಟವ್ವ ಅತ್ತಿತ್ತ ಕತ್ತು