ಪುಟ:ಮಿಂಚು.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಿಂಚು

33

ಹೊರಳಿಸಿ, ಒಟ್ಟು ಎಷ್ಟು ಜನ ಇರುವರೆಂದು ಎಣಿಸಲು ಯತ್ನಿಸಿದಳು. ಬಟ್ಟೆಗಳಾಚೆ
ಮೈಗಳಾಚೆ ಏನೂ ಕಾಣಿಸುತ್ತಿರಲಿಲ್ಲ. ಸಂಖ್ಯೆ ನೂರು ದಾಟಿದ ಮೇಲೆ, ಇನ್ನು
ಸಾಕು ಎಂದು ಸುಮ್ಮನಾದಳು.
ಸ್ವಲ್ಪ ವಿದ್ಯೆ ಬಲ್ಲವನಿಗೂ ಅವನ ಹೆಂಡತಿಗೂ ಕಂಡಕ್ಟರ್ ಅವಳ ಬಳಿ ಸೀಟು
ಕೊಟ್ಟಿದ್ದ ‌. ಅದು ಬೇಸಗೆ. ಮಧ್ಯಪ್ರದೇಶದ ಆ ಕಗ್ಗಾಡಿನಿಂದ ಗಾಳಿ ಬೀಸಿದಾಗ.
ಒಂದಿಷ್ಟು ನಿದ್ದೆ, ಬಿಳಿಯುಡುಗೆಯ ಆ ಯೋಗಿನಿ ಬಗೆಗೆ ಅ ಹೆಂಗಸಿಗೆ ಗೌರವ,
ಗಂಡಸಿಗೂ, ಸೂರ್ಯ ಎಲ್ಲಿಂದಲೋ ಇರಿದು ನೋಡಿದಾಗ ಪ್ರಯಾಣಿಕರ ಕಿಚಿ ಕಿಚಿ.
ಪಟ್ಟವ್ವ ಕೇಳಿದಳು :
“ಪ್ರತಿ ದಿವಸ ಧರ್ಮೆಂದರ್ ಬಾಬಾರ ಮಠಕ್ಕೆ ಎಷ್ಟು ಜನ ಬರ಼್ತಾರೆ ?"
“ಹಳ್ಳಿಗಳಿಂದ ಪೇಟೆಗಳಿಂದ ಹತ್ತಿರದಿಂದ ದೂರದಿಂದ ಸಾವಿರಕ್ಕೂ ಹೆಚ್ಚು
ಜನ. ಹುಣ್ಣಿಮೆ ರಾತ್ರೆ ಎಷ್ಟೋ ಸಾವಿರ ಜನ, ಬಂದವರು ಯಾವಾಗಲೂ ಬಾಬಾನ
ಆಶೀರ್ವಾದ ಪಡೆದು, ದಂತೇಶ್ವರಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ವಾಪಸು
ಹೊರಡ್ತಾರೆ.”
“ಮಳೆಗಾಲದಲ್ಲಿ ?”
“ಇಂದ್ರಾವತಿ ನದಿಯಲ್ಲಿ ಕೆಂಪು ನೀರು, ಅಷ್ಟೆ. ಮಾಜಿಗೆ ಎಲ್ಲಾಯ್ತು?"
“ಕಂಡಕ್ಟರ್ ಹೇಳ್ಲಿಲ್ವೆ ?”
“ಹೇಳ್ದ. ನಿಮ್ಮ ಬಾಯಿಯಿಂದಲೇ ಕೇಳುವ ಕುತೂಹಲ. ಮುಂಬಯಿ
ಯವರು ಅಂದ."
"ಹೌದು."
“ನಾವು ಕಾಡಿನ ಜನ."
“ನಿಸರ್ಗದ ಪವಿತ್ರ ಸಂತಾನ.”
“ಅರ್ಥವಾಯ್ತು. ದೊಡ್ಡ ಮಾತು ಹೇಳಿದಿರಿ.”
“ಬಸ್ತಾರ್ ದೇಶ ನಮ್ಮದು. ನಾವೇ ಆಳ್ತಿದ್ವಿ. ಪರಕೀಯರ ಫಿತೂರಿಯಿಂದ
ನಮ್ಮ ಮಹಾಠಾಜರು ರಾಜ್ಯ ಕಳಕೊಂಡ್ರು.”
“ಈ ಹೋರಾಟದ, ಸೋಲಿನ ಕಥೆ ನಾನು ಕೇಳಿದ್ದೇನೆ: ಪುಸ್ತಕಗಳಲ್ಲಿ
ಓದಿದ್ದೇನೆ.”
“ಬಾಬಾ ಅವರ ಮಠದಲ್ಲಿ ಆ ಪುಸ್ತಕಗಳಿವೆ."
"ಧರ್ಮೇಂದರ್ ಬಾಬಾ ರಾಜ ಪರಂಪರೆಯ ಈಗಿನ ಅರಸರಿಗೆ ರಾಜಗುರು
ಅಲ್ಲವೆ ?"