ಪುಟ:ಮಿಂಚು.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



34

ಮಿಂಚು

“ಹೌದು. ಪ್ರತಿ ವರ್ಷ ಪಟ್ಟಾಭಿಷೇಕದ ವರ್ಧಂತ್ಯುತ್ಸವ ನಡೀತದೆ, ಆಗ
ಇಡೀ ಬಸ್ತಾರೇ ಇಲ್ಲಿಗೆ ಬರ್ತ್ತದೆ."
“ನಿಮ್ಮ ಮಾತು ಕೇಳ್ತಾ ಇದ್ದ ಹಾಗೆ, ಬಾಬಾರನ್ನು ಯಾವಾಗ ನೋಡಿ
ಯೇನೋ ಅಂತ ಮನಸ್ಸು ತುಡೀತಿದೆ.”
“ಇನ್ನು ಹತ್ತು ಮೈಲು."
ಮುಂದೆ ಕೆಲ ಮೈಲು ಹೋದೊಡನೆ ಸೂರ್ಯ ಮರೆಯಾದ. ಗುಡ್ಡದಿಂದ
ಕೆಳಗಿಳಿಯುತ್ತಿದ್ದಂತೆ ಮಿಣುಕು ಹುಳಗಳ ತೊಟ್ಟಿ ಕಾಣಿಸಿತು,
“ಅದು ಜಗದಲಪುರ ಅಲ್ಲವೆ ?"
ಬಸ್ಸು “ಬೋಲೋ ಧರ್ಮೇಂದರ್ ಬಾಬಾ ಜಯ ಹೋ” ಘೋಷದಿಂದ
ಕುಲುಕಿತು.
“ಜಗದಲಪುರ ಮಾಜಿ.'
“ಇದು ಇಂದ್ರಾವತಿ ನದಿ. ನಮ್ಮ ಪೂರ್ವಜರು ಹಾಕಿದ ಭದ್ರವಾದ ಮರದ
ಸೇತುವೆ ಇದೆ. ಅದರ ಆಚೆಗೆ ದಿಬ್ಬದ ಮೇಲೆ ಮರ. ಆಚೆಗೆ ನಗರ....ನೋಡಿ,
ಬಂದೇ ಬಿಟ್ಟಿತು."
ಯಾತ್ರಿಕರ ಜತೆ ಪಟ್ಟವ್ವಧ್ವನೂ ಅಂದಳು:
“ಬೋಲೋ ಧರ್ಮೇಂದರ್ ಬಾಬಾ ಜಯ ಹೋ.”
ನಿಂತವರು, ಕುಳಿತವರು, ಅಂಚುಗಳಲ್ಲಿ ಓಲಾಡುತ್ತಿದ್ದವರು, ಛಾವಣಿಯ
ಮೇಲೆ ಆಸೀನರಾಗಿದ್ದವರು-ಎಲ್ಲರೂ ಇಳಿದರು.
ದಿಬ್ಬದ ಮೇಲಿದ್ದುವು ಕಲ್ಲಿನ ಕಟ್ಟಡಗಳು, ಒಂದು ಮುಖ ಮಂಟಪ. ಆ
ದೀಪಾಲಂಕಾರದ ಮಧ್ಯೆ ನಿಂತಿದ್ದರು ಬಾಬಾಜಿ, ಕಪ್ಪ ಶಿಲೆಯಲ್ಲಿ ಕಡೆದ ಹೃಷ್ಟ
ಪುಷ್ಪ ಮೂರ್ತಿಯಂತೆ. ಕೆಳಗೆ ಬಯಲಿನಲ್ಲಿಯೆ ಇತ್ತು ಧರ್ಮಶಾಲೆ, ಅದು
ಯಾತಾರ್ಥಿಗಳ ವಾಸ್ತವ್ಯಕ್ಕೆ.
ಪುಟ್ಟವ್ವ ತನ್ನ ಪುಟ್ಟಚೀಲದಿಂದ ఒంದು ಲಕೋಟೆಯನ್ನು ಹೊರತೆಗೆದಳು.
ಮಾತಿನ ಜೊತೆಗಾರನಾಗಿದ್ದ ವ್ಯಕ್ತಿಯ ನೆರವನ್ನು ಅವಳು ಕೋರಿದಳು:
“ಈ ಪತ್ರವನ್ನು ಬಾಬಾಜಿಯವರಿಗೆ ಮುಟ್ಟಿಸಬೇಕು. ಅಷ್ಟು ಸಹಾಯ
ಮಾಡುತ್ತಿರಾ ?"
“ನಾನು ಅದೃಷ್ಟವಂತ ಮಾಜಿ. ಇಲ್ಲಿ ಕೊಡಿ. ಹೋತನ ಹಾಗೆ ದಿಬ್ಬ
ಹತುತ್ತೆನೆ. ನೀವು ಇಲ್ಲಿಂದಲೆ ನೋಡ್ತಾ ಇರಿ."
“ಬಾಬಾಜಿ ಏನಾದರೂ ಬಾಯುತ್ತರ ಕೊಟ್ಟರೆ ಬಂದು ತಿಳಿಸೋದಕ್ಕೆ ಮರೀ
ಬೇಡಿ.”
“ಇಳಿಯುವಾಗ ಜಿಂಕೆಯ ಹಾಗೆ ಬರ್ತೇನೆ. ಅಥವಾ, ನಾವು ಹೇಳೋ ಹಾಗೆ
ಬಾಣದ ವೇಗದಲ್ಲಿ ವಾಪಸಾಗ್ತೇನೆ.”