ಪುಟ:ಮಿಂಚು.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

35

ಹೋತ ಮುಖ ಮಂಟಪ ತಲಪಿದಾಗ 'ಪತ್ರವನ್ನು ನಾನು ನಿರೀಕ್ಷಿಸಿದ್ದೆ'
ಎನ್ನುವಂತ ವಿಗ್ರಹ ಬಲಗೈ ಚಾಚಿತು. ತಾನು ಸ್ವೀಕರಿಸದೆ, ಲಕೋಟೆ ಒಡೆದು
ಪತ್ರವನ್ನು ಓದುವಂತೆ ಬೋಳುತಲೆಯ ಚಿಗುರು ಮೀಸೆಯ ಹುಡುಗನೊಬ್ಬನಿಗೆ ಸನ್ನೆ
ಮಾಡಿತು. ಆಜ್ಞಾಧಾರಕನ ತುಟಿಗಳು ಚಲಿಸಿದುದನ್ನು ಪುಟ್ಟವ ಕಂಡಳು. ಓದಿದ
ಬಳಿಕ ಆತ ಪತ್ರವನ್ನು ಮುಖಮಂಟಪದಾಚೆಗಿನ ಮನೆಗೆ ಒಯ್ದ
ವಿಗ್ರಹದ ತುಟಿಗಳು ಮತ್ತ ಚಲಿಸಿದವು. ಹೋತ ಈಗ ಚಿಗರೆ, ಅದನ್ನು
ಇಬ್ಬರು ಕಿರಿಯರು ಹಿಂಬಾಲಿಸಿದರು.
“ಪ್ರಣಾಮ. ಬಾಬಾಜಿಯ ಅಪ್ಪಣೆಯಾಗಿದೆ. ತಾವು ಅತಿಥಿಗೃಹಕ್ಕೆ ಬರ
ಬೇಕಂತೆ.”
ಚಿಕ್ಕವರು ಸೂಟ್‌ಕೇಸ್‌ಗಳನ್ನೆತ್ತಿಕೊಂಡರು. ಬಸ್ ಪ್ರಯಾಣದ ಪರಿಚಿತನೂ
ಆತನ ಪತ್ನಿ ಯೂ ಪುಟ್ಟವ್ವನ ಪಾದಗಳಿಗೆ ನಮಿಸಿದರು.
“ನಿಮಗೆ ಒಳ್ಳೆಯದಾಗಲಿ,” ಎಂದಳು ಪುಟ್ಟವ್ವ.
ಒಂದೊಂದೇ ಪಾವಟಿಗೆಯನ್ನೇರುತ್ತ ಅವಳು ದಿಬ್ಬ ಹತ್ತಿದಳು.