ಪುಟ:ಮಿಂಚು.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

37

"ಇದೆ ಅಧಿಕಾರ, ಆಶ್ಚರ್ಯವಾಯ್ತೆ ?”
“ಇಲ್ಲ.”
“ನೀನು ಬುದ್ದಿವಂತೆ.”
"ಇದು ಆಶೀರ್ವಚನ ಬಾಬಾಜಿ.”
ಇವರಿಬ್ಬರು ಸ್ನಾನಘಟ್ಟ ತಲಪಿದೊಡನೆ, ಪುಟ್ಟವ್ವನಿಗೆ ಪರಿಚಿತನಾದ ಕಿರಿಯ
ಶಿಷ್ಯ ಓಡಿಬಂದ, ಬೋಗುಣಿಯೊಡನೆ.
“ಎಲ್ಲಿಗೆ ಹೋಗಿದ್ದೆ ?” ಎಂದು ಕೇಳಿದರು ಬಾಬಾಜಿ.
“ಮಾಜಿ ಜತೆಯಲ್ಲಿದ್ದಾರೆ ಅಂತ ಹಿಂದೆ ಉಳಿದೆ.”
“ಈ ಮಾಜಿ ಇವತ್ತಿನಿಂದ ಇಲ್ಲಿಗೆ ಹೊಸಬರಲ್ಲ, ಇವರು ತಾಯಿ, ಉಳಿದವ
ರೆಲ್ಲ ಮಕ್ಕಳು.”
ಘಟ್ಟದತ್ತ ನೋಡುತ್ತ ಪುಟ್ಟವ್ವ ಅಂದಳು :
“ತಮ್ಮದು ಮೊದಲಾಗಲಿ.”
“ಮೊದಲು ಕೊನೆ ಎಂಬುದೆಲ್ಲ ಹುಚ್ಚು. ಇದು ಪೂರ್ವಾಶ್ರಮದ ಪಳೆಯುಳಿಕೆ
ಈಜು ಬರುತ್ತ ?”
“ಮುಳುಗಿ ಸತ್ತಳು ಎಂಬ ಆರೋಪ ತಟ್ಟದು.”
“ಧರ್ಮೆಂದರ್ ಬಾಬಾ ಮುಳುಗಿಸಿ ಕೊಂದ ಎಂದು ನಿನ್ನೂರವರು ದೂರು
ವಂತೆಯೂ ಇಲ್ಲ ! ಇಳಿ, ಹತ್ತಡಿ ಆಚೆಗೆ ಎರಡು ಬಿಲ್ಲು-ಅಂದರೆ ಎರಡಾಳು-
ನೀರಿದೆ”
ಎರಡು ಮೀನು, ಒಂದರಿಂದ ಇನ್ನೊಂದು ಸಾಕಷ್ಟು ದೂರದಲ್ಲಿ, ಇದು ಜಲ
ಕ್ರೀಡೆಯಲ್ಲ, ಜಲಯೋಗ,
ಸ್ನಾನ, ಸೂರ್ಯರಶ್ಮಿ ಮುದ್ದಿಡುವುದಕ್ಕೆ ಮೊದಲೆ ನಡೆಯುವ ಪವಿತ್ರ
ಮೀಯ.
ಬಾಬಾಜಿ ದಂಡೆಗೆ ಬಂದಾಗ ಶಿಷ್ಯ ಅವರ ಬಳಿ ಸಾರಿ ಬೋಗುಣಿಯನ್ನೆತ್ತಿ
ಹಿಡಿದ, ಅದರಲ್ಲಿತ್ತು ಬಲು ಮೃದುವಾದ ಸೀಗೆಕಾಯಿಪುಡಿ, ಬಾಬಾಜಿ ಒಂದಿಷ್ಟನ್ನು.
ಎತ್ತಿಕೊಂಡು ಬೋಳುತಲೆಗೂ ಮೈಗೂ ತಿಕ್ಕಿದರು.
ಪುಟ್ಟವ್ವ ಒದ್ದೆಯಾಗಿ ಮತ್ತಷ್ಟು ಮೃದುವಾಗಿದ್ದ ಮಾರ್ಜಕವನ್ನು ತಾನು
ಸ್ವಲ್ಪ ಎತ್ತಿಕೊಂಡಳು.
ಬಾಬಾಜಿ ಅಂಗವಸ್ತ್ರದಿಂದ ಮೈ ಒರೆಸಿಕೊಂಡು, ಅದನ್ನು ನಡುವಿಗೆ ಸುತ್ತಿ,
ಒದ್ದೆ ಲಂಗೋಟಿಯನ್ನು ಬಿಚ್ಚಿದರು, ಶಿಷ್ಯ ಅದನ್ನೆತ್ತಿಕೊಂಡು ಸ್ನಾನಘಟ್ಟದ ಕಲ್ಲಿಗೆ
ಬಡೆದು ಹಿಂಡಿದ, ಬಾಬಾಜಿ ಅದನ್ನು ಬಿಗಿದು ಅಂಗವಸ್ತ್ರವನ್ನು ಕೆಳಕ್ಕೆ ಇಳಿಬಿಟ್ಟರು.
ಮಾಜಿ ತಾನು ತಂದಿದ್ದ ಹೊಸ ಬಿಳಿ ಸೀರೆಯುಟ್ಟಳು. ಒದ್ದೆಯಾಗಿ ಕಲ್ಲಿನ
ಮೇಲೆ ಬಿದ್ದುದನ್ನು ಶಿಷ್ಯ ಎತ್ತಿದ, ಒಗೆಯಲು,