ಪುಟ:ಮಿಂಚು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

39

ಕಣ್ಣುಗಳಿಗೆ ಹೊಕ್ಕಂತೆ ಕಿಂಷ್ಕಿಂಧೆಯ ಸಮಾಜ ಸೇವಿಕೆಗೆ ಅನಿಸಿತು. ಇದು ಮರ
ಹುಟ್ಟು, ತಾನೀಗ ಹೊಸ ಜೀವ ಎಂದು ಅವಳಿಗೆ ಭಾಸವಾಯಿತು.
“ಯಾವ ವಸನ ಈ ಸೌದಾಮಿನಿಗೆ ?”
“ಕೆಂಪು ಎನ್ನುತ್ತಿದ್ದೆವು. ಆದರೆ ನಿನ್ನ ಮುಂದಿರುವ ಗುರಿಯ ದೃಷ್ಟಿಯಿಂದ ಆ
ಬಣ್ಣ ಸರಿಹೋಗದು, ಬಿಳಿ, ಬಿಳಿ ಇರಲಿ.”
“ರಾಷ್ಟ್ರ ಪಕ್ಷದ ಜನ ಖಾದಿ ಉಡುವುದು ಕಡ್ಡಾಯ.”
“ಬಲ್ಲೆವು...ನೀನು ಇಲ್ಲಿಗೆ ಮೊದಲೇ ಬರಬೇಕಾಗಿತ್ತು, ಮಗು.”
"ಈಗಲಾದರೂ ಗುರುಕೃಪೆಗೆ ಪಾತ್ರನಾದೆನಲ್ಲ !”
ಇನ್ನು ಆರು ತಿಂಗಳು ನಿನಗೆ ಕಾಯಕಲ್ಪ ಚಿಕಿತ್ಸೆ. ನಾಳೆಯಿಂದ ಯೋಗಾಸನ,
ಲೇಹ್ಯ ಸೇವನೆ.”
"ಇಲ್ಲಿ ಗ್ರಂಥಗಳಿವೆ ಅಂತ ಭಕ್ತರು ಅಂದರು.”
“ಹ್ಞ. ಮಹಡಿಯ ಮೇಲೆ ಗ್ರಂಥ ಭಂಡಾರ ಇಧೆ, ದಿನವೂ ಮಿತಭೋಜನ
ವಾದ ಮೇಲೆ ಗ್ರಂಥಗಳನ್ನು ಮನನಮಾಡು. ದಿಲ್ಲಿಯ ಸ್ಟೇಟ್ಸ್ ಮನ್ ಬರ್ತದೆ,
ಕಲ್ಯಾಣನಗರದಿಂದ 'ಕಿಷ್ಕಿಂಧಾವಾಣಿ' ಕಳಿಸೋದಕ್ಕೆ ನಮ್ಮ ಆಶ್ರಮಕ್ಕೆ ಸೂಚಿಸ್ತೇನೆ.
ದಿಲ್ಲಿಯಲ್ಲಿ ರಾಷ್ಟ್ರಪಕ್ಷದ ಮುಖಂಡರು ಹಲವರು ನಮ್ಮ ಭಕ್ತರು. ಬೇರೆ ಪಕ್ಷಗಳಲ್ಲೂ
ನಮ್ಮ ಭಕ್ತಾದಿಗಳಿದ್ದಾರೆ. ಅಧಿಕಾರದಲ್ಲಿರುವ ಅಮಾತ್ಯರು ಮತ್ತಿತರರು ಬೇಕಾ
ದವರೇ.”
“ಹಿಡಿ ಕೂಳಿಗಾಗಿ ಒದ್ದಾಡುತ್ತಲಿದ್ದೆ, ರಸಗವಳದ ಪಾಕಶಾಲೆಗೇ ನನ್ನನ್ನು
ತಳ್ಳಿದಿರಿ.
"ಕೌಮಾರ ಬಂದಾಗ ಅದಕ್ಕೆ ಸೆರೆಮನೆ ವಾಸ ವನ ಮೊದಲಾದೊಡನೆ
ಅದಕ್ಕೆ ಸ್ವರ್ಣ ಸಂಕೋಲೆ. ಹಲವು ವರ್ಷ ಆ ಅವಸ್ಥೆಯಿಂದ ಬಿಡುಗಡೆ ಇಲ್ಲ. ಅರ್ಥ
ವಾಯ್ತು, ಅಲ್ಲವೆ ?”
ಸೌದಾಮಿನಿಯ ಮುಖ ಕಪ್ಪಿಟ್ಟಿತು.
“ಆಯ್ತು, ಈ ವಿಷಯದಲ್ಲಿ ನಾನು ಸಾಕಷ್ಟು ಎಚ್ಚರ ವಹಿಸಲಿಲ್ಲ ಅಂತ
ತೋರ್ತದೆ,"
ಬಾಬಾಜಿ ನಕ್ಕರು,
"ಚಿಂತೆ ಬೇಡ. ಚಿಕಿತ್ಸೆ ಸಕಾಲದಲ್ಲಿ ಆರಂಭವಾಗಿದೆ. ಚಿಕಿತ್ಸೆ ಮುಗಿಯುವ
ವೇಳೆಗೆ ನೀನು ಪುನಃ ಯೌವನಾವಸ್ಥೆ ತಲಪಿರೀಯಾ . ಆಗ ಅದನ್ನು ಬಂಧನದಲ್ಲಿಡು,
....ಇವತ್ತು ದಿಲ್ಲಿಗೆ, ರಾಷ್ಟಪಕ್ಷದ ಅಧ್ಯಕ್ಷರಿಗೆ, ಪತ್ರ ಬರೀತೇನೆ ಕಿಂಷ್ಕಿಂದೆಯ
ನಾಯಿಕೆಯೊಬ್ಬಳು ನಮ್ಮಲ್ಲಿಗೆ ಬಂದಿರೋ ವಿಷಯ ತಿಳಿಸ್ತೇವೆ, ಪಕ್ಷದ ಮಹಾ
ಕಾರ್ಯದರ್ಶಿ ಆರೆಂಟು ತಿಂಗಳಿಗೊಮ್ಮೆಯಾದರೂ ಇಲ್ಲಿಗೆ ಬಾನೆ, ಎಲ್ಲ ಸರಿ
ಹೋಗ್ತದೆ.”