ಪುಟ:ಮಿಂಚು.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

40

ಮಿಂಚು

“ನನ್ನನ್ನು ಮುಂದೆ ದಿಲ್ಲಿಗೆ ಕಳಿಸಿ, ಅಲ್ಲಿಂದ ಕಿಷ್ಕಿಂಧೆಗೆ ಹೊತ್ತು ಹಾಕಿಸುತ್ತೀರಿ
ಅಲ್ಲವಾ ಬಾಬಾಜಿ ?”
“ಬೇರೆ ಯಾರಾದರೂ ಆಗಿದ್ದರೆ, ಗುರುವಿನ ಜತ ಇಷ್ಟು ಸಲಿಗೆಯಿಂದ
ಮಾತಾಡೇಡ ಎನ್ನುತ್ತಿದ್ದವು.”
“ತಪ್ಪಿದ್ದರೆ ಮನ್ನಿಸಿ ಗುರುವೆ.”
ಮಾರನೆಯ ದಿನ ಹೊಸ ಯಾತ್ರಾರ್ಥಿಗಳು ಬಂದರು. ಹಿಂದಿನವರು ಬೇರೆ
ಬೇರೆ ದಿಕ್ಕುಗಳಿಗೆ ಬಸ್ಸುಗಳನ್ನು ಹತ್ತಿದರು, ಮಾಜಿಯ ಜತೆ ಬಂದಿದ್ದ ಪುಣ್ಯಶಾಲಿ
ಗಳು ತಾವು ಹೊರಡುವುದಕ್ಕೆ ಮುನ್ನ ಆಕೆಯ ಆಶೀರ್ವಾದ ಪಡೆದರು.
ದಿನ ಕಳೆದಂತೆ, ಧರ್ಮೆಂದರ್‌ ನಿಲಯದಲ್ಲಿ ಸೌದಾಮಿನಿದೇವಿ ಪ್ರತಿಷ್ಠಿತ
ವ್ಯಕ್ತಿಯಾದಳು.
ನಸುಕಿನಲ್ಲಿ ಯೋಗಾಸನಗಳು, ಹಿರಿಯ ಯೋಗಿನಿಯ ಉಸ್ತುವಾರಿಯಲ್ಲಿ
ಅಂಗ ಮರ್ದನ, ಪಥ್ಯ, ಆಹಾರದಲ್ಲಿ ಬದಲಾವಣೆ.
ಇಬ್ಬರೇ ಇದ್ದ ವೇಳೆ ಹಿರಿಯ ಯೋಗಿನಿ ಅಂದಳು :
“ನಾನು ಸಮಾಜಸೇವೆಯ ಅಥವಾ ರಾಷ್ಟ್ರ ಸೇವೆಯ ವಲಯದಿಂದ ಇಲ್ಲಿಗೆ
ಬಂದವಳಲ್ಲ. ನಾಗಪುರದಲ್ಲಿ ಕೇಳಿದ್ದ ಕೆಲವು ಪ್ರವಚನಗಳು ನನ್ನ ತಲೆಕೆಡಿಸಿದ್ದುವು.
ಆಧ್ಯಾತ್ಮಿಕ ಜೀವನಕ್ಕಾಗಿ ಹಂಬಲಿಸಿದೆ. ಸಂಸಾರವನ್ನು ತ್ಯಜಿಸಿ ಬಂದೆ. ಈಇಲ್ಲ
ಶಿಸ್ತಿನ ಕವಚ ನಾನೂ ತೊಡಬೇಕಾಯಿತು. ನನಗಿಂತ ವಯಸ್ಸಾದವರು ನನಗೆ 'ಅಕ್ಕ'
ಆದರು....”
“ನೀವು ಈಗ ನನಗೆ ಅಕ್ಕನಾಗಿರುವ ಹಾಗೆ-"
“ಒಂದೇ ಗಾಡಿಯಲ್ಲಿ ಪ್ರಯಾಣ. ಆದರೆ ಡಬ್ಬಿಗಳು ಬೇರೆ ಬೇರೆ. ಒಂದು
ಕೇಳೇನೆ ಸೌದಾ, ದೇಹದ ಬಯಕೆ ಆಗೋದಿಲ್ಲವ ನಿನಗೆ ?”
“ನಾನು ಸಾಮಾನ್ಯ ಮನುಷ್ಯಳು ಅಕ್ಕಾಜಿ...."
“ಸಾಮಾನ್ಯಳಾಗಿದ್ದರೆ ಬಾಬಾ ಇಷ್ಟು ಮುತುವರ್ಜಿ ವಹಿಸಿರಲಿಲ್ಲ. ದೊಡ್ಡ
ಗುರಿಸಾಧನೆಗೆ ನೀನೊಂದು ಬೆಲೆಬಾಳುವ ಉಪಕರಣ, ವಾತೆಯಲ್ಲಿ ತರಬೇತಿ
ನೀಡೋದಕ್ಕೆ ಆದೇಶವಿತ್ತಿದ್ದಾರೆ, ಆತ್ಮನಿಗ್ರಹ ಮಾಡೋ, ಇನ್ನು ಆರು ತಿಂಗಳಲ್ಲಿ
ನೀನು ಏನಾಗಿದ್ದೀಯ ಅನ್ನೋದು ನಿನಗೆ ತಿಳೀದು,”
ಸ್ನಾನದ ಘಟ್ಟದ ಸಂವಾದದಲ್ಲಿ ಒಂದು ದಿನ 'ಅರ್ಥಶಾಸ್ತ್ರ' ಮಿಂಚಿತು.
“ಈ ಗ್ರಂಥ ಓದಿದೀಯ ?”
“ಇಲ್ಲ ಬಾಬಾಜಿ, ಗ್ರಂಥ ಭಂಡಾರದಲ್ಲಿ ನಿನ್ನೆ ನೋಡಿದೆ.”
“ಎರಡು ಸಾವಿರದ ಮುನ್ನೂರು ವರ್ಷ ಹಿಂದಿನ ಗ್ರಂಥ, ಕೌಟಿಲ್ಯ ಬರೆದದ್ದು,
ಕೌಟಿಲ್ಯ ಅಲ್ಲ 'ಕೌಟಲ್ಯ' ಅಂತ ವಾದವಿದೆ. ನಮಗೆ ಅದು ಅಮುಖ್ಯ. ಪ್ರತಿಯೊಬ್ಬ