ಪುಟ:ಮಿಂಚು.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

41

ರಾಜಕಾರಿಣಿಯಾ ಅದನ್ನು ಅಭ್ಯಾಸ ಮಾಡಬೇಕು. ನಿನಗೆ ಅದು ಪಾರಾಯಣ
ಗ್ರಂಥವಾಗಬೇಕು.”
"ಆಗಲಿ, ಬಾಬಾಜಿ,"
“ಮಳೆ ಬರದೆ ಇದ್ರೆ ಅರಸನ ಮೇಲೆ ದೂರು, ಹುಡುಗಿಗೆ ವರ ಸಿಗದಿದ್ದರೆ
ರಾಜ ಹೊಣೆ. ಹೋರಿ ಸತ್ಕಾರೂ ಅವನೇ ಜವಾಬ್ದಾರ. ಅಂಥವರಿಗೆ ಏನು ಮಾಡ
ಬೇಕು?ಸಮಾಜವನ್ನು, ಜನಸಮುದಾಯವನ್ನು, ರಾಷ್ಟ್ರವನ್ನು ಹತೋಟಿಯಲ್ಲಿಟ್ಟು
ಕೊಳ್ಳೋದಕ್ಕೆ ನೂರು ತಂತ್ರಗಳನ್ನು ಬಳಸುವುದಗತ್ಯ. ಮೂಢನಂಬಿಕೆಗಳು ಜನರಲ್ಲಿ
ಹಾಸುಹೊಕ್ಕು, ಅಂಥ ನಂಬಿಕೆಗಳ ಬಲೆಯಲ್ಲೆ ಅವರನ್ನು ಕೆಡವಬೆಕು. ಇದಕ್ಕೆ
ಗೂಢಚಾರರ ಪಡೆ ಬೇಕು, ರಾಜರ ಮೆರವಣಿಗೆ ರಾತ್ರೆ ಇಟ್ಟೊಳ್ವಿದು.ಎಡಬಲ
ಗಳಲ್ಲಿ ಹಿಲಾಲು ಬೆಳಕು. ರಥಗಳಲ್ಲಿ ಅರಸನ ಆ ಕಡೆ ಈ ಕಡೆ ರೆಕ್ಕೆಕಟ್ಟಿಕೊಂಡಿರುವ
ಸುಂದರ ತರುಣರು. ಗೂಢಚಾರರು ಜನಸಂದಣಿಯಲ್ಲಿ ನುಸುಳಿ. 'ಅವರು ದೇವ
ಲೊಕದಿ೦ದ ಬಂದಿದಾರೆ' ಎಂದು ಸುದ್ದಿ ಹಬ್ಬಿಸಬೇಕು. ಪ್ರಜೆಗಳು ಮೋಡಿಗೆ
ಒಳಗಾಗುತ್ತಾರೆ, ರಾಜಾ ಪ್ರತ್ಯಕ್ಷ ದೇವತಾ: !"
“ಆ ಗ್ರಂಥದಲ್ಲಿ ಇಂಥದ್ದೆಲ್ಲ ಇದೆಯಾ ?”
“ಗೂಢಚಾರಿಕೆಗೆ ಯಾರನ್ನು ನೇಮಿಸಬೇಕು ಗೊತ್ತೆ ? ಬಡ ಬ್ರಾಹ್ಮಣರನ್ನು
ಮತ್ತು ವೇಶ್ಯೆಯರನ್ನು !"
“ಓದ್ತೇನೆ. ಇವತ್ತೇ ಶುರುಮಾಡ್ತೇನೆ."
"...ನಾವು ಜಲಕ್ರೀಡೆ ಆಡಿದರೂ ಮನಸ್ಸು ವಿಚಲಿತವಾಗಬಾರದು,
ತಿಳೀಯಿತೆ?"
ದಿನವೂ ಉಷೆ ಬರುವುದಕ್ಕೆ ಮುನ್ನ ಬಾಬಾ ಮತ್ತು ಸೌದಾ ಕೆಲ ನಿಮಿಷ ಜಲ
ಕ್ರೀಡೆಯಾಡಿದರು. ದಿನದಿಂದ ದಿನಕ್ಕೆ ನಿಮಿಷಗಳು ಹೆಚ್ಚಿದುವು. ಮೂರು ಹುಣ್ಣಿಮೆ
ಗಳು ಕಳೆದುವು. ಮಳೆಗಾಲ ದಾಟತು. ಶಮಿಾ ಪೂಜೆಯೂ ಆಯಿತು. ಘಳಿಗೆ
ಹೊತ್ತು ಜಲಕ್ರೀಡೆಯಾಡಿದರೂ ಇಂದ್ರಿಯಗಳೆಲ್ಲ ಪೂರ್ತಿ ತನ್ನ ಹತೋಟಿಯಲ್ಲಿರು
ವುದನ್ನು ಸೌದಾಮಿನಿ ಗಮನಿಸಿ, “ನಾನು ಗೆದ್ದೆ” ಎಂದು ಆನಂದಾಶ್ರು ಮಿಡಿದಳು.
'ಕಿಷ್ಕಿಂಧಾವಾಣಿ' ದಿನವೂ ಬರುತ್ತಿದ್ದುದರಿಂದ ಪ್ರತಿ ದಿವಸ ಕಿಪ್ಕಿಂಧೆಯ
ಭಾವಕೋಶವನ್ನು ಹೊಗುತ್ತಿದ್ದಳು, ಹೊರಬರುತ್ತಿದ್ದಳು, ತಾನು ಏರಿದ್ದ ಎತ್ತರ
ದಿಂದ ನೋಡಿದಾಗ ಕಿಷ್ಕಿಂಧೆಯ ಹೆಬ್ಬುಲಿಗಳ್ಳು ಬೆಕ್ಕುಗಳಂತೆ ಕಂಡುವು. ಗ್ರಂಥ
ಭಂಡಾರದಲ್ಲಿ ವ್ಯಾಸ೦ಗ ನಿರತಳಾಗಿ ಆಗಿ, ತನ್ನ ಬುದ್ಧಿ ವಿಕಾಸಗೊಂಡಂತೆ
ಸೌದಾಮಿನಿಗೆ ಆನಿಸಿತು.
ಬೆಳಕಿನ ಹಬ್ಬ ಹತ್ತಿರ ಬಂತು.
“ಚಾತುರ್ವನ್ಯ ರೂಪಿಸಿದ ಬುದ್ದಿ ವ೦ತರು ಯೋಚಿಸಿದ ಭಾರೀ ಹಬ್ಬ ದೀಪಾ
ವಳಿ. ನಮ್ಮ ಜನರು ಅದಕ್ಕೆ ಯವಾಗ ಆಕರ್ಷಿತರಾದರೋ ಖಚಿತವಾಗಿ ಹೇಳಲಾರೆ,