ಪುಟ:ಮಿಂಚು.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

42

ಮಿಂಚು

ಅವರು ನಮಗಿಂತ ಉತ್ತಮರು ಎಂಬ ದೀನತನ ನಮ್ಮವರನ್ನು ಕಾಡಿದ ಕ್ಷಣದಲ್ಲಿ
ನರಕಾಸುರನ ವಧೆಗೆ ನಾವು ಹೊರಟೆವು: ನಮ್ಮ ರುಂಡವನ್ನು ನಾವೇ ಚೆಂಡಾಡಿದೆವು.
ಈಗಲೋ ಬೆಳಕಿನ ಅಲಂಕಾರ ಎಲ್ಲರಿಗೂ ಬೇಕು.”
ಆ ಮಾತುಗಳನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತ ಸೌದಾಮಿನಿ ಬಾಬಾಜಿಯ
ಮುಖವನ್ನೆ ನೋಡಿದಳು.
“ನೆನಪಿಡು ಸೌದಾ, ದೀಪಾವಳಿಯ ರಾತ್ರಿ ರಕ್ತ ರಾತ್ರಿ.”
ಸಾಮಾನ್ಯರಿಗಾದರೆ ಚಳಿನಡುಕ ಹುಟ್ಟಬೇಕು. ಆದರೆ ಈಗ ಈಕೆ ಸಾಮಾನ್ಯೆ
ಯల్ల.
ಹಿರಿಯ ಯೋಗಿನಿಯನ್ನು ಸೌದಾ ಕೇಳಿದಳು :
“ರಕ್ತರಾತ್ರಿ ಅಂದರೇನು ?”
“ನಾನು ಹೇಳಬಾರದು, ನಿನಗೇ ಗೊತ್ತಾಗುತ್ತೆ.”
“ಇಲ್ಲಿಗೆ ಬಂದಾಗ ನನ್ನ ತಲೆಗೂದಲು ಅಲ್ಲೊಂದು ಇಲ್ಲೊಂದು ನರೆತಿತ್ತು.”
"ಈಗ ?"
“ಅವು ಕಪ್ಪಾಗಿವೆ, ಅಕ್ಪಾಜಿ..”
“ಲೇಹ್ಯದ ಪ್ರಭಾವ, ಕಪ್ಪಾದದ್ದು ಹಾಗೆಯೇ ಇರದೆ. ಉಳಿದ ಕೂದಲು
ಬಿಳಿಯಾಗೋದೆ ಇಲ್ಲ.”
ಹೌದಾ! ?- ಎ೦ದು ಸಂತೋಷದಿಂದ ಉಗ್ಗರಿಸುವ ಆಸೆ, ಆ ಅಸೆಯನ್ನು .
ಸೌದಾಮಿನಿ ಅದುಮಿಹಿಡಿದಳು.
ದೀಪಾವಳಿ ಹತ್ತಿರ ಬಂದಂತೆ, ಕಲ್ಪಿಸಲು ತಾನು ಅಶಕ್ತಳಾದ ರಕ್ತರಾತ್ರಿಯ
ನೆನಪಿನಿಂದ ಸೌದಾಮಿನಿಯ ಮೈ ಕಾವೇರಿತು.
ಆ ಇರುಳೆಲ್ಲ ಮಠ, ದೇಗುಲ, ಗೃಹ ಸಮುಚ್ಚಯ, ಮುಖಮಂಟಪ ಎಲ್ಲೆಲ್ಲೂ
ಬಣ್ಣಬಣ್ಣದ ದೀಪಗಳು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು, ಭಜನಾವಳಿ,
ಬಾಬಾ ದೇಗುಲದ ಹೊರಗಿದ್ದರು. ಸೌದಾಮಿನಿ ಅತ್ತ ನಡೆದು, “ಇಂದ್ರವ
ಅಮರಾಮತಿ ಇದನ್ನು ಮಿರಿಸೋದು ಸಾಧ್ಯವೆ ಬಾಬಾ?” ಎಂದಳು.
ಮುಗುಳುನಗೆಯೊಂದೇ ಬಾಬಾ ನೀಡಿದ ಉತ್ತರ.
ಅತಿಥಿಗೃಹದಾಚೆಗೆ ಒಂದು ಸುಸಜ್ಜಿತ ಕೊಠಡಿ ಇತ್ತು, ಅಲ್ಲಿದ್ದ ದೀಪಗಳು
ಆರಿದುವು. ಆ ದಿಕ್ಕಿಗೆ ಬಾಬಾ ನಡೆದರು, ಅದಮ್ಯ ಸೆಳೆತಕ್ಕೆ ಒಳಗಾದವಳಂತೆ
ಸೌದಾಮಿನಿ ಅವರನ್ನು ಹಿಂಬಾಲಿಸಿದಳು,
ವಿಗ್ರಹಕ್ಕೂ ಉಕ್ಕಿನ ಬಲ ಪಡೆದಿದ್ದವಳಿಗೂ ಸೆಣಸಾಟ, ಮುಂಗೋಳಿ
ಕೂಗುವವರೆಗೂ.
ಸೌದಾಮಿನಿ ಕುತೂಹಲದಿಂದ ತನ್ನ ಸೀರೆಯನ್ನು ನೋಡಿದಳು. 'ರಕ್ತರಾತ್ರಿ'
ಎಂದರೇನೆಂಬುದು ಸ್ಪಷ್ಟವಾಯಿತು,