ಪುಟ:ಮಿಂಚು.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

43

“ಪರೀಕ್ಷೆಯಲ್ಲಿ ಉತ್ತೀರ್ಣಳಾದೆನೆ ಬಾಬಾ ?”
“ರಾತ್ರೆ ಹೇಗೆ ಅನಿಸಿತು ?”
“ಅದು ಅಪೂರ್ವ ಅನುಭವ.”
“ನಿನಗೆ ಗೊತ್ತಾ ಸೌದಾ ? ಕಿಂಧೆಯ ಮೇಲೆ ದಂಡಯಾತ್ರೆ ನಡೆಸಲು
ನೀನೀಗ ಶಕ್ತಳಾಗಿದೀಯ,”
“ನನ್ನ ಬಾಬಾಜಿಗೆ ನಿರಾಸೆಯಾಗಲಿಲ್ಲವಲ್ಲ ಅಂತ ನಾನು ಸಂತುಷ್ಟೆ.”
“ಸಿದ್ಧತೆಗೆ ಒಂದೆರಡು ತಿಂಗಳು ಬೇಕು. ದಿಲ್ಲಿಯ ಜತೆ ಸಂಪರ್ಕ ಬೆಳೆಸ್ತೇನೆ.”
ಪತ್ರಿಕೆಗಳಿಂದ ಸೌದಾಮಿನಿ ಸಾಕಷ್ಟು ಅರ್ಥಮಾಡಿಕೊಂಡಿದ್ದಳು. ರಾಷ್ಟ್ರ ಪಕ್ಷದ
ಆಡಳಿತ ಶಿಥಿಲವಾಗಿತ್ತು. ಪಕ್ಷದ ಪ್ರಾದೇಶಿಕ ನಾಯಕತ್ವ ಅಂತಃಕಲಹದಲ್ಲಿ ಮಗ್ನ
ವಾಗಿತ್ತು. ತೇಪೆ ಹಾಕಲು ದಿಲ್ಲಿ ಯತ್ನಿಸಿತು, ಹೊಲಿಗೆ ನಾಲ್ಕು ದಿನ ಕೂಡ
ಬಾಳಲಿಲ್ಲ.
.....ವಿಶಾಖಪಟ್ಟಕ್ಕೆ ಬಂದ ರಾಷ್ಟಪಕ್ಷದ ಮಹಾ ಕಾರ್ಯದರ್ಶಿ ನಕುಲದೇವ್
ಧರ್ಮೇಂದರ್ ಬಾಬಾರನ್ನು ಕಾಣಲು ಆಗಮಿಸಿದರು.
“ಸಾರ್ವತ್ರಿಕ ಚುನಾವಣೆಗೆ ಇನ್ನು ಇದೇ ತಿಂಗಳು, ಲೋಕಸಭೆ ವಿಧಾನಸಭೆ
ಗಳಿಗೆ ಒಟ್ಟಿಗೇ ಚುನಾವಣೆ.”
ಮಠದಲ್ಲಿ ರಾಷ್ಟ್ರ ಪಕ್ಷದ ಗುಪ್ತನಿಧಿ ಇತ್ತು,
“ಪುಟ್ಟಗಂಟು ಯಾವಾಗ ಬೇಕು ?”
“ಕಿಷ್ಕಿಂಧೆಯ ವಿಷಯ ಬರೆದಿದ್ದಿರಲ್ಲ ? ಸೌದಾಮಿನಿ ಬರುವಂತಿದ್ದರೆ ಪುಟ್ಟ
ಗಂಟಿನೊಂದಿಗೆ ದಿಲ್ಲಿಗೆ ಕರಕೊಂಡು ಹೋಗ್ತೇನೆ.”
“ಜಾಣಪ್ಪನನ್ನು ನಂಬಿದರೆ ಕಿಷ್ಕಂಧ ಪಕ್ಷದ ಕೈ ಬಿಟ್ಟಿತು. ಸೌದಾಮಿನಿ ಸಿದ್ದ
ವಾಗಿದಾರೆ. ಅವರ ನೇತೃತ್ವದಲ್ಲೇ ಚುನಾವಣೆ ನಡೆಸೋದು ಶ್ರೇಯಸ್ಕರ.”
ಅಧ್ಯಕ್ಷರಿಗೂ ಪ್ರಧಾನಿಯವರಿಗೂ ಈ ವಿಷಯ ತಿಳಿಸ್ತೇನೆ.”
........ಸೌದಾಮಿನಿಯನ್ನು ನೋಡಿದ ಪ್ರಧಾನ ಕಾರ್ಯದರ್ಶಿ ದಂಗಾದರು.
ಬಾಬಾ ಹೇಳಿದ್ದರಲ್ಲಿ ಲವಲೇಶವೂ ಉತ್ಪಕ್ಷೆ ಇರಲಿಲ್ಲ.
ಅತಿಥಿಗೃಹಕ್ಕೆ ಬಂದು ಬಾಬಾಜಿ ಪಿಸು ನುಡಿದರು :
“ಈತ ಭಾರೀ ಕುಳ, ನಿನ್ನನ್ನು ಇಡಿಯ ನುಂಗಬಹುದು, ಹುಷಾರಾಗಿರು,
ಚಿಕಿತ್ಸೆ ದೊಡ್ಡ ಪ್ರಮಾಣದಲ್ಲಿ ಮುಗಿದರೂ ಯೋಗಾಸನ, ಲೇಹ್ಯಸೇವನೆ ಬಿಡಬೇಡ,”
“ಇಲ್ಲ, ಆರು ತಿಂಗಳಿಗೊಮ್ಮೆ ಲೇಹ್ಯ ದಯಪಾಲಿಸ್ಟೇಕು. ಯಾರನ್ನಾದರೂ
ಕಳಿಸ್ತೇನೆ”
“ಕಿಷ್ಕಿಂಧೆಯ ಮುಖ್ಯಮಂತ್ರಿಯಾದ ದಿನ ಫೋನ್ ಮಾಡೋದಕ್ಕೆ ಮರೀ
ಬೇಡ.”