ಪುಟ:ಮಿಂಚು.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೬೦ರಲ್ಲಿ, ಕಿಷ್ಕಿಂಧೆ ರಾಜ್ಯದಲ್ಲಿ, ಮಿಂಚು !

1955ರಲ್ಲಿ 'ಕೊನೇ ನಮಸ್ಕಾರ' ಎಂಬ ಕಾದಂಬರಿ ಬರೆದೆ. ಅದರ ನಾಯಿಕೆ ಅಸಾಮಾನ್ಯ ವ್ಯಕ್ತಿ. ಅವಳ ಕಥೆ ಅಲ್ಲಿಗೆ ಮುಗಿಯಿತು ಎನ್ನುವಂತಿರಲಿಲ್ಲ. 1960ರಲ್ಲಿ 'ತೊಟ್ಟಿಲು ತೂಗದ ಕೈ' ಎಂಬ ಕಾದಂಬರಿಯಲ್ಲಿ ಆಕೆ ಮತ್ತೆ ಕಾಣಿಸಿಕೊಂಡಳು. (ಅದೇ ವೇಳೆಯಲ್ಲಿ ಮಾನ್ಯ ಮಿತ್ರ ಪ್ರಾಧ್ಯಾಪಕ ಶ್ರೀ ಎಂ. ವಿ. ಸೀ. ಯವರು ಅದೇ ಹೆಸರಿನ ಒಂದು ನಾಟಕ ಬರೆದರು. “ಇಬ್ಬರಿಗೂ ಒಂದೇ ಶೀರ್ಷಿಕೆ ಹೊಳೆದದ್ದು ಸಾಹಿತ್ಯ ಪ್ರಪಂಚದ ಒಂದು ಸೋಜಿಗದ ವಿದ್ಯಾಮಾನ”-೧೫-೯-೧೯೮೭ರಲ್ಲಿ ಎಂ. ವಿ. ಸೀ. ಬರೆದ ಪತ್ರದಲ್ಲಿ)

'ನನ್ನ ........ ಕೈ' 'ಪ್ರಜಾಮತ' ಸಾಪ್ತಾಹಿಕದಲ್ಲಿ ಧಾರಾವಾಹಿಯಾಯಿತು. ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸಲೆಂದು ಒಬ್ಬ ಪ್ರಕಾಶಕರಿಗೆ ಕೊಟ್ಟೆ. ಅವರು ಹೇಳುವ ಪ್ರಕಾರ, ಬೆಂಕಿ ತಗಲಿ ಅದು ನಾಶವಾಯಿತು. 1960ರಲ್ಲಿ ಬರೆದುದನ್ನು ಪುನರ್ ಸೃಷ್ಟಿಸಿದರೆ ಹೇಗೆ ?-ಈ ವರ್ಷದ ಆಗಸ್ಟ್ ಸಪ್ಟೆಂಬರ್‌ಗಳಲ್ಲಿ ಆ ಪ್ರಯತ್ನ ಮಾಡಿದೆ. ಇಪ್ಪತ್ತೇಳು ವರ್ಷ ಹಿಂದೆ ರಚಿಸಿದ್ದರ ನೆನಪು ಎಷ್ಟೋ ಮಾಸಿತ್ತು. ಬರೆಯುತ್ತ ಬರೆಯುತ್ತ ತೀರಾ ಹೊಸದೇ ಎನ್ನಿಸು ವಂತಹ ಕೃತಿ ರೂಪು ತಳೆಯಿತು. 'ಮಿಂಚು !' ಎಂಬ ಬೇರೆಯೇ ಹೆಸರನ್ನಿಟ್ಟೆ.

'ತೊಟ್ಟಿಲು ತೂಗದ ಕೈ' ಯ ಮುದ್ರಿತ ಹಾಳೆಯೋ ಹಸ್ತಪ್ರತಿಯೋ ಮುಂದೆ ದೊರೆತರೆ ? ಕಾಲು ಶತಮಾನಕ್ಕೂ ಹೆಚ್ಚು ಕಾಲ ಕಳೆದ ಮೇಲೆ ಒಂದು ಕೃತಿಯನ್ನು ಪುನರ್ ಸೃಷ್ಟಿಸಿದರೆ ಹೇಗಿರುತ್ತದೆ ಎಂಬುದನ್ನು ಅಭ್ಯಸಿಸಲು, ಆ (ಕೃತಿಸ್ವಾಮ್ಯ : ಸೀಮಂತಿನೀ ನಿರಂಜನ) ಸಹಾಯಕವಾದೀತು.

'ಮಿಂಚು !' ವಿಲಂಬವಿಲ್ಲದೆ ಓದುಗರಿಗೆ ದೊರೆಯಲು ಕನ್ನಡದ ಹೆಸರಾಂತ ಪ್ರಕಟಣ ಸಂಸ್ಥೆ ಐಬಿಎಚ್ ಪ್ರಕಾಶನದ ಶ್ರೀ ಜಿ. ಕೆ. ಅನಂತರಾಮ್ ಕಾರಣರು. ಮುದ್ರಣದ ರೂವಾರಿ ಇಳಾ ಅಸೋಸಿಯೇಟ್ಸ್‌ನ ಶ್ರೀ ಎಂ.ಎಸ್.ರಾಮ ಮೋಹನ್. ಅವರಿಗೆ ನಾನು ಕೃತಜ್ಞ.

೧ ನವೆಂಬರ್ ೧೯೮೭

ನಿರಂಜನ

ಬೆಂಗಳೂರು