ಪುಟ:ಮಿಂಚು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

46

ಮಿಂಚು

ನಡೆಯೋದು ಇವರ ಹಿರಿತನದಲ್ಲೇ. ಯುವತಿ, ಇವರಿಗೇನು ಗೊತ್ತು ?_ ಅಂತ
ತಕರಾರು ತೆಗೆದರೆ, ತಲೆಗಳು ಉರುಳ್ತವೆ...”
ಇದೊಂದು ಹೊಸ ಅದ್ಭುತ ಎಂದು ಕಿಷ್ಟಿಂಧಾ ಹೀರೆಮಣಿಗಳು ಸುಮ್ಮ
ನಾದರು.
ಒಬ್ಬರೆಂದರು :
"ಊರಿಗೆ ಬಂದವಳು, ನೀರಿಗೆ ಬರದೆ ಇರುತಾಳಾ ?"
ಊರಿಗೂ ಬಂದಳು, ನೀರಿಗೂ ಬಂದಳು.
ಒoದು ಅಪರಾಹ್ನ ವಿಮಾನ ದಿಲ್ಲಿಯಿಂದ ಅವರನ್ನು ಹೊತ್ತು ತಂದಿತು-
ಜತೆಯಲ್ಲೆ ಇದ್ದರು, ಭಾರತದ ರಾಷ್ಟ್ರಪಕ್ಷದ ಮಹಾ ಕಾರ್ಯದರ್ಶಿ. ಕಿಷ್ಕಿಂಧೆಯ
ರಾಷ್ಟ್ರಪಕ್ಷಕ್ಕೆ ಇನ್ನು ಹೊಸ ನಾಯಕತ್ವವಂತೆ-ಎಂಬ ಸುದ್ದಿ ಪತ್ರಿಕೆಗಳಲ್ಲಿ ಬಂತು.
“ಇನ್ನು ಹೊಸ ರಕ್ತ ! ಬಿಸಿ ರಕ್ತ !” ಸೌದಾಮಿನಿ ಪತ್ರಿಕೆಗಳಲ್ಲಿ ತನ್ನ ಭಾವಚಿತ್ರ
ಗಳನ್ನು ನೋಡಿ ನೋಡಿ ದಣಿದಳು, ತಣಿದಳು.
__“ವಿನೋದನಿಗೀಗ ಹೇಗೆ ಅನಿಸುತ್ತಿದ್ದೀತು?"
__“ಮೃದುಲಾ ಮೂಗಿನ ಮೇಲೆ ಬೆರಳಿಟ್ಟಿರಬಹುದು.”
__“ಕರುಣಾ ತನ್ನ ಚಿತ್ರಗಳೊಡನೆ ನನ್ನದನ್ನು ಹೊಲಿಸಿರಬಹುದು."
__“ಬಾಬಾಜಿಗೆ ಸಮಾಧಾನವಾಗಿರ್‍ತದೆ.”
ಇವೆಲ್ಲ ಸೌದಾಮಿನಿಯ ಮನಸ್ಸಿನಲ್ಲಿ ಹಾದುಹೋದ ವಿಚಾರಗಳು.
ಪಕ್ಷದ ಕಾರ್ಯಾಲಯದಲ್ಲೇ ಒಂದು ಕೊಠಡಿ ಇತ್ತು ವಾಸಯೋಗ್ಯವಾದದ್ದು.
ಸೌದಾಮಿನಿ ಅಂದಳು :
“ನನಗಿದು ಸಾಕು, ನಾನಿಲ್ಲೇ ಇರ್‍ತೇನೆ."
ಸ್ಥಾನವನ್ನು ಬಿಟ್ಟು ಕೊಟ್ಟ ಪ್ರಾಂತಸಮಿತಿಯ ಅಧ್ಯಕ್ಷನಿಗೆ ಹೇಗೂ ಸ್ವಂತದ
ಮನೆ ಇತ್ತು. ಶಿಷ್ಟಾಚಾರದ ನಗೆ ಬೀರಿ ಆತನೆಂದ:
“ಊಟಕ್ಕೆಲ್ಲ ಅನುಕೂಲವಾಗಿರುತ್ತೆ. ನೀವು ನಮ್ಮ ಮನೆಗೆ ಬರಬಹುದಲ್ಲ."
“ಒಂದು ಸಣ್ಣ ಟಿಫಿನ್ ಕ್ಯಾರಿಯರ್ ಇದ್ದರಾಯ್ತು. ಇಪ್ಪತ್ತನಾಲ್ಕು ತಾಸು
ಗಳ ದುಡಿಮೆಗೆ ಇಂಥ ಆಶ್ರಮವಾಸವೇ ಅನುಕೂಲ.”
ಜಗದಲಪುರದಲ್ಲಿ ಆಗಲಿಲ್ಲ; ದಾರಿಯಲ್ಲಿ ಊಹು೦; ದಿಲ್ಲಿ_'ಇಲ್ಲ';
ಇಲ್ಲಿ ಬೀಳ್ಕೊಡುವುದಕ್ಕೆ ಮುನ್ನ ನೋಡಿಯೇ ಬಿಡುತ್ತೇನೆ__ಎಂದುಕೊಂಡಿದ್ದ
ಅಖಿಲ ಭಾರತ ರಾಷ್ಱ್ರಪಕ್ಷದ ಮಹಾ ಕಾರ್ಯದರ್ಶಿ. ದಿನ ರಾತ್ರೆಗಳು ಕಳೆದಂತೆ ಆತ
ಹತಾಶನಾದ. ಇಬ್ಬರೇ ಆಕ್ಕಪಕ್ಕದಲ್ಲಿ ಇದ್ದಾಗ ಭುಜಕ್ಕೆ ಭುಜ ತಗಲಿತು, ಮೊಣ
ಕಾಲಿಗೆ ಮೊಣಕಾಲು, ಮುತ್ತಿನಂತಹ ಮುಗುಳುನಗೆ.
“ದಿಲ್ಲಿಗೆ ಆಗಾಗ್ಗೆ ಬರ್‍ತಿರ್‍ತೇನಲ್ಲ” ಎಂದಳು ಆಕೆ,
“ಬರ್‍ತೀರಿ, ಸರ್ಪಗಾವಲಿನಲ್ಲಿರ್‍ತೀರಿ. ನಮ್ಮ ಪಕ್ಷದ ಅಧ್ಯಕ್ಷರಂತೂ ಎಂಥ