ಪುಟ:ಮಿಂಚು.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಿಂಚು

47

ಸಂಪ್ರದಾಯಸ್ಥ ಅನ್ನೋದು ನಿಮಗೆ ಗೊತ್ತಿದೆ. ಚುನಾವಣೆ ಮಗೀಲಿ, ನಿಮ್ಮನ್ನ
ಅಖಿಲ ಭಾರತ ರಾಷ್ಟ್ರಪಕ್ಷದ ಯುವವಿಭಾಗದ ನಾಯಿಕೆ ಮಾಡ್ತೀನಿ.”
ಕೊಚ್ಚಿಕೊಳ್ಳುವಷ್ಟು ಬಲಾಢ್ಯನಲ್ಲ ಎಂಬುದನ್ನು ಸೌದಾಮಿನಿ ಬಲ್ಲಳು.
ಅವಳ ಶಕ್ತಿಯ ಮೂಲ ದಂತೇಶ್ವರಿ ದೇಗುಲ, ಅಲ್ಲಿರುವ ನಿಧಿ, ಅಲ್ಲಿನ ಬಾಬಾ,
"ಈಗಲೇ ಮಹಿಳಾ ವಿಭಾಗದ ನಾಯಿಕೆ ಮಾಡೋದಿಲ್ವ ?”
ಒಂದು ಕ್ಷಣ ಮೌನವಾಗಿದ್ದು ಆತನೆಂದ:
“ನಿಮಗೆ ಅದು ಇಷ್ಟವೆಂದಾದರೆ ಆ ಸ್ಥಾನವನ್ನೇ ಕೊಡೋಣ."
ಕ್ಷಣ ಮೌನಕ್ಕೆ ಕಾರಣವಿತ್ತು, ಮಹಿಳಾ ವಿಭಾಗದ ನೇಮಕಕ್ಕೆಲ್ಲ ಇನ್ನೊಬ್ಬ
ಧುರೀಣ ಗುತ್ತೇದಾರನಾಗಿದ್ದ. ಅದನ್ನು ಅರಿತಿದ್ದ ಸೌದಾಮಿನಿ ಗಂಭೀರವಾಗಿ
ನಕ್ಕಳು.
“ಸದ್ಯಕ್ಕಂತೂ ಕಿಷ್ಕಿಂಧೇಲಿ ನನಗೆ ವಹಿಸಿಕೊಟ್ಟಿರೋ ಕೆಲಸ ಪೋರ್ತಿ
ಮಾಡ್ತೀನಿ.”
“ಈಗ ಪೀಡೆಯೇ ಹೊರಡು ದಿಲ್ಲಿಗೆ_ಎನ್ನುತ್ತೀರಾ?”
“ಅಣ್ಣ , ದಿಲ್ಲಿ ತಲಪಿದೊಡನೆ ಇನ್ನೂರು ಜೀಪು ಕಳಿಸೋದಕ್ಕೆ ಏರ್ಪಾಟು
ಮಾಡಿ. ಚುನಾವಣೆ ಲೆಕ್ಕದ್ದು .”
“ಸರಿ, ಪ್ರಚಾರಕಾರ್ಯ ಮುಗಿದ್ಕೂಡ್ಲೆ ಅವನ್ನು ಪಡೆಯೋದಕ್ಕೆ ಒಬ್ಬ
ನನ್ನ ಕಳಿಸ್ತೀನಿ."
“ಪರಿಚಯಕ್ಕೆ ಅವನಲ್ಲಿ ಮುದ್ರೆಯುಂಗುರ ಇರಲಿ!"
“ಇದೇನು ಬೋಳು ಬೆರಳು ? ಈಚೆಗೆ ಚಾಚಿ ಕೈ."
ಅಖಿಲ ಭಾರತ ರಾಷ್ಟ್ರಪಕ್ಷದ ಮಹಾ ಕಾರ್ಯದರ್ಶಿಯ ರತ್ನಖಚಿತ ಉಂಗುರ
ಕೋಮಲ ಬೆರಳಿಗೆ ಬಂತು.
'ಮಾಜಿ' ಕಿಷ್ಕಿಂಧೆಯ ಚಾಯಮಾನಕ್ಕೆ ಒಗ್ಗುವುದಿಲ್ಲವೆಂದು, 'ಅಕ್ಕಾವರು'
'ಅಮ್ಮಾವರು' ಕಳಪೆ ಎಂದು, ಸೌದಾಮಿನಿ 'ಮಾತಾಜಿ' ಆದಳು. ಪಕ್ಷದ ಕಾರ್ಯಾ
ಲಯದ ಸಿಬ್ಬಂದಿ, ಸ್ವಯಂಸೇವಕರು, ಹಿರಿ_ಕಿರಿ_ಮರಿ ಧುರೀಣರು, ಜಿಲ್ಲೆಗಳಿಂದ
ಬಂದ ಸಂದರ್ಶಕರು ಎಲ್ಲರೂ ಹೊಸ ನಾಯಿಕೆಯನ್ನು 'ಮಾತಾಜಿ' ಎಂದು ಕರೆದರು.
ಸೌದಾಮಿನಿ ಧರ್ಮಪೀಠಕ್ಕೆ ಹೋಗಿ, ಬಹಳ ಸೊರಗಿದ್ದ ಯತಿಗೆ ನಮಿಸಿದಳು.
ಆಕೆಗೆ ಶುಭ ಹಾರೈಸಿ ಆತ ಅಂದರು :
“ನನಗೆ ಉತ್ಕಲದಲ್ಲಿರುವ ಮಠಕ್ಕೆ ವರ್ಗವಾಗಿದೆ. ಇಲ್ಲಿಗೆ ಚೆನ್ನೈಯವರು
ಬರ್ತಾರೆ."