ಪುಟ:ಮಿಂಚು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

49

ಕಲ್ಲು ಬಂಡೆಗಳು ಬಂದಾಗ ಕುಪ್ಪಳಿಸಿದಳು, ಪ್ರಪಾತ ದೊರೆತಾಗ ಜಲಪಾತವಾದಳು.
ಎಂಥ ಕರತಾಡನ ! ಎಂಥ ಜಯಕಾರ !
ಬಯಲಿನ ಅಂಚಿನಲ್ಲಿ ಕಾರುಗಳಲ್ಲಿ ಕುಳಿತು ಭಾಷಣ ಕೇಳಿದವರಲ್ಲಿ ಸುಲೋಚನಾ
ಬಾಯಿಯೂ ಇದ್ದಳು, ಅನಾಥ ಬಾಲಕಾಶ್ರಮದ ಸಂಚಾಲಿಕೆ, ಹೊಸ ತಾರೆ
ಯನ್ನು ಕುರಿತ ಕಿಂವದಂತಿ ಅವಳಿಗೂ ಮುಟ್ಟಿತ್ತು. ಮಗ್ಗುಲಲ್ಲಿದ್ದವಳಿಗೆ ಆಕೆ
ಹೇಳಿದಳು :
“ಸಾಧ್ಯವೇ ಇಲ್ಲ: ಯಾವ ಹೋಲಿಕೆಯೂ ಇಲ್ಲ. ಈಕೆ ಜನ್ಮತಃ ನಾಯಿಕ,
ಮಾತಾಜಿಯೇ ಸರಿ,” |
ಈ ಸಭೆಯ ಬಳಿಕ ರಾಷ್ಟ್ರ ಪಕ್ಷದ ಸದಸ್ಯತ್ವ ಹೆಚ್ಚಿತು. ನಾಯಕರಿಗೀಗ
ಪ್ರತಿಷ್ಠೆಯ ಪ್ರಶ್ನೆ,
ಸುಮುಹೂರ್ತದಲ್ಲಿ ತಮ್ಮದೇ ಆದ ಪ್ರಜಾಪಕ್ಷವನ್ನು ಆರಂಭಿಸಿದರು,
"ಅವಸರವಿಲ್ಲ. ಚುನಾವಣೆಗೆ ಟಿಕೆಟು ಕೊಡುವ ಸಮಯ ಬರಲಿ, ನನ್ನ ಪಕ್ಷದ
ಮುಂದೆ ಹೌಸ್‌ಫುಲ್ ಬೋರ್ಡ್ ಹಾಕಬೇಕಾದೀತು” ಎಂದು ಭಕ್ತರ ಎದುರು
ನಾಯಕರು ಶಂಖ ಊದಿದರು.
ಪತ್ರಿಕೆಗಳನ್ನು ಕೊಳ್ಳುವವರ, ಓದುವವರ ಸಂಖ್ಯೆ ಹೆಚ್ಚಿತು.
ರಾಷ್ಟ್ರಪಕ್ಷ-ಪ್ರಜಾಪಕ್ಷಗಳ ಜಗಳದಿಂದ ಪ್ರಯೋಜನವಾಗುವುದು ತನಗೆ
ಎಂದಿತು ಸಮತಾಪಕ್ಷ: ನೋಟೀಸು ಕೊಟ್ಟು ಮುಷ್ಕರ, ದಿಢೀರ್ ಮುಷ್ಕರ...
ಪಕ್ಷದ ಕಾರಕರ್ತರನ್ನು ಕ್ರಿಯಾಶೀಲರನ್ನಾಗಿ ಮಾಡಲು ಈ ತಂತ್ರ ಅಗತ್ಯವಾಗಿತ್ತು:
ಉತ್ತರದಲ್ಲಿ ಹಾಸನೂರು, ಪೂರ್ವದಲ್ಲಿ ಚಿನ್ನದ ಬಯಲು, ಇವೆರಡರ ನಡುವೆ
ಧರ್ಮಪುರಿ-ಈ ಮೂರು ಕ್ಷೇತ್ರಗಳು ತನ್ನ ವಶವಾಗಬೇಕೆಂದು ಸಮತಾಪಕ್ಷ ಸಮರ
ತಂತ್ರ ರೂಪಿಸಿತು: ಒಂದು ಓಟು, ಒಂದು (ರೂಪಾಯಿ ನೋಟು-ಇದು ಸಮತಾ
ಪಕ್ಷದ ಘೋಷ: ಉದ್ದಿಮೆದಾರರು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಯೊಂದರ
ಬಲಕ್ಕೆ ಅನುಗುಣವಾಗಿ ಹಣ ನೀಡಿದರು. ಅದು ಕಪ್ಪು ಹಣ ಎಂದು ಯಾರೂ
ಬೇಸರಿಸಲಿಲ್ಲ.
ರಾಷ್ಟ್ರ ಪಕ್ಷದ ಕಾರ್ಯಾಲಯದಲ್ಲಿ ಚತುರಮತಿಗಳಿದ್ದರು: ಅನುಭವಿ ವೃದ್ದ
ರಿದ್ದರು: ಉತ್ಸಾಹೀ ಯುವಕರಿದ್ದರು. ಕಳೆದದ್ದೆಷ್ಟು, ಉಳಿದದ್ದೆಷ್ಟು ಎಂದು
ಲೆಕ್ಕ ಹಾಕುವ ನಡುವಯಸ್ಸಿನವರಿದ್ದರು: ಒಬ್ಬಾತಪರಶುರಾಮ-ಬೇರೆ ಯಾರೂ
ಇಲ್ಲದಿದ್ದಾಗ ಸೌದಾಮಿನಿಯನ್ನು ಸಮಿಾಪಿಸಿ ಅಂದ ;
“ಮಾತಾಜಿ, ಒಂದು ವಿಷಯ ತಮ್ಮ ಗಮನಕ್ಕೆ ಬಂದಿದೆಯೊ ಇಲ್ಲವೊ ?”
“ಯಾವುದು ಪರಶುರಾಮ್ ?”
“ತಮ್ಮ ಮತ ಕ್ಷೇತ್ರ ಯಾವುದು ?”
4