ಪುಟ:ಮಿಂಚು.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

52

ಮಿಂಚು

ಏಳು ರಾತ್ರಿಗಳ ವರದಿಯೂ ಇದೇ. ನಾಯಕರು ಯೋಚಿಸಿದರು : 'ಇದನ್ನು
ನಂಬಲೆ ?'
ಸುಳ್ಳೇನಾದರೂ ಬರೆದಿದ್ದ ಎಂದರೆ, ಎಂ.ಎಲ್.ಎ. ಆಗಲು ಲಾಯಕ್ಕು. ನಿಜ
ವೆಂದಾದರೆ, ಅವಳು ಯಾರೋ ಬೇರೆಯೇ. ಹಿಮಾಲಯದಲ್ಲಿ ತಪಸ್ಸು ಮಾಡಿ
ಬಂದಿರೋ ಸನ್ಯಾಸಿನಿ,
ಆಗಲಿ, ಹೋಗು.”
ಅವನು ಹೋಗಲಿಲ್ಲ.
ನಾಯಕರು ಐದರ ಇಪ್ಪತ್ತು ನೋಟು ಕೊಟ್ಟರು.
“ಟಿಕೆಟ್ಟು ?”
"ಇನ್ನೂ ಸಮಯವಿದೆ. ಅಲ್ಲಿ ಏನಾದರೂ ವಿಶೇಷವಿದ್ದಾಗ ಬಂದು ಹೇಳು.
ನೀನು ಇಲ್ಲಿಗೆ ಬರೋದು ಹೋಗೋದು ಯಾರಿಗೂ ಗೊತ್ತಾಗಬಾರದು.”
“ಊಟ ಆಗಿಲ್ಲ.”
“ಓಡು ಮನೆಗೆ, ಒಂದು ವಾರವಾಯ್ತು, ನಿನ್ನ ತಾಯಿ ತಂದೆ ತಮ್ಮ ಕುಮಾರ
ಕಂಠೀರವನ ಮುಖ ನೋಡಿ.”
....ಸೌದಾಮಿನಿಗೆ ಕೆಲವು ಖಚಿತ ಅಭಿಪ್ರಾಯಗಳಿದ್ದುವು.
“ಒಂದು ಹಾಡಿಗೆ ಸಮ ಹತ್ತು ಭಾಷಣ.”
"ಒಂದು ನಾಟಕಕ್ಕೆ ಸಮಾನ ನೂರು ಹಾಡು.”
ಅವಳು ಕರೆ ನೀಡಿದಳು, ಕಿಷ್ಕಿಂದೆಯ ಯುವ ನಾಟಕಕಾರಿಗೆ, ಕಲಾವಿದರಿಗೆ
ಚಿತ್ರಕಾರರು ಬಂದರು, ಭಿತ್ತಿಚಿತ್ರಗಳು-ಬ್ಯಾನರುಗಳ ರಚನೆಗೆ, ಬ್ಯಾಡ್ಜುಗಳನ್ನು
ಹೊಲಿಯಲು ದರ್ಜಿಗಳು ಅಲ್ಲಿ ನೆರೆದರು, ಚುರುಕು ಲೇಖನಿಯ ಬರೆಹಗಾರರು
ಆಗಮಿಸಿದರು, ಅಗೋಚರ ಸಾಧನೆಗಳನ್ನು ಬಣ್ಣಿಸಿ ಬರೆಯಲು ; ಮನಸ್ಸನ್ನು
ಸೂರೆಗೊಳ್ಳುವ ಘೋಷವಾಕ್ಯಗಳನ್ನು ರೂಪಿಸಲು
ಅವರನ್ನು ಉದ್ದೇಶಿಸಿ ಸೌದಾಮಿನಿ ಅಂದಳು.
ರಾಷ್ಟಪಕ್ಷದ ಗುರಿ ಆರ್ತರ ಕಣ್ಣುಗಳಿಂದ ಕಂಬನಿ ಒರೆಸುವುದು, ನಮ್ಮ
ಮತದಾರರಲ್ಲಿ ಹೆಚ್ಚಿನವರು ಗ್ರಾಮೀಣ ಜನ ಮತ್ತು ಪಟ್ಟಣದ ದರಿದ್ರರು, ನರ್ತನ
ಗಾಯನ ಇದ್ದರೆ ಮಾತ್ರ ಅವರ ಹೃದಯದ ತಂತಿ ಮೀಟಬಹುದು.”
“ಹೌದು ಮಾತಾಜಿ.”
ಎಲ್ಲರೂ “ಹೌದು, ಹೌದು” ಎಂದು ಗೋಣು ಆಡಿಸುವವರೇ.
“ಕಿಷ್ಕಿಂದೆಯ ಮೂರು ವಲಯಗಳಿಗೆ ಸ್ಪೆಷಲ್ ವ್ಯಾನುಗಳು, ಬಜೆಟ್ ಸಿದ್ದ
ಪಡಿಸಿ.”
ಈ ಸುದ್ದಿ ತಿಳಿದ ನಾಯಕರು ಅಧೀರರಾದರು.
ತಮ್ಮ ಪಕ್ಷದ ಪ್ರಮುಖರೊಡನೆ ಆಪ್ಯಾಲೋಚನೆ ನಡೆಸಿದರು. ಅವರಲ್ಲಿ