ಪುಟ:ಮಿಂಚು.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

ಮಿಂಚು

53

ಒಬ್ಬಿಬ್ಬರ ಬಂಧುಗಳು ಚಲನಚಿತ್ರೋದ್ಯಮದಲ್ಲಿದ್ದರು. ಪ್ರಚಾರದ ಕೊನೆಯ
ವಾರದಲ್ಲಿ ಪರಿಚಿತ ನಟ ನಟಿಯರನ್ನೆಲ್ಲ ಆಖಾಡಕ್ಕಿಳಿಸಬೇಕು ; ಅಷ್ಟರ ತನಕ ಈ
ಸುದ್ದಿ ಬಹಿರಂಗವಾಗಬಾರದು ಎಂದು ತೀರ್ಮಾನ ಕೈಗೊಂಡರು.
ಆದರೆ ಮುಂದಿನ ಭಾನುವಾರವೇ 'ಕಿಷ್ಕಿಂಧಾವಾಣಿ'ಯ ಇಡೀ ಪುಟದಲ್ಲಿ
ಕನ್ನಡದ ಪ್ರಮುಖ ತಾರಾಜೋಡಿಯ ಕರೆ ಬಂತು :
“ನೆನಪಿರಲಿ, ರಾಷ್ಟ್ರಪಕ್ಷಕ್ಕೆ ನಿಮ್ಮ ಘನಮತ,”
"ಅದೇ ಪುಟದಲ್ಲಿ ಸೌದಾಮಿನಿಯ ಭಾವಚಿತ್ರವೂ ಇತ್ತು. ಅದು ಆ ವೇಳೆ
ಗಾಗಲೇ ಕಿಷ್ಕಿಂದೆಯ ಸಾಕ್ಷರರಿಗೆ ಪರಿಚಿತವಾಗಿದ್ದ ಸುಂದರವದನ,
ಊರುಗಳಲ್ಲಿ ಗೋಡೆಗಳಿಂದಲೂ ಮರಗಳಿಂದಲೂ ಸೌದಾಮಿನಿ ಮೋಹಕ ನಗೆ
ಬೀರಿದಳು.
ಸಮತಾ ಪಕ್ಷ ಆರು ಕ್ಷೇತ್ರಗಳಲ್ಲಿ ಹೋರಾಡಲು ನಿರ್ಧರಿಸಿತು. ಮೂರರಲ್ಲಿ
ಗೆಲ್ಲಬಹುದು. ಅಂದರೆ ಅರ್ಧಾಂಶ ಜಯಿಸಿದಂತಾಯಿತಲ್ಲ ! ಅವರ ಪುಟ್ಟ ಕಲಾತಂಡ
ಹಗಲಿರುಳೆನ್ನದೆ ದುಡಿಯಿತು.
“ನಮ್ಮೂರಿಗೆ ಬನ್ನಿ, ನಮ್ಮಲ್ಲಿಗೆ ಬನ್ನಿ.”
-ಹೀಗೆ ಕರೆ, ಮೊರ ಬಂದುವು ಉಮೇದುವಾರರ ಪಟ್ಟಿ ಪ್ರಕಟವಾದೊಡನೆ.
ನಿಷ್ಣಾತರು ಸೌದಾಮಿನಿಯ ಪ್ರಚಾರ ಪ್ರವಾಸದ ನೀಲಿನಕಾಶೆ ರೂಪಿಸಿದರು.
ನಾಯಕರು ರಂಗಸ್ವಾಮಿಯನ್ನು ಒಂದು ರಾತ್ರಿ ಕಂಡರು.
“ಅಯ್ಯಾ ಹಳೆಯ ಗೆಳೆಯರೇ! ರಾಷ್ಟ್ರಪಕ್ಷ ಗೆದ್ದರೆ ನಿಮಗೆ ಸಚಿವಸ್ಥಾನ ಭದ್ರ
ಅಂತ ತಿಳಕೊಬೇಡಿ."
“ಸೌದಾಮಿನಿಯವರಿಗೂ ನನಗೂ ಯಾವ ಜಗಳವೂ ಇಲ್ಲ. ಅವರು ರಾಷ್ಟ್ರ
ಪಕ್ಷಕ್ಕೆ ಜೀವ ತುಂಬಿದಾರೆ,”
“ಬೇಡಿ ರಂಗಸ್ವಾಮಿ, ಪ್ರಜಾಪಕ್ಷಕ್ಕೆ ಬನ್ನಿ, ಒಟ್ಟಿಗೆ ಹೋರಾಡಿ ಗೆದ್ದು
ಬರೋಣ. ನಿಮ್ಮನ್ನೇ ಮುಖ್ಯಮಂತ್ರಿ ಮಾಡ್ತೀನಿ. ಟಿಕೆಟ್ ಟಿಕೆಟ್ ಅಂತ ಹೇಗೆ
ಜನ ಕ್ಯೂ ನಿಂತಿದ್ದಾರೆ ಗೊತ್ತ ? ನಾಳೆ ಅವರನ್ನೆಲ್ಲ ಸ್ವಾಗತಿಸಬೇಕು.”
“ಕ್ಷಮಿಸಿ ನಾಯಕರೇ, ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದೂ ದುಡಿದೂ ಆಯಾಸ
ವಾಗಿದೆ, ಈ ಸಲದ್ದು ಅಂತಿಮ ಸಮರ. ಇದಾದ ಮೇಲೆ ಶಸ್ತತ್ಯಾಗ ಮಾಡ್ತೇನೆ.”
“ಎಲ್ಲಾ ತ್ಯಜಿಸಿ ಸನ್ಯಾಸಿಯಾಗೋಡಿ ! ಆ ಸೌದಾಮಿನಿ ಯೋಗಾಸನ ಜಾತಿ
ಯವಳಂತ, ರೂಪದಲ್ಲಿ ಅವಳನ್ನು ಮೀರಿಸುವ ಯುವತಿಯರು ಪ್ರಜಾಪಕ್ಷದಲ್ಲಿ
ದ್ದಾರೆ.”