ಪುಟ:ಮಿಂಚು.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

54

ಮಿಂಚು

ರಂಗಸ್ವಾಮಿ ನಕ್ಕರು. “ಗುಡ್‌ನೈಟ್" ಎಂದು ಕತ್ತಲಲ್ಲಿ ಕರಗಿದರು,
ಜಾಣಪ್ಪ ಸೌದಾಮಿನಿಯನ್ನು ಕರೆದು ತಮ್ಮ ಮೆಚ್ಚುಗೆ ಸೂಚಿಸಿದರು.
ಮುಪ್ಪಿನಲ್ಲಿ ಜಾಣಪ್ಪ ಫೇಲಾದ ಅಂತ ಯಾರೂ ಹೇಳೋ ಹಾಗಿಲ್ಲ. ರಾಜ್ಯದ
ಬಹ್ವಂಶ ವಕೀಲರು ಗೆಲ್ಲುವ ಪಕ್ಷದ ಬೆಂಬಲಿಗರು ನಾಮಪತ್ರ ಸಲ್ಲಿಕೆ ಇತ್ಯಾದಿ
ಸೂಕ್ಷ್ಮ ಕೆಲಸಗಳಿಗೆ ಅವರನ್ನು ಸೇರಿಸಿಕೊಳ್ಳಿ.”
“ಆ ಕೆಲಸ ನಿನ್ನೆಯಷ್ಟೆ ಮುಗಿಯಿತು.”
“ಭೇಷ್ ! ಪೋಲೀಸ್ ಸಿಬ್ಬಂದಿಗೂ ಮತಗಟ್ಟೆ ದುಡಿಮೆಯ ಉಪಾಧ್ಯಾಯ
ಸಮುದಾಯಕ್ಕೂ ಆದೇಶ ಹೋಗದೆ. ಮತದಾರರಿಗೆ ಕುರುಕೋದಕ್ಕೆ ಗಂಟಲು
ಸೇವೆ ಮಾಡಿಕೊಳ್ಳೋದಕ್ಕೆ”
“ಅದಕ್ಕೊಸ್ಕರ ವಿಶೇಷ ಘಟಕ ರಚಿಸಿದ್ದೇನೆ.”
“ಕೆಲಸ ಇನ್ನೇನೂ ಬಾಕಿ ಇಲ್ಲ..... ಹಣ?”
ಇನ್ನು ಒಂದು ಕೋಟಿ ಬೇಕಾಗಬಹುದು.”
“ಏನು ಮಾಡ್ತೀರಿ ?”
“ನಾಳೆ ಒಬ್ಬರು ಬಾರೆ, ಅರ್ಧ ತಾರೆ, ಉಳಿದದ್ದನ್ನು ಇನ್ನು ಆರು
ದಿನಗಳಲ್ಲಿ ನಾವೇ ಸಂಗ್ರಹಿಸಬೇಕು.”
“ಆಗಲಿ, ಏರ್ಪಾಟು ಮಾಡೇನೆ.... ಅಂದ ಹಾಗೆ ಬಂಡಾಯ ಅಭ್ಯರ್ಥಿ
ಗಳಿದ್ದರೆ ?”
“ನಮ್ಮ ನಿರ್ಧಾರದಲ್ಲಿ ಬದಲಾವಣೆಯಿಲ್ಲ, ಪಕ್ಷೇತರರ ಸಂಖ್ಯೆ ಹೆಚ್ಚಲಿ,
ಇಡುಗಂಟು ಕಳಕೊಳ್ತಾರೆ.”
“ನಿಮ್ಮ ಎದೆಗಾರಿಕೆಗೆ ಮೆಚ್ಚಿದೆ, ಮಾತಾಜಿ.”
“ಎಲ್ಲ ನಿಮ್ಮ ಆಶೀರ್ವಾದ, ಜಾಣಪ್ಪಾಜಿ,”
ಅಷ್ಟಾದರೂ ಹೇಳಿದಳಲ್ಲ ಎಂದು ಮುಖ್ಯಮಂತ್ರಿಗೆ ಸಮಾಧಾನ ಒಳ
ಗಿಂದೊಳಗೆ, 'ನಾನು ಜಾಣಪ್ಪಾಜಿಯಲ್ಲ, ಕೋಣಪ್ಪಾಜಿ' ಎಂದು ತನ್ನ ಮೇಲೆಯೇ
ಸಿಟ್ಟುಗೊಂಡರು,
“ಚುನಾವಣೆ ಎಂದರೆ ಮಧ್ಯಮ ವರ್ಗದವರಿಗೆ ಅಸಡ್ಡೆ : ಬುದ್ದಿ ಜೀವಿಗಳಿಗೆ
ತಾತ್ಸಾರ”
ಈ ಮಾತನ್ನು ದಿಲ್ಲಿಯಲ್ಲಿ ಹಿರಿಯ ಮುತ್ಸದ್ದಿಗಳ ಬಾಯಿಯಿಂದ ಹಲವು
ಸಾರಿ ಸೌದಾಮಿನಿ ಕೇಳಿದ್ದಳು. ಇವರದು ಅಲ್ಪ ಸಂಖ್ಯೆ. ಆದರೆ ತಕ್ಕಡಿಯನ್ನು
ವಾಲಿಸಲು ಸಣ್ಣ ಸಂಖ್ಯೆಯೂ ಸಾಕು, ಅಲ್ಲವೆ ?