ಪುಟ:ಮಿಂಚು.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

56

ಧರ್ಮೇಂದರ್ ಬಾಬಾರ ಮಠದಲ್ಲಿ ಫೋನ್ ಬಾರಿಸಿತು,
ಬಾಬಾ ರಿಸೀವರ್ ಎತ್ತಿದರು. 'ಹಲೋ' ಎನ್ನಲಿಲ್ಲ, ಆ ಪದವನ್ನು ಅವರು
ಬಳಸಿದವರೇ ಅಲ್ಲ.
ಇದು ಮಿಂಚಿನ ಕರೆ, ಸ್ವರ ಸ್ಪಷ್ಟವಾಗಿತ್ತು.
“ಪ್ರಣಾಮ ಬಾಬಾ, ಫಲಿತಾಂಶ ಪ್ರಕಟಣೆ ಮುಗೀತಾ ಬಂತು, ಇನ್ನು
ಕೆಲ ಕ್ಷೇತ್ರಗಳ ಎಣಿಕೆ ಮಾತ್ರ ಬಾಕಿ ಇದೆ. ಸೂರ್ಯೋದಯದ ಹೊತ್ತಿಗೆ ಅಂತಿಮ
ಚಿತ್ರ ದೊರೆತೀತು.”
“ನಿನ್ನ ದಂಡು ಮುಂದಿದೆ ಅನ್ನೋ ಸುದ್ದಿ ಮಧ್ಯಾಹ್ನವೇ ಬಂದಿತ್ತು ದಿಲ್ಲಿ
ಯಿಂದ.”
“ಅದು ವಾರ್ತಾ ಸಂಸ್ಥೆಗಳ ಸೇವೆ. ಮೂರನೇ ಎರಡಂಶ ನಮ್ಮ ಪಕ್ಷಕ್ಕೆ
ಸಿಗ್ತದೆ ಅನ್ತಿದಾರೆ.”
“ಆಗಲಿ ಮಗೂ, ಮುಂದಿನ ಕ್ರಮದ ಬಗ್ಗೆ ದಿಲ್ಲಿ ಧುರೀಣನಿಗೆ ಆಗಲೇ ಸೂಚನೆ
ಕೊಟ್ಟಿದ್ದೇನೆ, ಇಗೋ, ಮುಂಚಿತವಾಗಿಯೇ ಅಭಿನಂದನೆ !”
ರಿಸೀವರ್ ಇಟ್ಟ ಸದ್ದು ಕೇಳಿಸಿತು.
ಯಾವುದಕ್ಕೆ ಅಭಿನಂದನೆ ? ಚುನಾವಣೆಯಲ್ಲಿ ಸಾಧಿಸಿದ ವಿಜಯಕ್ಕೆ ?
ಅಥವಾ, ಇನ್ನೆರಡು ದಿನಗಳಲ್ಲಿ ಸಾಧ್ಯವಿರುವ...
ಸೌದಾಮಿನಿಯ ಕಂಕುಳು ಒದ್ದೆಯಾಯಿತು, ಮುಖ ರಂಗೇರತೊಡಗಿತು.
ಶ್ರೀ ಕ್ಷೇತ್ರದಲ್ಲಿ ಅವಳು ಗೆದ್ದಿದ್ದಳು. ಅಲ್ಲಿ ಭಾರೀ ಸೋಲು ಅನುಭವಿಸಿದವರು
ಪ್ರಜಾ ಮತ್ತು ಸಮತಾ ಪಕ್ಷಗಳ ಮಹಿಳಾ ಸ್ಪರ್ಧಿಗಳು ; ಕಣಕ್ಕಿಳಿದ ಎಂಟು ಜನ
'ಧೈರ್ಯಶಾಲಿ' ಯುವಕರು, ಸ್ವತಂತ್ರರು. ಎಲ್ಲರೂ ಠೇವಣಿ ಕಳೆದುಕೊಂಡಿ
ದ್ದರು, ಫೋನ್ ಮೂಲಕ ಈ ವಾರ್ತೆ ಬಂದೊಡನೆ ಕಾದ್ಯಾಲಯದ ಛಾವಣಿ
ಹಾರುವಷ್ಟು ಜೋರಾಗಿ ಜಯಘೋಷವಾಯಿತು :
“ಸೌದಾಮಿನಿ ಮಾತಾಜಿ ಜಿಂದಾಬಾದ್ !”
ಅದರದೇ ಪುನುರುಚ್ಚಾರ ಹಲವು ಸಲ.