ಪುಟ:ಮಿಂಚು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

58

ಮಿಂಚು

ಸೌದಾಮಿನಿಗೆ ತಿಳಿಯದೆ ? ತಾನು ಕೇಂದ್ರಬಿಂದುವೆಂದು ಭಾವಿಸಿಯೇ ಮೆರ
ವಣಿಗೆಯನ್ನು ಅವಳು ಯೋಜಿಸಿದ್ದಳು.
ಅಲ್ಲಿ ಕೆಲ ನಿಮಿಷಗಳಲ್ಲಿ ನಡೆದುದು ಜಾಣಪ್ಪನವರ ಕಿವಿಗೆ ಬಿತ್ತು. ಒಂದರ್ಧ
ಗಂಟೆಯಲ್ಲಿ, ಅವರ ಕಟ್ಟಾ ಅನುಯಾಯಿಗಳ ಕೃಪೆಯಿಂದ. ಹಾಗಾಗಬಹುದೆಂದು
ಸೌದಾಮಿನಿ ನಿರೀಕ್ಷಿಸಿದ್ದಳು. ಮುಖ್ಯಮಂತ್ರಿ ಫೋನ್ ಮಾಡಬಹುದು ಎಂದು
ಕಾದಳು. ಬರಲಿಲ್ಲ.
ನಡೆದುದಿಷ್ಟು : ವಿವರ ತಿಳಿದಾಗ, ಮನಸ್ಸಿನಲ್ಲೇ ಗೊಣಗುತ್ತ ಅವಳನ್ನು
ಜಾಲಾಡಿಸಿದರು. ಆದರೆ, 'ಮೆರವಣಿಗೆಗೆ ಬರೋದಿಲ್ಲ' ಎನ್ನಲಿಲ್ಲ. 'ದುಡಿದಿದಾಳೆ.
ಜೀಪ್‌ನಲ್ಲಿ ಕೂತೊಳ್ಳಿ, ಪಾಪ !' ಎಂದರು ಗಟ್ಟಿಯಾಗಿ, ಸಮಸ್ಯೆಯ ಅಲಗು
ಮೊಂಡಾಯಿತು.
ಮೆರವಣಿಗೆಯ ಚೂಪ ಕಿಂಧಾ ರಾಜೇಶ್ವರಿಯ ವರ್ಣಚಿತ್ರ. ಜೊತೆಯಲ್ಲಿ
ಬಾಜಾ ಬಜಂತ್ರಿ, ಅವರ ಹಿಂದೆ ಸೇವಾದಳದವರ ಲೆಫ್ಟ್ ರೈಟ್ ನಡಿಗೆ, ಜಾನಪದ
ನೃತ್ಯ, ಕಾರುಗಳು ನೂರು, ಪ್ರಮುಖರ ಪಾದಯಾತ್ರೆ, ಕಲಾಬಳಗದ ವ್ಯಾನುಗಳು.
ಶ್ರೀಸಾಮಾನ್ಯರು, ಕಣ್ಣು ಕುಕ್ಕುವ ಬೆಳಕಿನ ಸರಮಾಲೆ ಎಡದಲ್ಲೂ ಬಲದಲ್ಲೂ,
ಜೀಪಿಗೆ ವಿಶೇಷ ದೀಪಾಲಂಕಾರ,
ಮುಖ್ಯಮಂತ್ರಿಯೂ ಹಲವಾರು ಮುಖಂಡರೂ ಬಂದರು.
'ಜ್ವರ, ಗಾಬರಿಗೆ ಕಾರಣವಿಲ್ಲ: ಆದರೆ ಮರವಣಿಗೆಯ ಶ್ರಮ ಬೇಡ ಎಂದಿ
ದ್ದಾರೆ ಡಾಕ್ಟರು' ಎಂಬ ಚೀಟಿ ಬಂತು ರಂಗಸ್ವಾಮಿಯವರಿಂದ,
ತಿಂಡಿತಿನಿಸು ಭಾಷಣ ಮುಗಿದು, ಸುಡುಮದ್ದುಗಳ ಪೀಠಿಕೆಯೊಂದಿಗೆ
ಮೆರವಣಿಗೆ,
ಜಾಣಪ್ಪನವರೇ ಅಂದರು :
“ಎಲ್ಲಿ ಸೌದಾಮಿನಿ ದೇವಿ ? ಕರಕೊಂಡು ಬನ್ನಿ, ಜೀಪ್ ಹತ್ತಿಸಿ,”
“ನೀವು ಮೊದಲು ಹತ್ತಿ ಸಾರ್.”
“ಅವರು ಮೊದಲು”
“ಎಡದಿಂದ ಒಬ್ಬರು, ಬಲದಿಂದ ಒಬ್ಬರು ಒಟ್ಟಿಗೇ."
ಅಂತೂ ಸೌದಾಮಿನಿ-ಜಾಣಪ್ಪ (ಜಾಣಪ್ಪ-ಸೌದಾಮಿನಿ) ಆಸೀನರಾದರು.
ಆ ದಿನ ಅದೆಷ್ಟೋ ಸಲ ನೆನಪಿಗೆ ಬಂದಿದ್ದ “ಅರ್ಥಶಾಸ್ತ್ರ'ದ ನುಡಿ ಈಗ
ಅವಳನ್ನು ಮತ್ತೊಮ್ಮೆ ಕಾಡಿತು. ಎಡದಲ್ಲ ಬಲದಲ್ಲೂ ರೆಕ್ಕೆ ಅಂಟಿಸಿಕೊಂಡ
ಸುಂದರ ತರುಣರು, 'ದೇವಲೋಕದಿಂದ ಇಳಿದು ಬಂದವರು'-ಜನಸಮುದಾಯದ
ಎಡೆಯಲ್ಲಿ ನುಸುಳುವ ಗೂಢಚಾರರ ಪಿಸುಮಾತು.
ಬಾಬಾ ಈ ಮೆರವಣಿಗೆಯನ್ನು ನೋಡುವುದು ಸಾಧ್ಯವಿದ್ದರೆ ಯಾರಿಗೆ