ಪುಟ:ಮಿಂಚು.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

60

ಮಿಂಚು

“ರಾಜ್ಯಪಾಲರನ್ನು ಮಧ್ಯಾಹ್ನವೇ ನೋಡಿ ಕಾಗದ ಕೊಟ್ಟೆ. ಊಟಕ್ಕೇಳಿ
ಅಂದರು. ಒಪ್ಪಲಿಲ್ಲ. ಬಂದ್ಬಿಟ್ಟೆ.”
“ಹೊಸ ಏರ್ಪಾಟು ಆಗೋ ತನಕ ನೀವೇ ಮುಂದುವರೀರಿ ಅಂದಿರ್ಬೇಕು.”
“ಅದೆಲ್ಲ ಮಾಮೂಲು ಮಾತು.”
ಅಡುಗೆ ಚೆನ್ನಾಗಿತ್ತು. ಆದರೆ ಜಾಣಪ್ಪನವರಿಗೆ ರುಚಿಸಲಿಲ್ಲ. ಅತಿಥಿಗೂ
ಅಷ್ಟೆ,
ಜಾಣಪ್ಪನವರು ಸೌದಾಮಿನಿಯನ್ನು ಆಪಾದಮಸ್ತಕ ನಿಧಾನ ನೋಟದಿಂದ
ಎರಡು ಸಲ ನೋಡಿ, ಅಂದರು :
ಅಂತೂ ಸಭೆ ಶುಕ್ರವಾರ ಅಂತ ಗೊತ್ತು ಮಾಡಿದೀರಿ, ಶಾಸಕರಿಗೆ ಆಗಲೇ
ಸಂದೇಶ ಹೋಗಿದೆಯೋ ?”
“ಇವತ್ತು ಮಧ್ಯಾಹ್ನದ ಹೊತ್ತಿಗೆ ತುರ್ತುತಂತಿ ಕಳಿಸುವ ಕೆಲಸ ಮುಗಿಯಿತು.
ಹಲವರಲ್ಲಿ ಫೋನ್ ಇದೆ. ನಾಳೆ ಮಿಂಚಿನ ಕರೆ ಕೊಡ್ತೇನೆ.”
“ಸೌದಾಮಿನಿ ಅಂದರೆ ಮಿಂಚು ಅಂತಲೂ ಅರ್ಥವಿದೆಯಂತಲ್ಲ? ಟೆಲಿಫೋನ್ಸ್
ನವರು ಲೈಟಿಂಗ್ ಕಾಲ್‌ಗೆ ಸೌದಾಮಿನಿಕರೆ ಅಂತ ಹೊಸ ನಾಮಕರಣ ಮಾಡ
ಬಹುದು. ಎನ್ಹೇಳ್ತೀರಾ ?”
“ಮಿನಿ ಅಂದರೂ ಆಯ್ತು.”
“ಮಿನಿ-ಮೆಡಿ-ಮ್ಯಾಕ್ಸಿ ಏನೇನೋ ಫ್ಯಾಶನ್ ಬಂದಿದೆಯಂತಲ್ಲ ಈಗ?
ನಿಮಗೆ ಇಂಥದು ಯಾವುದರಲ್ಲೂ ಆಸಕ್ತಿ ಇಲ್ಲ. ಆ ಕಾರಣದಿಂದಲೇ ನಿಮ್ಮ ಬಗ್ಗೆ
ನನಗೆ ಗೌರವ ನಾಯಕನ ಆಯ್ಕೆಯ ಉಸ್ತುವಾರಿಗೆ ಯಾರು ಬರ್ತಾರೋ ?”
“ತಿಳೀದು. ಗೊತ್ತಾದೊಡನೆ ನಿಮಗೆ ಫೋನ್ ಮಾಡ್ತೇನೆ.”
“ನಿಮಗೆ ಹಿಂದಿ ಚೆನ್ನಾಗಿ ಬರುತ್ತಂತೆ.”
“ತಕ್ಕಮಟ್ಟಿಗೆ.”
“ಒಳ್ಳೇ ಭಾಷೆ. ಅದರಲ್ಲಿ ತಾವು-ತಮ್ಮ ಜಾಸ್ತಿ, ಶಿಷ್ಟಬಳಕೆ.”
“ತಾವು ಹೇಳೋದು ಸರಿ. ಆದರೆ ನೀವು-ನಿಮ್ಮ ಅಂದರೆ ಹೆಚ್ಚು ಆತ್ಮೀಯ
ವಾಗಿರುತ್ತೆ."
“ಪಾರ್ವತಿ” ಎಂದು ಜಾಣಪ್ಪ ಪತ್ನಿಯನ್ನು ಕರೆದರು. ಮಕ್ಕಳನ್ನು
ಅಳಿಯಂದಿರನ್ನು ಸೊಸೆಯರನ್ನು ಕರೆದುಕೊಂಡೇ ಆಕೆ ಬಂದರು. ಇಡಿಯ ಕುಟುಂಬದ
ಪರಿಚಯವಾದಂತಾಯಿತು ಸೌದಾಮಿನಿಗೆ.
“ಸುಖೀ ಸಂಸಾರ” ಎಂದು ಸೌದಾಮಿನಿ ಪಾರ್ವತಿಯತ್ತ ನೋಡಿದಳು,
ಮುಗುಳುನಗೆ ವಿನಿಮಯಕ್ಕೊಂದು ಅವಕಾಶ.
ಈ ಮನೆ ಬಿಟ್ಟು ಸಕುಟಂಬ ಸಪರಿವಾರನಾಗಿ ಇನ್ನು ಪ್ರಾಯಶಃ ಊರಿಗೆ