ಪುಟ:ಮಿಂಚು.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

61

ತೆರಳುತ್ತಾನೆ ಈತ ; ರಾಜಕೀಯ ಆಟದಲ್ಲಿ ಇದು ಅನಿವಾರ್ಯ ಎಂದುಕೊಂಡಳು
ಸೌದಾಮಿನಿ.
ಸೌದಾಮಿನಿ ಕಾರಾಲಯಕ್ಕೆ ಹಿಂತಿರುಗಲು ಮುಖ್ಯಮಂತ್ರಿ ತಮ್ಮದೇ ಕಾರು
ಕೊಟ್ಟರು.
“ಈ ಕಾರು ಇನ್ನು ನಿಮ್ಮದೇ ಅಂದರೂ ತಪ್ಪಾಗೋದಿಲ್ಲ.”
“ಇಲ್ಲ ಇಲ್ಲ. ಇದು ತಮ್ಮದೇ ನಿಮ್ಮದೇ ಒಂದು ವಿಷಯ ನೀವು
ಹೇಳಲಿಲ್ಲ.”
“ಏನು ?”
“ಮೆರವಣಿಗೆ ಹೇಗಿತ್ತು ?”
"ಇಂಥದಕ್ಕೇ ಅನ್ನೋದು ಪ್ರಚಂಡ ಮೆರವಣಿಗೆ ಅಂತ.”
"ಇದಕ್ಕೆ ಸ್ಫೂರ್ತಿ ಯಾವುದು ಗೊತ್ತೆ ?”
“ಯಾವುದು ?”
“ಕೌಟಿಲ್ಯನ ಅರ್ಥಶಾಸ್ತ್ರ,
“ಎಲಾ, ಹಾಗೋ ? ಇನ್ನು ಹೊರಡಿ, ಬಹಳ ಹೊತ್ತು ಓದಬೇಡಿ,
ನಿದ್ದೆ ಮಾಡಿ, ಶುಭಾಶಯ.”
ಕಾರು ಹೊರಡುವಾಗ ದಪ್ಪಕ್ಷರಗಳು ಕಣ್ಣ ಮುಂದೆ ಕುಣಿದಂತೆ ಭಾಸವಾಯಿತು:
ರಾಷ್ಟ್ರದ ಪ್ರಥಮ ಮಹಿಳಾ ಮುಖ್ಯಮಂತ್ರಿ ! ದೇಶದ ಆಧುನಿಕ ರಾಜಕೀಯ
ಇತಿಹಾಸದಲ್ಲೇ ನೂತನ ಅಧ್ಯಾಯ !
ಕಾರ್ಯಾಲಯ ಮುಖ್ಯ ನಟನಟಿಯರು ಚೆದರಿದ ಮದುವೆ ಮನೆಯಂತಿತ್ತು,
ಮೆರವಣಿಗೆಯ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ವು, ಕುಡಿದಿದ್ದ ದ್ವಾರ
ಪಾಲಕರು ಹಾಡಲು ಯತ್ನಿಸುತ್ತಿದ್ದರು :
“ಭಾರತ ಮಾತೇ ! ಕರ್ನಾಟಕ ತನುಜಾತೆ !”
ಸ್ವಯಂ ಸೇವಕರೂ ಗುಂಡಿನ ಗುಂಗಿನಲ್ಲಿದ್ದರು.
ಕಾರನ್ನು ಹಿಂದಕ್ಕೆ ಕಳುಹಿಸಿ, ಸೌದಾಮಿನಿ ಕಿರಿಚಿದಳು :
“ಚುನಾವಣೆಯ ವಿಜಯದ ಅಮಲು ತಲೆಗೆ ಏರಿತೇನ್ರೊ ?”
“ತಪ್ಪಾಯ್ತು ಮಾತಾಜಿ, ಖುಶಿಯಾಗಿರೋವಾ ಅಂತ ಒಂದೀಟು...”
"ಇನ್ನೂ ಉಳಿದಿದ್ರೆ ಕುಡಿಬ್ಬಿಟ್ಟು ಮಲಕ್ಕೊಳ್ಳಿ. ಕಾವಲಿಗೆ ಕೇಂದ್ರ
ಪೋಲೀಸ್ಕೋರ ಕರೆಸ್ತೀನಿ.”
ಸೌದಾಮಿನಿಗೂ ನಿದ್ದೆ ಹೋಗುವ ಆಸೆ. ಅಷ್ಟರಲ್ಲಿ ಟೆಲಿಫೋನ್ ಕರೆಬಂತು,
ದಿಲ್ಲಿಯಿಂದ, ಮಹಾ ಕಾರ್ಯದರ್ಶಿ ನಕುಲದೇವ್‌ಜಿಯಿಂದ,
ಜಾಣಪ್ಪನಿಗೆ ಫೋನ್ ಮಾಡಿದ್ದೆ, ಶಿಷ್ಟಾಚಾರ, ಅಲ್ಲಿಂದ ನೀವು ಹೊರಟಿ
ದೀರಿ ಅಂತ ತಿಳೀತು. ಇಲ್ಲಿ ವಿಜಯೋತ್ಸವ ಇನ್ನೂ ನಡೀತಿದೆ. ಲೋಕಸಭೇಲಿ