ಪುಟ:ಮಿಂಚು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೨

ಮಿಂಚು

ಮೂರಾ ಎರಡಂಶ ಬಹುಮತ, ಒಂದು ರಾಜ್ಯ ಬಿಟ್ಟು ಬೇರೆ ಎಲ್ಲಾ ಕಡೆ ನಾವೇ
ಅಧಿಕಾರಕ್ಕೆ ಬಂದಿದ್ದೇವೆ.”
ಜಯಗಳಿಸಿ ಪುರಪ್ರವೇಶ ಮಾಡಿದ ನನ್ನ ಸ್ವಯಂಸೇವಕ ದಂಡು ತೂಕಡಿ
ಸಿದೆ. ನನಗೆ ನಿದ್ದೆ ? ಇಲ್ಲವಪ್ಪ, ಈ ಕ್ಷಣ ನೀವು ಇಲ್ಲಿ ಇದ್ದಿದ್ದರೆ....”
“ನಿಜವಾಗಿಯೂ ? ಮಾತಾಜಿ, ನಾಳೆ ಕೇಂದ್ರ ಮಂತ್ರಿಮಂಡಲ ರಚನೆ.
ನಾಡದು ಬೆಳಗ್ಗಿನ ವಿಮಾನದಲ್ಲಿ ಹೊರಟುಬರ್ತೇನೆ,"
“ನೃಪತುಂಗ ಹೊಟೆಲಿನಲ್ಲಿ ವಸತಿ, ಬಂದು ಒಂದು ದಿನ ಜನರಿಗೆ ತಮ್ಮ ಬಹಿ
ರಂಗ ದರ್ಶನ ಬೇಡ...”
“ಅರ್ಥವಾಯ್ತು ಮುದ್ದು.”
“ನಿಮಗೆ ನಾಚಿಕೆ ಇಲ್ಲ !”
"ನಿನಗೆ ಮಾತಾಜಿ ?”
“ಉತ್ತರ ಭೇಟಿಯಾದಾಗ....”

***

ಮಧ್ಯಾಹ್ನ ಸೌದಾಮಿನಿಯೊಬ್ಬಳೇ ಪುಟ್ಟ ಸೂಟ್‌ಕೇಸ್ ಸಹಿತ ವಿಮಾನ
ನಿಲ್ದಾಣಕ್ಕೆ ಹೋದಳು. ಇಳಿದು ಬಂದ ಪಕ್ಷದ ಮಹಾ ಕಾರ್ಯದರ್ಶಿಯೊಡನೆ
“ನೃಪತುಂಗ' ತಲಪಿದಳು. ಕಾರಿನ ಚಾಲಕನಿಗೆ “ಕಚೇರಿಗೆ ಹೋಗು” ಎಂದಳು. “ದಿಲ್ಲಿ
ಯಿಂದ ಶ್ರೀಯುತರು ಬಂದಿದ್ದಾರೆ. ಅವರ ಜತೆ ಸೌದಾಮಿನಿದೇವಿ ಚುನಾವಣೆಯ
ಅನಂತರದ ಕ್ರಮಗಳನ್ನು ಕುರಿತು ರಹಸ್ಯ ಸಮಲೋಚನೆ ನಡೆಸುತ್ತಿದ್ದಾರೆ.” ಸುದ್ದಿ
ಮೆಲ್ಲನೆ ತೆವಳಿತು. ಯಾರಿಗೂ ತಿಳಿಯದು. ಗೊತ್ತಾದಾಗ 'ನೃಪತುಂಗ' ದಲ್ಲಿ
ಅವರಿದ್ದ ಕೊಠಡಿಯ ಫೋನ್ ಕೆಟ್ಟಿತ್ತು.
ಮಹಾ ಕಾರ್ಯದರ್ಶಿಗೆ ಹಿಂದೆ ತಮ್ಮಿಂದ ಆಗಿದ್ದ ಉಪಕಾರ ಎಷ್ಟೊಂದು !
ಈಗ ತಮಗೆ ಈ ಬಗೆಯ ಅವಮಾನ !
ಒಮ್ಮೆಲೆ ಜಾಣಪ್ಪನವರಿಗೆ ಏನೋ ಹೊಳೆದಂತಾಗಿ ಕಣ್ಣಂಚಿನಲ್ಲಿ ನಗೆ
ತುಳುಕಿತು.
ಅವರು ಅಂದುಕೊಂಡರು ; ಬಾಬಾಜಿ ಭಕ್ತೆ, ಮಹಾ ಪತಿವ್ರತೆ, ಸೆರಗು
ಹಾಸಿದ್ದಾಳೆ, ಮುಖ್ಯಮಂತ್ರಿಯಾಗುವ ಅವಕಾಶಕ್ಕೆ ಇಷ್ಟು ಬೆಲೆ ಇನ್ನೇನಾದರೂ
ಮುಖ್ಯಮಂತ್ರಿ ಪದವಿ ಸಿಕ್ಕಿಯೇ ಬಿಟ್ಟರೆ, ಆಗ ಇವಳ ಪುಣ್ಯವೆಲ್ಲ ಖಂಡಿತ ಬರಿ
ದಾಗ್ತದೆ.'

***