ಪುಟ:ಮಿಂಚು.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

64

ಮಿಂಚು

ಮಹಿಮೆ, ಸೌದಾಮಿನಿ, ಬನ್ನಿ ರಂಗಸ್ವಾಮಿಯವರೇ” ಎಂದು ಕರೆದಾಗ, ಈ ಸ್ವರ
ಹಿಂದಿನದಲ್ಲವಲ್ಲ ಎನಿಸಿ, ರಂಗಸ್ವಾಮಿ ಮತ್ತೊಮ್ಮೆ ಶಂಕೆಗೀಡಾದರು.
ಒಂದೆಡೆ, ಆಯಾ ಕ್ಷೇತ್ರಗಳಲ್ಲಿ ಮತ ಎಣಿಸಿದ ಅಧಿಕಾರಿ ನೀಡಿದ ವಿಜಯದ
ಪ್ರಮಾಣ ಪತ್ರದ ಪರಿಶೀಲನೆ, ಇನ್ನೊಂದೆಡೆ, ಆ ದಿನ ಪ್ರಕಟವಾದ ವಿಶೇಷ ರಾಜ್ಯ
ಗಝಟ್ಟಿನಲ್ಲಿ ರಾಷ್ಟ್ರ ಪಕ್ಷದ ವಿಜಯಿಗಳ ಹೆಸರುಗಳಿಗಾಗಿ ಶೋಧೆ, ಕಟ್ಟಡದ
ಎದುರು ಬಯಲಿನಲ್ಲಿದ್ದ ವಿಜಯೋತ್ಸವದ ಚಪ್ಪರಕ್ಕೆ ಹೊಸ ತಳಿರನ್ನು ಒಂದಿಷ್ಟು
ತಗಲಿಸಿದರು. ಚಪ್ಪರ ಮೇಜುಕುರ್ಚಿಗಳ ಭೋಜನ ಶಾಲೆಯಾಯಿತು. ಬರ
ತೊಡಗಿದ್ದ, ಬಂದು ತಲಪಿದ್ದ, ಬಂದೇ ಬಿಟ್ಟಿದ್ದ ರಾಷ್ಟ್ರ ಪಕ್ಷದ ಶಾಸಕರಿಗೂ
ಇತರ ಗಣ್ಯರಿಗೂ ಕಾರಕರ್ತರಿಗೂ ಪ್ರಜಾಭವನದ ಅಡುಗೆ ರುಚಿ,
ಬಿಸಿಲು ಬಾಡಿದೊಡನೆ ಕಾಫಿ, ಟೀ, ಮುಖ್ಯಮಂತ್ರಿಗೆ ರಾಜಭವನದಲ್ಲಿ
ಪ್ರತಿಜ್ಞಾ ಸ್ವೀಕಾರ ಆದ ಬಳಿಕ ರಾತ್ರಿಯೂಟ ಮತ್ತು ವಸತಿ ಶಾಸಕರ ಭವನದಲ್ಲಿ-
ಎಂದು ಧ್ವನಿವರ್ಧಕ ಅರಚಿತು,
ಜಾಣಪ್ಪನವರೊಂದಿಗೆ ದಿಲ್ಲಿಯವರ ಆಪ್ತಾಲೋಚನೆ.
“ಜಾಣಪ್ಪಾಜಿ, ತಮಗಿನ್ನು ರಾಜ್ಯಪಾಲ ಪದವಿ, ತಾವು ದೇಶದ ಅಮೂಲ್ಯ
ಆಸ್ತಿ, ಮುಖ್ಯಮಂತ್ರಿ ಪದವಿಯ ಜಂಜಾಟ ನಿಮಗಿನ್ನು ಸಲ್ಲ.”
"ನೂತನ ಶಾಸಕ ಪಕ್ಷದ ನಾಯಿಕೆಯಾಗಿ ಸೌದಾಮಿನಿ ದೇವಿಯವರ ಹೆಸರನ್ನು
ನಾನು ಸೂಚಿಸಬೇಕು, ಅಷ್ಟೆ ತಾನೆ ?”
ಕಾರ್ಯದರ್ಶಿ “ಹಪ್ಪ” ಎಂದು ನಕ್ಕು, “ಅನುಮೋದನೆ ಲಕ್ಷ್ಮೀಪತಿಯವರು
ಮಾಡಲಿ” ಎಂದ.
“ಸಂತೋಷದಿಂದ ಮಾಡ್ತಾನೆ.”
ಸೌದಾಮಿನಿ ಪಕ್ಷದ ಮಹಾ ಕಾರ್ಯದರ್ಶಿಯೊಡನೆ ಮೆಲ್ಲನೆ ಅಂದಳು :
"ಈಗ ಐದೂವರೆ. ಇನ್ನು ಐದು ಮಿನಿಟುಗಳಲ್ಲಿ ಮುಗಿದರೆ, ಸಂಜೆ ಆರು
ಗಂಟೆಯ ರೇಡಿಯೋ ವಾರ್ತೆಯಲ್ಲಿ ಪ್ರಸಾರವಾಗ್ತದೆ, ನಿಮ್ಮ ನೇತೃತ್ವದಲ್ಲಿ ಆಯ್ಕೆ
ನಡೆಯಿತು ಅಂತಲೂ.”
“ನಿಮ್ಮ ಕಿವಿಯೊಳಗೊಂದು ಪುಟ್ಟ ಗಡಿಯಾರ ಇದೇಂತ ತೋರುತ್ತೆ ”
“ನೀವು ಪರಿಹಾಸ್ಯ ಶಿಖಾಮಣಿ !”
....ಸೌದಾಮಿನಿದೇವಿ ಕಿಂಧೆಯ ಅಳುವ ಪಕ್ಷದ ನಾಯಿಕೆಯಾಗಿ ಸರ್ವಾನು
ಮತದಿಂದ ಆಯ್ಕೆಯಾದರು. ಎಲ್ಲೆಲ್ಲಿಗೆ ಸಾಧ್ಯವೋ ಅಲ್ಲಿಗೆಲ್ಲ ಸುದ್ದಿ ಹಾರಾಡಿತು.
ಛಾಯಾಗ್ರಾಹಕರು ಒಳಗೆ ಬಂದು ಫಿಲ್ಸ್ ತೀರುವವರೆಗೂ ಕ್ಲಿಕ್ ಮಾಡಿದರು.
ಭಾರತದ ರಾಷ್ಟ್ರ ಪಕ್ಷದ ಪ್ರಧಾನ ಕಾರ್ಯದರ್ಶಿ ಜಾಣಪ್ಪನವರೊಡಗೂಡಿ
ಸೌದಾಮಿನಿ ದೇವಿಯನ್ನು ಒಳಗೊಂಡು ರಾಜಭವನಕ್ಕೆ ಹೋದರು. ಅವರಿಗೆ ಪತ್ರ