ಪುಟ:ಮಿಂಚು.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

66


ಸೌದಾಮಿನಿ ದೇವಿ ಮತ್ತು ಆರು ಜನ ಗಂಡಸರು. ಇದು ಕಿಷ್ಕಿಂಧೆಯ ನೂತನ
ಮಂತ್ರಿಮಂಡಲ, ಆ ರಾಜ್ಯದ ಅಸಾಮಾನ್ಯ ದೈನಿಕ 'ಕಿಷ್ಕಿಂಧಾವಾಣಿ' ಮೊದಲ
ಪುಟದ ಅಗಲಕ್ಕೆ ದೊಡ್ಡ ಅಕ್ಷರಗಳಲ್ಲಿ ಸಾರಿತ್ತು : ಕಿಷ್ಟಿಂಧೆ ಸಂಪುಟ-ಸಪ್ತರ್ಷಿ
ಮಂಡಲ, ಕಿಕ್ಕಿರಿದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೊದಲು ಹಂಚಿದ್ದು ನೂತನ
ಮುಖ್ಯಮಂತ್ರಿಯ ಸಹಿಯಿದ್ದ ಘೋಷಣೆಯನ್ನು, “ಭವ್ಯ ಭವಿಷ್ಯದ ಕಿಷ್ಕಿಂಧೆಗಾಗಿ
ಸೌದಾಮಿನಿ ಪ್ರಣಾಳಿಕೆ' ಎಂದಿತ್ತು ಅದರ ಶೀರ್ಷಿಕೆ, ಜತೆಯಲ್ಲಿ ಕಾಫಿ ತಿಂಡಿ.
ಗೋಷ್ಠಿ ನಡೆದದ್ದು ಮುಖ್ಯಮಂತ್ರಿಯವರ ಚೇಂಬರಿನಲ್ಲಿ.
ಒಬ್ಬನೆಂದ :
“ಏಳು ಒಳ್ಳೆಯ ಸಂಖ್ಯೆ, ಶುಭಸೂಚಕ.”
ಇನ್ನೊಬ್ಬ :
“ಮಂಡಲದ ಗಾತ್ರ ಚಿಕ್ಕದಾಗಲಿಲ್ಲವೆ ?"
“ಮೈಬಗ್ಗಿ ದುಡಿದರೆ ಚಿಕ್ಕ ಗಾತ್ರ ಅನಿಸದು,” ಎಂದರು ಮುಖ್ಯಮಂತ್ರಿ.
“ಹಿಂದಿನ ಸಂಪುಟದವರು ಮೈಬಗ್ಗಿ ದುಡೀಲಿಲ್ಲ ಅಂತಲೆ ?”
“ಛೇ! ಛೇ ! ಹಾಗೆ ಹೇಳಲಾರೆ. ದುಡಿದೂ ದುಡಿದೂ ಅವರ ನಡು ಬಗ್ಗಿ
ಹೋಯಿತು.”
"ಅದು ವೃದ್ಧರ ಆರಾಧನೆ ; ಇದು ಯೌವನದ ಪೂಜೆ ಎನ್ನೋಣವೆ ?”
“ಪದ ಜೋಡಣೆ ಚೆನ್ನಾಗಿದೆ. ನೀವು ಯಾವ ಪತ್ರಿಕೆಯವರು ?”
“ಭಾರತ ವಾರ್ತಾ ಸಂಸ್ಥೆ.”
“ನಿಮ್ಮ ನಿರ್ದೆಶಕರನ್ನು ಬಲ್ಲೆ. ದಿಲ್ಲಿಯಲ್ಲಿ ನಿಮ್ಮ ಕೇಂದ್ರದ ಕಟ್ಟಡಕ್ಕೆ
ಹೋಗಿದ್ದೆ.”
“ಸಂಪುಟದಲ್ಲಿ ಯಾವುದಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದೀರಿ? -ಪ್ರದೇಶಗಳಿಗೊ?
ಜಾತಿಗಳಿಗೆ ?” ಎಂದು ಇನ್ನೊಬ್ಬ ಕೇಳಿದ.
“ನಮಗೆ ಬೇಕಾಗಿರೋದು ಜಾತ್ಯತೀತ ಸಮಾಜ, ಆದರೂ ವಾಸ್ತವಾಂಶ
ವನ್ನು ಮರೆಯೋಕಾಗುತ್ತ ? ಪ್ರದೇಶ, ಜಾತಿ ಎರಡನ್ನೂ ಗಮನದಲ್ಲಿಟ್ಗೊಂಡು
ಸಂಪುಟ ರಚಿಸಿದ್ದೇನೆ.”
“ಅನುಭವ ಹುಮ್ಮಸ್ಸು ಎರಡೂ ಬೇಕು ಅಂತ ಹಿಂದೆ ಹೇಳಿದ್ರು.”