ಪುಟ:ಮಿಂಚು.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

೬೯

ನೀರಾವರಿ ಸಚಿವರು ಇಳಿದನಿಯಲ್ಲಿ ನುಡಿದರು:
“ಸ್ಪಷ್ಟ ಪಡಿಸ್ತೀನಿ. ಮುಖ್ಯಮಂತ್ರಿಯವರು ಮಾಡಿರೋ ಹಂಚಿಕೆ ನನಗೆ ಒಪ್ಪಿಗೆ,
ನೀರಾವರಿ, ಲೋಕೋಪಯೋಗಿ ಖಾತೆ, ಕೃಷಿ ಎಲ್ಲ ಪರಸ್ಪರ ಸಂಬಂಧಿಸಿದ್ದೇ.”
ಗೃಹಖಾತೆಯನ್ನು ಸೌದಾಮಿನಿ ತನ್ನ ವಶ ಇಟ್ಟುಕೊಂಡಿದ್ದಳು. ಅವಳ
ಉದ್ದೇಶ : ಪಕ್ಷದ-ಯಾಕೆ, ಇಡೀ ವಿಧಾನ ಸಭೆಯ-ಎಲ್ಲ ಸದಸ್ಯರ ಹಿಂದೆ ಗುಪ್ತ
ಚಾರರನ್ನಿಡುವುದು. ಸಾಪ್ತಾಹಿಕ, ಕೆಲವರಿಗೆ ಸಂಬಂಧಿಸಿ ದೈನಿಕ, ವರದಿಗಳನ್ನು
ತರಿಸಿಕೊಳ್ಳುವುದು. ಅರ್ಥಶಾಸ್ತ್ರದ ಬಡ ಬ್ರಾಹ್ಮಣರಾಗಲೀ ವೇಶ್ಯೆಯರಾಗಲೀ
ಈಗ ಅನಗತ್ಯ. ಪೋಲೀಸ್ ಗುಪ್ತಚಾರ ಇಲಾಖೆ ಸರಿಯಾಗಿ ಕೆಲಸ ಮಾಡಬೇಕು.
ಮಾಡದಿದ್ದರೆ ಚುರುಕು ಮುಟ್ಟಿಸುವುದು.
....ರಾಜ್ಯದ ಮುಖ್ಯ ಕಾರ್ಯದರ್ಶಿಹಳೇ ಐ,ಸಿ.ಎಸ್.ನ ಪಳೆಯುಳಿಕೆ;
ಈತನನ್ನು ದಿಲ್ಲಿಗೆ ಸಾಗಹಾಕಿ, ದುಡಿಯುವ ಸಾಮರ್ಥ್ಯವಿರುವ ನಾಲ್ವತ್ತುನಾಲ್ವ
ತ್ತೈದರ ಐ.ಎ.ಎಸ್ ಅಧಿಕಾರಿಯನ್ನು ಪಡೆಯಬೇಕು ಎಂಬ ನಿರ್ಧಾರಕ್ಕೆ
ಸೌದಾಮಿನಿ ಬಂದಳು.
ವಿದ್ಯುಚ್ಛಕ್ತಿ, ಸೀಮೆ ಎಣ್ಣೆ ಸರಿಬರಾಜು, ವಸತಿ ಮತ್ತು ಹಂದಿ ಸಾಕಣೆಯ
ಮಂತ್ರಿಯನ್ನು ಒಂದು ಪತ್ರಿಕೆ ಧ್ರುವ ಎಂದು ಕರೆಯಿತು.
ಒಂದು ಪೂರ್ವಾಹ್ನ ಧ್ರುವಬಿಂದು ಟ್ರಿಣ್ ಟ್ರಿಣ್ ಬಾರಿಸಿತು.
ಆಪ್ತ ಕಾರ್ಯದರ್ಶಿ ರಿಸೀವರ್ ಎತ್ತಿ. “ಯೆಸ್ ?" ಎಂದ, ಆ ತುದಿ
ಯಲ್ಲಿದ್ದವನು ಮುಖ್ಯಮಂತ್ರಿಯ ಆಪ್ತಸಹಾಯಕರಲ್ಲೊಬ್ಬ. ಆತನೆಂದ : “ಸಿ.ಎಂ.
ನಿಮ್ಮ ಮಿನಿಸ್ಟರನ್ನ ಕರೀತಾರೆ."
ಒಸಗೆ ತಿಳಿದೊಡನೆ ಯುವಕ ರಂಗಧಾಮ ಗಡಿಬಿಡಿಯಿಂದ ಎದ್ದು ವಿಶ್ರಾಂತಿ
ಕೊಠಡಿಗೆ ಹೋಗಿ, ಅಲ್ಲಿದ್ದ ಕನ್ನಡಿಯಲ್ಲಿ ಮುಖ ನೋಡಿಕೊಂಡು, ಕ್ರಾಪು ಬಾಚಿ,
ಒಂದೆಳೆಯನ್ನು ಹಣೆಯ ಮೇಲೆ ಚೆಲ್ಲಾಡಲು ಬಿಟ್ಟ, ಆತ್ಮವಿಶ್ವಾಸದಿಂದ ಮಹಾ
ವ್ಯಾಧರ ಸಮ್ಮುಖ ಸೇರಿದ.
“ಕೂತ್ಕೊಳ್ಳಿ. ನಿಮ್ಮನ್ನೋ ಪತ್ರಿಕೆಯವರು ಧ್ರುವ ಎಂದದ್ದು ? ಬರೆದ
ವನು ಬುದ್ಧಿವಂತ. ನೀವು ಚಿತ್ರಾವತಿ ಕ್ಷೇತ್ರದವರಲ್ಲವೆ?"
"ಹೌದು,ಮಾತಾಜಿ."
“ಜಾಣಪ್ಪನವರು ಯಾವಾಗ ನಿವಾಸ ಖಾಲಿ ಮಾಡ್ತಾರೋ ಗೊತ್ತಿಲ್ಲ.
ಈಗಿನ ಮುಖ್ಯಮಂತ್ರಿಗೊಂದು, ಮನೆ ಬೇಕಲ್ಲ... ವಸತಿ ಮತ್ತು ಹೋಂ ಆಫೀಸು."
“ಸರಕಾರೀ ಅತಿಥಿ ಗೃಹದ ವಿಸ್ತರಣದಲ್ಲಿ ಒಂದು ದೊಡ್ಡ ಬಂಗಲೆ ಇದೆ."
“ಸುಣ್ಣ ಬಣ್ಣ ಅಲಂಕಾರಗಳಿಗೆಲ್ಲ ಎಷ್ಟು ಸಮಯ ಬೇಕು ?"
ಎರಡು ಮನೂರು ವಾರ."
“ಭೇಷ್ ! ನಿಮ್ಮ ಹವಾಸವೇನು? ”