ಪುಟ:ಮಿಂಚು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

70

ಮಿಂಚು

“ಬಿಡುವು ದೊರೆತರೆ ಸಂಜೆ ಟೆನ್ನಿಸ್ ಆಡ್ತೇನೆ.”
“ನನಗೂ ಆ ಆಟ ಇಷ್ಟ. ಹೇಳಿಕೊಡ್ತೀರಾ?"
“ತಮಗೆ ಬಿಡುವು ಸಿಗಬೇಕಲ್ಲ ಮಾತಾಜಿ...."
"ಸಿಕ್ಕಾಗ-"
“ಆಗಲಿ. ದೊಡ್ಡ ಜವಾಬ್ದಾರಿ. ನೆನೆಸಿಕೊಂಡರೇ ಬೆವರುತ್ತೆ.”
“ಕರ್ಚಿಫ್ ಇದೆಯಾ ?”
"ಇದೆ."
“ಚೀಫ್ ಸೆಕ್ರೆಟರಿಗೆ ತಿಳಿಸಿಬಿಡಿ. ಕೆಲಸ ಶುರುವಾಗಲಿ.ನಿಮ್ಮ ಪರಿಚಯದ
ಕಂಟ್ರಾಕ್ಟರ್ ಯಾರಾದರೂ ಇದ್ದರೆ ಅವರನ್ನೇ ನೇಮಿಸಿ.”
ಸೌದಾಮಿನಿ ರಂಗಧಾಮನ ಮುಖವನ್ನು ತನ್ನ ದೃಷ್ಟಿಯಿಂದ ಮುದ್ದಿಸಿದಳು.
ಯುವಮಂತ್ರಿಗೆ ಕಚಗುಳಿ ಇಟ್ಟಂತಾಯಿತು.
ನಸುನಕ್ಕು "ಹೋಗಬಹುದು" ಎನ್ನುವಂತೆ ಮುಖ್ಯಮಂತ್ರಿ ಸನ್ನೆ ಮಾಡಿ
ದಳು.
***
ಕೇಂದ್ರ ಸಂಪುಟಕ್ಕೆ ಕಿಷ್ಕಿಂಧೆಯಿಂದ ಒಬ್ಬವನ್ನು ತೆಗೆದುಕೊಂಡಿದ್ದ ರು ಉಪ
ಮಂತ್ರಿಯಾಗಿ, ಕೆಲ ಲೋಕಸಭಾ ಸದಸ್ಯರು ಸೌದಾಮಿನಿಯೊಡನೆ ಸಮಾಲೋಚನೆಗೆ
ಬಂದರು.
“ಇದು ನಮ್ಮ ರಾಜ್ಯಕ್ಕೆ ಅವಮಾನ ಅಲ್ವೆ ಮಾತಾಜಿ?"
“ನನಗೆ ಹಾಗೆ ಅನಿಸೋದಿಲ್ಲ, ಸದಸ್ಯರ ವೈಯುಕ್ತಿಕ ಸಾಮ‍ಥ್ಯ್ರ ಮಾಪನದಲ್ಲಿ
ನಮ್ಮ ಪ್ರಧಾನಿ ಅಸಮಾನರು. ಮುಂದಿನ ವರ್ಷ ಸಂಪುಟ ಪುನರ್ರಚಿಸುವಾಗ
ಸಂಪುಟ ದರ್ಜೆಗೆ ಒಬ್ಬರನ್ನು'ರಾಜ್ಯ ಮಂತ್ರಿಯಾಗಿ' ಒಬ್ಬರನ್ನು ಖಂಡಿತ ತಗೊಳ್ತಾರೆ,
ಅಲ್ಲಿ ಮಾತ್ರ ಕಿರಿಕಿರಿ ಮಾಡ್ಬೇಡಿ. ಪ್ರಧಾನಿಗೆ ಒಮ್ಮೆ ಸಿಟ್ಟು ಬಂತು ಅಂದರೆ
ಎದುರಿಗಿದ್ದವರು ಸುಟ್ಟ ಬೂದಿಯಾಗ್ತಾರೆ:"
“ಅವರ ಹಣೆಯಲ್ಲೊಂದು ಕಣ್ಣಿದೆಯಾ ?"
“ಹಾಗೆಲ್ಲ ಮಾತಾಡಬಾರದು. ತಪ್ಪಾಯು ಅನ್ನಿ."
“ತಪ್ಪಾಯು, ಮಾತಾಜಿ."
***
ರಂಗಧಾಮನ ಜತೆ ದಿನಕ್ಕೊಮ್ಮೆ ಸೌದಾಮಿನಿ ತನಗಾಗಿ ಹೊಸಯುಡುಗೆ
ತೊಡುತ್ತಿದ್ದ ಬಂಗಲೆಗೆ ಭೇಟಿ ಇತ್ತಳು.