ಪುಟ:ಮಿಂಚು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

72

ಮಿಂಚು



ಬೇಕೂಂತ ದಿಲ್ಲಿ ಬಯಸೋದಾದರೆ ನನ್ನನ್ನು ಇಲ್ಲಿಂದ ಎತ್ತಿ ಹಾಕ್ತಾರೆ. ಇದು
ರಾಜಕಾರಣ. ಅಲ್ವೇನಪ್ಪ ? ”
“ಅಡ್ಡಗಾಲಿಡುವ ಕೆಲಸ ಮಾಡಲಾರರು ಅನಿಸುತ್ತೆ."
“ಅಂತೂ ಚೀಫ್ನನ ವಹಿಸಿಕೊಂಡು ಮಾತನಾಡ್ತೀರಿ!"
“ತಮ್ಮನ್ನೂ ಮಾತಾಜಿಯನ್ನೂ ಎಲ್ಲರೂ ಆದರಿಸ್ತಾರೆ."
“ಆದರಕ್ಕೂ ಹಾದರಕ್ಕೂ ಅಂತರ ಕಮ್ಮಿ. ರಂಗಧಾಮ, ನಿಮಗಿನ್ನೂ ಚಿಕ್ಕ
ವಯಸ್ಸು. ಸುಳೀಲಿ ಸಿಕ್ಕಿ ಹಾಕ್ಕೊಳ್ಬೀಡಿ. ಜೋಪಾನ !"
“ತಮ್ಮಂಥ ಹಿರಿಯರ ಆಶೀರ್ವಾದ ಬಲದಿಂದ, ಎಲ್ಲಾ ಅಪಾಯಗಳಿಂದಲೂ
ಪಾರಾದೇನು.”
“ನೀವು ಸದ್ಭಾವನೆಯ ದೂತ, ತಿಳೀತೇನಪ್ಪ ? ಆಯಮ್ಮನಿಗೆ ನಮ್ಮ
ಸಂಭಾಷಣೆಯ ಪೂರ್ಣ ವಿವರ ಕೊಡಬೇಕಾಗಿಲ್ಲ. ಅವರ ಜತೆ ವೃಥಾ ವಿರಸ ಯಾಕೆ?
ನಿಮಗೆ ಒಳ್ಳೇದಾಗಲಿ. ಹೋಗ್ಬನ್ನಿ."
ಜಾಣಪ್ಪ ಹೇಳಿದುದನ್ನೆಲ್ಲ ಅರ್ಥಮಾಡಿಕೊಳ್ಳುವುದು ಜಾಣ ರಂಗಧಾಮನಿಗೆ
ಕಷ್ಟವಾಗಲಿಲ್ಲ. ಮರಳಿದವನು ನೇರವಾಗಿ ಮುಖ್ಯಮಂತ್ರಿಯ ಬಳಿ ಹೋಗಲಿಲ್ಲ,
ತನ್ನ ಕೊಠಡಿಯಲ್ಲಿ (ಚೇಂಬರಿನಲ್ಲಿ) ಕುಳಿತು ಕಾಫಿ ತರಿಸಿ ಕುಡಿದ.
ಸೀಮೆ ಎಣ್ಣೆಯ ಮಾರಾಟದ ಗುತ್ತಿಗೆಯನ್ನು ಕಳೆದ ಕೆಲ ವರ್ಷಗಳಿಂದ ಒಬ್ಬನೇ
ವ್ಯಕ್ತಿಗೆ ಕೊಡಲಾಗಿತ್ತು. ಸಂಪುಟ ಬದಲಾದ ಮೇಲೆ ಹೊಸ ಮಂತ್ರಿಯನ್ನು
ಕಾಣಲು ಅವನು ಬಂದಿರಲಿಲ್ಲ. ಆ ಇಲಾಖೆಯ ಕಾರ್ಯದರ್ಶಿ ಬಂದು ನುಡಿದ :
"ಸೀಮೆ ಎಣ್ಣೆಯವನು ಬಂದಿದ್ದ. ಹಳೆಯ ಒಡಂಬಡಿಕೆಯ ಪ್ರಕಾರ ವಿತರಣೆ
ಮುಂದುವರಿಸ್ತೇನೆ-ಅಂದ. ಹೊಸ ಒಡಂಬಡಿಕೆ ಅಗತ್ಯ, ಇಲ್ಲದೆ ಹೋದರೆ ಗುತ್ತಿಗೆ
ಬೇರೆಯವರಿಗೆ ಕೊಡ್ತೇವೆ-ಅಂತ ಹೇಳ್ದೆ."
“ಕಲಬೆರಕೆ ದೂರು ಬಂದಿದೇಂತ ಹೆದರಿಸ್ಬೇಕಾಗಿತ್ತು."
“ಕಡೇ ಬಾಣ ಅಂತ ಆ ಅಸ್ತ್ರವನ್ನು ಉಳಿಸಿಕೊಂಡಿದೇನೆ. 'ಚೆನ್ನಾಗಿ ಯೋಚನೆ
ಮಾಡಿ ನಾಳೆ ಬಂದು ತಿಳಿಸಿ'–ಅಂದಿದ್ದೇನೆ."
ಅಷ್ಟರಲ್ಲಿ ಮುಖ್ಯಮಂತ್ರಿಯಿಂದ ರಂಗಧಾಮನಿಗೆ ಕರೆಬಂತು,
ಅವನನ್ನು ಕಂಡೊಡನೆ ಸೌದಾಮಿನಿ ಕೇಳಿದಳು :
"ಯಾಕೆ ಇಷ್ಟು ತಡ ?"
"ಆಗಲೇ ಬಂದೆ,ಒಂದು ಅರ್ಜೆಂಟ್ ಫೈಲಿತ್ತು.”
“ಸೀಮೆ ಎಣ್ಣೇದಾ ?”
ಯುವಮಂತ್ರಿ ನಗೆಬೀರಿದ.
"ಹೌದು."
“ಹಿಂದಿಗಿಂತ ಎರಡು ಪಟ್ಟು. ಪಟ್ಟು ಹಿಡೀರಿ. ಪಕ್ಷದ ಖಜಾನೆ ಬರಿದಾಗಿದೆ.