ಪುಟ:ಮಿಂಚು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮಿಂಚು

73

ಪಕ್ಷಕ್ಕೋಸ್ಕರ ನಿಧಿ ಕೂಡಿಸಬೇಕು. ಎಲ್ಲ ಮಂತ್ರಿಗಳಿಗೂ ಇದನ್ನು ತಿಳಿಸಿಬಿಡಿ.
ಹಿರಿಬೆರಳು ದಿಲ್ಲಿಗೆ ಹೋಗ್ತದೆ; ಕಿರಿಬೆರಳು ರಾಜ್ಯಸಮಿತಿಗೆ",
ಉಳಿದ ಮೂರು ಬೆರಳು ಯಾರಿಗೇಂತ ಅವರು ಕೇಳಿದರೆ?"
“ಕೇಳಬಹುದು-ಅಲ್ಲವೆ? ನೀವು ಒಂದಿಷ್ಟು ರಾಜನೀತಿ ಅಭ್ಯಾಸ ಮಾಡ
ಬೇಕು ರಂಗಧಾಮ್. ಆಪದ್ಧನ, ರಾಜಧನ, ರಹಸ್ಯನಿಧಿ ಅಂತ ಮೂರಿವೆ. ಈ ಲೆಕ್ಕ
ನಾನು ಇಟ್ಟುಕೊಳ್ತೇನೆ."
ನೀಳವಾಗಿ ಉಸಿರೆಳೆದು ಬಿಟ್ಟು, ಧೈರ್ಯ ತಂದುಕೊಂಡು, ಯುವಮಂತ್ರಿ
ಕೇಳಿದ:
“ಇಲಾಖೆಯ ಪಾಲು ಒಂದಿದೆ ಅನ್ತಾರೆ.”
“ಅನ್ನದೆ ಇರ್ತಾರ? ಕೊಸರು ಹಾಕಿಸ್ಕೊಳ್ಳಿ-ಕೊಸರು ! ಮಾಜಿ ಏನೆಂದ?"
“ಬಹಳ ಮೆತ್ತಗಾಗಿದ್ದಾರೆ. ರಾಜ್ಯಪಾಲ ಪದವಿ ಏನಿದ್ದರೂ ತಮ್ಮನ್ನೇ
ಅವಲಂಬಿಸಿದೆಯಂತೆ."
“ಜಾಣಪ್ಪ ನಿಜವಾಗಿಯೂ ವಿವೇಕಿಯಾದಂತಿದೆಯಲ್ಲ! ಸೈಟ್ ಬೇಡವಂತೋ?”
“ಔದಾರ್ಯಕ್ಕಾಗಿ ಉಪಕೃತ ಅಂದ್ರು. ಬಹುಶಃ ಅರ್ಜಿ ಬರಬಹುದು."
"ಕೊಂಕು,ಟೀಕೆ, ಲೇವಡಿ ಏನೂ ಇಲ್ವೊ?"
“ನಾನು ದೂತನಾಗಿ ಹೋದವನು. ಎಷ್ಟು ಬೇಕೋ ಅಷ್ಟೇ ಮಾತಾಡಿ
ದ್ರೂಂತ ತೋರುತ್ತೆ."
ಎರಡು ನಿಮಿಷ ನೆಟ್ಟ ನೋಟದಿಂದ ರಂಗಧಾಮನ ಮುಖವನ್ನು ಸೌದಾಮಿನಿ
ನೋಡಿದಳು. ಯೌವನದ ಸೊಬಗಲ್ಲದೆ ಬೇರೇನೂ ಅಲ್ಲಿ ಕಾಣಿಸಲಿಲ್ಲ.
“ಪಕ್ಷನಿಧಿಗೆ ವಂತಿಗೆ ಸೀಮೆ ಎಣ್ಣೆಯಿಂದಲೇ ಶುರು ಮಾಡಿ.”
“ಆಗಲಿ ಮಾತಾಜಿ.”
“ತಿಂಗಳ ಪತ್ರಿಕಾಗೋಷ್ಟಿ ಹೋಂ ಆಫೀಸಿನಲ್ಲಿ. ಭೋಜನಕ್ಕೆ ಮುಂಚೆ
ಟೆನ್ನಿಸ್. ಕಲಿಯೋಕೆ ಒಂದು ವಾರ ಸಾಕಾ ?"
ಆ ಆಟದಲ್ಲಿ ಸೋಲು ತನಗೇ ಎಂದು ತಿಳಿದಿದ್ದ ರಂಗಧಾಮನೆಂದ:
“ಧಾರಾಳ ಸಾಕು.”
***
ಆ ಸಂಜೆ ಕೋಚಿಂಗ್ ಆರಂಭವಾಯಿತು, 'ನೃಪತುಂಗ' ಹೋಟೆಲಿನ ಲಾನ್'ನಲ್ಲಿ.
ತನಗೆ ತಿಳಿದಷ್ಟನ್ನು ರಂಗಧಾಮ ಹೇಳಿಕೊಟ್ಟ . ಬಳಿಕ ತುಸು ವಿಶ್ರಾಂತಿ, ಒಳಗಿನ
ಕೊಠಡಿಯಲ್ಲಿ. ರಂಗಧಾಮನಿಗೆ ಗೊತ್ತಿರದೇ ಇದ್ದುದನ್ನು- 'ಆಟ'ದ ಸೂಕ್ಷ್ಮ
ಗಳನ್ನು-ಸೌದಾಮಿನಿ ಹೇಳಿಕೊಟ್ಟಳು.