ಪುಟ:ಮಿಂಚು.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

76

ಮಿಂಚು

“ಬೇಗನೆ ಬಂದೇನು ದೈವಕೃಪೆ ಎಂದೆಲ್ಲ ಹೇಳುತೀರಲ್ಲ ? ಸಮಸ್ಯೆಗಳೇ
ನಾದರೂ ಇದ್ದರೆ ರಂಗಧಾಮರಿಂದ ಸಲಹೆ, ಸಹಾಯ ಪಡೀರಿ,” ಎಂದಳು
ಸೌದಾಮಿನಿ,
ಪರಶುರಾಮನ ಅತ್ತೆ-ಮಾವ ಧರ್ಮಪುರಿಯಾಚೆಗಿನ ಹಳ್ಳಿಯವರು,
ಪೋಲೀಸ್ ಅಧಿಕಾರಿ ಅವರನ್ನು ಕರೆಸಿ, ಮಗಳನ್ನು ಮನೆಗೆ ವಾಪಸ್ಸು ಕರೆಸಿಕೊಳ್ಳಿ,
ಡೈವೋರ್ಸ್ ಗಲಾಟೆ ಬೇಡ, - ಆರ್ಥಿಕವಾಗಿ ನಿಮಗೆ ಅನುಕೂಲವಾಗದೆ, ಗಂಡ
ಇನ್ನೊಂದು ಮದುವೆಯಾಗುವುದಕ್ಕೆ ಆಕ್ಷೇಪವಿಲ್ಲ ಅಂತ ಮಗಳ ಕೈಲಿ ಬರೆಸಿಕೊಡಿ,
ಅದಕ್ಕೆ ನೀವೂ ಸಹಿ ಹಾಕಿ, ಪರಶುರಾಮ್ ಇನ್ನು ದೊಡ್ಡ ಸ್ಥಾನದಲ್ಲಿರ್ತಾರೆ,
ಇಡೀ ಧರ್ಮಪುರಿಯನ್ನೇ ಗಿರಗಿರ ತಿರುಗಿಸೋ ಸಾಮರ್ಥ ಅವರಿಗಿದೆ ಎಂದು
ಹಿತಬೋಧೆ ಮಾಡಿದ. ಪರಶುರಾಮ ಜಯಶೀಲನಾದ. ಆಗಲೇ ತಾನು ಹೊಸ
ಬದುಕು ಆರಂಭಿಸಿದ್ದ ಒಬ್ಬಳೊಡನೆ ಹೊರಮನೆ ಪ್ರವೇಶಕ್ಕೆ ಸಿದ್ಧನಾದ, ಸಂಬಳ,
ಉಳಿತಾಯಗಳನ್ನು ಲೆಕ್ಕ ಹಾಕಿದ, ಗಿಂಬಳ ಅಳತೆಗೆ ಸಿಕ್ಕಿರಲಿಲ್ಲ. ಮುಂದೆ ಸಿಕ್ಕಿತು
ಎಂದುಕೊಂಡ
ಗೃಹ ಕಾರ್ಯಾಲಯವನ್ನು ಮುಖ್ಯಮಂತ್ರಿ ಪ್ರವೇಶಿಸುವ ದಿನವನ್ನು ಸರಕಾರಿ
ರಜಾ ದಿನವೆಂದು ಘೋಷಿಸಲಾಯಿತು. ಸಮಾರಂಭಕ್ಕೆ ಸಹಸ್ರಾರು ಜನ ಬರ
ಬೇಕೆಂಬುದು ಮಾತಾಜಿಯ ಬಯಕೆಯಾಗಿತ್ತು. ಆದರೆ ಪೋಲೀಸ್ ಖಾತೆಯ
ನಿರ್ದೇಶಕ “ಕ್ಷಮಿಸಬೇಕು, ಇದು ಸುರಕ್ಷಿತವಲ್ಲ” ಎಂದ. ಗೃಹಕಾರ್ಯದರ್ಶಿ ನೀಡಿದ
ಅಭಿಪ್ರಾಯವೂ ಅದೇ.
ಪರಶುರಾಮ್ ಕಾಣಿಸಿಕೊಂಡ
ಇವತ್ತಿನಿಂದಲೇ ಡ್ಯೂಟಿಗೆ ರಿಪೋರ್ಟ್ ಮಾಡ್ಕೊಳ್ಳಪ್ಪ, ರಾಜ್ಯದ ಮುಖ್ಯ
ಕಾರ್ಯದರ್ಶಿಗೆ ಹೇಳಿದೀನಿ, ಈಗ ವಾರ್ತಾ ಇಲಾಖೆ ನಿರ್ದೇಶಕರಿಗೆ ಫೋನ್
ಮಾಡಿ, ಸಂಜೆ ಒಳಗಾಗಿ ಟೆನ್ನಿಸ್ ಆಟಕ್ಕೆ ಸಂಬಂಧಿಸಿ ಇನ್ನೂರು ಪದಗಳಷ್ಟು ಮಾಹಿತಿ
ಬೇಕು, ಗೋಪ್ಯ”ಅಂತ ತಿಳಿಸಿ,
ಆ ಕೆಲಸ ಮಾಡಿಬಂದ ಪರಶುರಾಮನೆಂದ :
“ಉದ್ಘಾಟನೆಯ ದಿನ ನಾನೂ ಹೊರಮನೆ ಸೇರಿಕೊಳ್ತೀನಿ.”
“ದೈವ ಕೃಪೆಗೆ ಪಾತ್ರರಾದಿರಿ ಅನ್ನಿ, ತಂಗಿ ಮದುವೆ ಮುಂದಕ್ಕೆ ಹಾಕಿದಿರಾ?”
“ಹಿ ಹ್ಹಿ ! ಪಕ್ಷದ ಕಾರ್ಯಾಲಯದಲ್ಲಿ ಇದ್ದಳಲ್ಲ.-ಹರಿಣಾಕ್ಷಿ ? ಅವಳೂ
ನಾನೂ ಸ್ವಲ್ಪ ಸಮಯದಿಂದ ಒಟ್ಟಿಗೆ ವಾಸವಾಗಿದೀವಿ.”
“ಗಾಂಧರ್ವ ವಿವಾಹವೊ ?”
“ತಾವು ಅಧಿಕಾರ ಸ್ವೀಕಾರದ ಸಂಭ್ರಮದಲ್ಲಿದ್ದ ಸಮಯ. ತಮಗೆ ತಿಳಿ
ಸೋದಕ್ಕೆ ಆಗಲಿಲ್ಲ.”
“ಧ್ರುವ ಎಲ್ಲ ಹೇಳಿದ್ದಾರೆ. ಅಧಿಕಾರದ ಅಮಲಿನಲ್ಲಿ ಅದೂ ಇದೂ