ಪುಟ:ಮಿಂಚು.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

77

ಮಾಡೋದಕ್ಕೆ ಹೋಗೋಡಿ, ಮನೇಲೂ ಅಷ್ಟೆ, ಹಿತ ಸಂಸಾರ ಮಿತ ಸಂಸಾರ
ನಿಮಗೆ ಒಳ್ಳೆಯದಾಗಲಿ.”
ಪುಲಕಗೊಂಡ ಪರಶುರಾಮ ವಾರ್ತಾ ಇಲಾಖೆಗೆ ಮತ್ತೊಮ್ಮೆ ಫೋನ್
ಮಾಡಿದ ? "ಆಯಿತೆ ? ಆಯಿತೆ ?”
“ಕಿಷ್ಕಿಂಧಾ' ವಾಣಿಯ ಕ್ರೀಡಾ ಸಂಪಾದಕರನ್ನು ಕರೆ ತರೋದಕ್ಕೆ ಕಾರು
ಹೋಗಿದೆ.”
ಅಂತೂ ಟೆನ್ನಿಸನ್ನು ಕುರಿತ ಟಿಪ್ಪಣಿ ಹಾಳೆ ರಾತ್ರೆ ಮುಖ್ಯಮಂತ್ರಿಯ ಕೈ
ಸೇರಿತು. ಓದಿದ ಅವರಿಗೆ ನಗು ಬಂತು ಕಂಪು ಪೆನ್ಸಿಲಿನಿಂದ ಕೆಲ ವಾಕ್ಯಗಳ
ಕೆಳಗೆ ಗೀಟು ಹಾಕಿದರೂ ಸಂಜೆ ಜತೆಗಿದ್ದರೂ ವಾರ್ತಾ ಇಲಾಖೆಯನ್ನು ಟೆನ್ನಿಸಿಗಾಗಿ
ತಾನು ದುಡಿಸುತ್ತಿದ್ದ ವಿಷಯ ರಂಗಧಾಮನಿಗೆ ಸೌದಾಮಿನಿ ಹೇಳಿರಲಿಲ್ಲ,
ಗೃಹ ಕಾರ್ಯಾಲಯದ ಪ್ರವೇಶದ ದಿನ ಬೆಳಗ್ಗೆ ಹವನ ನಡೆಯಿತು: . ದುಷ್ಟ
ಶಕ್ತಿಗಳನ್ನು ದೂರವಿಡುವುದಕ್ಕೋಸ್ಕರ ಭವನಕ್ಕೆ ದಿಗ್ಬಂಧನವಾಯಿತು. ಮುಖ್ಯ
ಮಂತ್ರಿಯ ಸೂಚನೆಯಂತೆ, ಅವರ ಶ್ರೇಯೋಭಿವೃದ್ಧಿಗಾಗಿ ಹಿಂದೂ ದೇವಾಲಯ
ಮತ್ತಿತರ ಮಂದಿರಗಳಲ್ಲಿ, ಚರ್ಚುಇಗರ್ಜಿಗಳಲ್ಲಿ, ವಿಶೇಷ ಪ್ರಾರ್ಥನೆಗಳಾದುವು.
ಶಾಸಕರ ಭವನದ ವಿಶೇಷ ಕೋಣೆಯಲ್ಲಿ ಪಕ್ಷದ ಕಾದ್ಯಾಲಯದ ವಸತಿ
ಕೊಠಡಿಯಲ್ಲಿ ಇದ್ದ ಸೌದಾಮಿನಿಯ ಸಾಮಾನುಗಳು ಗೃಹ ಕಾರ್ಯಾಲಯಕ್ಕೆ
ಬಂದುವು. ಜಗದಲಪುರದಿಂದ ಹೊರಟಾಗ ಧರ್ಮೇಂದರ್‌ಬಾಬಾ ನೀಡಿದ
ದಂತೇಶ್ವರಿಯ ಪುಟ್ಟ ಮೂರ್ತಿ ಗೃಹಕಾಯ್ಯಾಲಯದ ದೇವರ ಕೋಣೆಯಲ್ಲಿ ವಿರಾಜ
ಮಾನವಾಯಿತು.
ಟೆನ್ನಿಸ್ ಕ್ರೀಡಾಂಗಣದ ಉದ್ಘಾಟನೆ ಸಂಜೆ ಆರು ಗಂಟೆಗೆ ಎಂದು ಅಚ್ಚಾ
ಗಿದ್ದರೂ ಪ್ರತಿಷ್ಠಿತರೂ ಪತ್ರಿಕಾ ಪ್ರತಿನಿಧಿಗಳೂ ಐದು ಗಂಟೆಯಿಂದಲೇ ಬರ
ತೊಡಗಿದರು.
ದಿಲ್ಲಿಯಿಂದ ಹಿಂಬಾಲಿಸಿ ಬಂದಿದ್ದ ಅಂಗರಕ್ಷಕರಲ್ಲಿ ಒಬ್ಬನ ಪತ್ನಿ ಮಾತಾಜಿ
ಯವರ ಪ್ರಸಾಧನ ಕಾರ್ಯಗಳಲ್ಲಿ ನೆರವಾಗುತ್ತಿದ್ದಳು. ಆದೇಶದಂತೆ
ಸೌದಾಮಿನಿಯ ಕೇಶವನ್ನು ಆಕೆ ತುಸು ಮೇಲಕ್ಕೆ ಎತ್ತಿ ಕಟ್ಟಿದಳು. ಕ್ರೀಡೆಯ
ದಿರಸು ಮಾತಾಜಿಗೆ ಮೆಚ್ಚುಗೆಯಾಯಿತು, ಶ್ವೇತ ಸುಂದರಿ, ಮಗ್ಗುಲು ಕೊಠಡಿ
ಯಲ್ಲಿ ರಂಗಧಾಮ ಸಿದ್ದನಾದ. ರಾಕೆಟ್ ಕೈಯಲ್ಲಿ ಹಿಡಿದು ಅತ್ತಿತ್ತ ಬೀಸುತ್ತ
ಸೌದಾಮಿನಿ ತನ್ನ ಎದುರಾಳಿಯ ಬಳಿಗೆ ಹೋಗಿ, ಶೂಸಿನಿಂದ ಕ್ರಾಪಿನ ತನಕ ಅವ
ನನ್ನು ನೋಡಿದಳು.
“ನಾವು ಈಗ ಏನಾದರೂ ಹೇಳಿದರೆ ಅದು ಪರಸ್ಪರ ಪ್ರಶಂಸೆಯಾದೀತು,
ಅಲ್ಲವ ಧ್ರುವ ?”