ಪುಟ:ಮಿಂಚು.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

78

ಮಿಂಚು

“ನಿಜ ಮಾತಾಜಿ."
“ಬನ್ನಿ ಷಾಮಿಯಾನಾಕ್ಕೆ ಹೋಗೋಣ.”
ನಗರದ ಹಿರಿಯ ಟೆನ್ನಿಸ್ ಕ್ರೀಡಾಪಟು ಅಂಪಯರ್ ಆಗಿಲು ಒಪ್ಪಿದ್ದರು,
ಸ್ವಾಗತ ಗೀತೆಯಾದೊಡನೆ, 'ಟಾಸ್'
“ಮಾತಾಜಿ, ನೀವು ಟಾಸ್ ಗೆದ್ದಿದ್ದೀರಿಕಣ ಆರಿಸಿಕೊಳ್ಳಿ.”
“ನಾನು ದಕ್ಷಿಣದಿಂದ ಉತ್ತರಕ್ಕೆ ಬಾರಿಸ್ತೀನಿ,” ಎಂದಳು ಸೌದಾಮಿನಿ,
ಆಟಗಾರರು ಕಣಗಳಗೆ ಇಳಿದಂತೆ ಕರತಾಡನವಾಯಿತು,
“ಲವ್ ಆಲ್' ಸನ್ನಿವೇಶ, ಸೌದಾಮಿನಿಯ ಶರೀರ ತನ್ನೆಲ್ಲ ಬೆಡಗನ್ನು
ಮೆರೆಯುತ್ತ ಶೂ ತುದಿಗಳ ಮೇಲೆ ಅತ್ತಿತ್ತ ಕುಪ್ಪಳಿಸಿತು. ಮೊದಲ ಸಾಲಿನಲ್ಲಿದ್ದ
ಹಲವರೆಂದರು :
---“ಫ್ರಾಕ್ ಮತ್ತು ಶಾರ್ಟ್ ಚೆನ್ನಾಗಿತ್ತು.”
---“ಇದೂ ಒಂದು ಹೊಸ ರೀತಿ.”
ಸೂರ್ಯ ದೂರವಾದ, ದೀಪಗಳು ಬೆಳಗಿದುವು. ಗೃಹಕಾರ್ಯಾಲಯವೂ
ಬಣ್ಣದ ಬಟ್ಟುಗಳಿಂದ ಝಗಝಗಿಸಿತು. ಶಿಳ್ಳು...
ಸೌದಾಮಿನಿಯ ಕೈಗೆ ಚೆಂಡನ್ನಿತ್ತರು. ಸರ್ವ್ ಮಾಡಬೇಕು ; ಆಟ ಆಡ
ಬೇಕು.
ಮುಖ್ಯಮಂತ್ರಿಗೆ ಮುನಿಸು ತನ್ನ ಮೇಲೆಯೇ. ಇದೊಂದೂ ಬೇಕಾಗಿರಲಿಲ್ಲ.
ಆ ರಂಗಧಾಮ ಕೈ ಕೊಟ್ಟರೆ ? ಕೊಟ್ಟು, ಜೀವದಿಂದ ಉಳಿದಾನ ? ಈ
ಮುಂಡೇದು (ಚೆಂಡು) ನೆಟ್ ದಾಟದಿದ್ದರೆ ? ಚೆಂಡನ್ನು ಪ್ಯಾಕೆಟ್‌ನಿಂದ ನೆಲಕ್ಕೆ
ತಟ್ಟುತ್ತ ಸೌದಾಮಿನಿ ಬಾಬಾನನ್ನು ಸ್ಮರಿಸಿದಳು. “ನೀನೇ ಕಾಪಾಡಬೇಕು.”
ಚೆಂಡು ರಂಗಧಾಮನನ್ನು ಹುಡುಕಿಕೊಂಡು ಎದುರು ಕಣಕ್ಕೆ ಹೋಯಿತು.
ಅಷ್ಟು ಮಾಡಿ ಸೌದಾಮಿನಿ ಕಣದ ನಡುವಿಗೆ ಸಾಗಿ ನಿಂತಳು, ಅಲ್ಲಿಗೇ ಬಂತು
ಎದುರಾಳಿ ಕಳುಹಿಸಿದ ಚೆಂಡು, ಬಾರಿಸಿದಳು. ರಂಗಧಾಮ ಎಚ್ಚರಿಕೆಯಿಂದ
ಆಡಿ ಮತ್ತೆ ಮಾತಾಜಿಯ ಬಳಿಗೆ ಚೆಂಡನ್ನು ಕಳುಹಿಸಿದ. ಮರಳಿ ಬಂತು, ಚೆಂಡು
ಗೆರೆಯಾಚೆ ಬಿದ್ದು ಔಟಾಗದಂತೆ ನೋಡಿಕೊಂಡ. ಆತನ ಅಂಗೈ ತುರಿಸುತ್ತಿತ್ತು.
'ಸ್ಮಾಶ್ ಮಾಡು' ಎನ್ನುತ್ತಿತ್ತು ಒಳಗಿನಿಂದೊಂದು ಧ್ವನಿ, 'ಪಿಶಾಚಿ ಸಮ್ಮನಿರು !'
ಎಂದು ತನಗೆ ತಾನೇ ಬಯ್ದ.
ಸಂದಣಿ ಚಪ್ಪಾಳೆ ತಟ್ಟುತ್ತಲೆ ಇತ್ತು, ಇದ್ದಕ್ಕಿದಂತೆ ಚಪ್ಪಾಳೆ ಭೋರ್ಗರೆ
ಯಿತು,
ಮಾತಾಜಿ ಬಾರಿಸಿದ್ದ ಚೆಂಡು ರಂಗಧಾಮನ ಎದುರಲ್ಲಿ ಬಿದ್ದಿತ್ತು. ಎತ್ತಿ
ಬಾರಿಸುವುದು ಸುಲಭವಾಗಿದ್ದರೂ ಆತ ಅದನ್ನು ಮುಟ್ಟಲಿಲ್ಲ.