ಪುಟ:ಮಿಂಚು.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



80

ಮಿಂಚು

ಯಾವಾಗ ಬಾರಿಸಿದ ? ತನ್ನ ಎದುರಿಗೆ ಬರುತ್ತಿದೆಯಲ್ಲ? ಎತ್ತಿದ ಬಲಗೈ
ಕಾರ್ಯೋನ್ಮುಖವಾಗಿದೆ. ಸ್ಮಾಶ್!
"ಫಾರ್ಟಿ_ಲವ್."
ಮತ್ತೂ ಒಂದು ತೀರ್ಪು:
"ಲವ್ ಗೇಮ್."
ಜಯಕಾರವೇನು ! ಕರತಾಡನವೇನು !
ರಂಗಧಾಮ ನೆಟ್ಟಿನೆಡೆಗೆ ಬಂದ. ಸೌದಾಮಿನಿಯೂ ಅತ್ತ ಸರಿದಳು. ಅಪ್ಪಿ
ಕೊಳ್ಳುವುದಕ್ಕೂ ಸಿದ್ಧ. ಅದರೆ ನಿಯಮಾನುಸಾರ (ಅಥವಾ ಪಾರಂಪರಿಕ ಶಿಷ್ಟಾ
ಚಾರ) ಹಸ್ತಲಾಘವ ಮಾತ್ರ ಸಾಧ್ಯ.
ಮಂತ್ರಿಗಳೆಲ್ಲ ಬಂದು (ಧ್ರುವನನ್ನು ಹೊರತುಪಡಿಸಿ) ಕೈ ಜೋಡಿಸಿ ನಮಸ್ಕ
ರಿಸಿ ಮಾತಾಜಿಗೆ ಅಂಭಿನಂದನೆ ಸಲ್ಲಿಸಿದರು. ಪತ್ರಿಕಾಪ್ರಪಂಚದ ಹಲವರು, ಗಣ್ಯ
ರಲ್ಲಿ ಕೆಲವರು ಹಸ್ತಲಾಘವವನ್ನೇ ನೀಡಿದರು.
ಉದ್ಘಾಟಿತ ಲಾನ್ ಟೆನ್ನಿಸಿನ ಪ್ರಥಮ ಆಟದ ಪಾತ್ರಧಾರಿಗಳು ತಮ್ಮ ತಮ್ಮ
ಕೊಠಡಿಗಳಿಗೆ ಹೋಗಿ ಉಡುಪು ಬದಲಾಯಿಸಿದರು. ಶ್ವೇತಾಂಬರಿ ಸೌದಾಮಿನಿ
ಯತ್ತ ಹೋಗಿ ರಂಗಧಾಮನೆಂದ:
“ಅದ್ಭುತವಾಗಿ ಆಡಿದಿರಿ."
“ನಿಮ್ಮ ಪ್ರಶಂಸೆ ನನ್ನ ಪಾಲಿಗೆ ಬಾದಾಮಿಹಾಲು.”
'ನೃಪತುಂಗ' ಹೊಟೆಲಿನವರು ಚಪ್ಪರವನ್ನು ಮುಂದಿನ ಕಾರ್ಯಕ್ರಮಕ್ಕೆ ಆಣಿ
ಗೊಳಿಸಿದರು.
ಹಿರಿಯ ಪತ್ರಿಕಾ ಪ್ರತಿನಿಧಿ ಅಂದ :
“ಗೋಷ್ಠಿ ಮುಗಿಸಿಯೇ ಭೋಜನಕೂಟ ಮೇಲಲ್ಲವೆ?"
ಮುಖ್ಯಮಂತ್ರಿಯ ಒಪ್ಪಿಗೆ ದೊರೆತೊಡನೆ ಗೃಹ ಕಾರ್ಯಲಯದ ಕಿರಿಯ
ಸಭಾಂಗಣ ಜೀವತಳೆಯಿತು.
ಸೌದಾಮಿನಿ “ಎಲ್ಲರಿಗೂ ನಮಸ್ಕಾರ" ಎನ್ನುತ್ತ ನಡೆದು ಬಂದು ಮುಖ್ಯ
ಮಂತ್ರಿಯ ಪೀಠದಲ್ಲಿ ಕುಳಿತಳು.
“ಸರ್ವಿಸ್ ನಿಮ್ಮಿಂದಲೆ ಆರಂಭ” ಎಂದಳು.
ಪತ್ರಿಕಾ ಬಳಗದಿಂದ ಮೊದಲ ಪ್ರಶ್ನೆ :
“ವಿಂಬಲ್ಡನ್ನಲ್ಲಿ ಪಟ್ಟಾಭಿಷಿಕ್ತೆಯಾಗುವ ಮಹತ್ವಾಕಾಂಕ್ಷೆ ತಮಗೆ ಉಂಟೆ?"
“ಇಲ್ಲ, ಕಿಷ್ಕಿಂಧೆಯ ಜನರ ಒಲವಿನ ಅಭಿಷೇಕ ನನಗೆ ಸಾಕು.”
“ಬಹಳ ಅನುಭವಿಯಂತೆ ಆಡಿದಿರಿ. ಕೋಚ್ ಯಾರು ಅಂತ ಕೇಳಬಹುದೆ?"
"ಜಗದಲಪುರದ ಧರ್ಮೇಂದರ್ ಬಾಬಾ ಎರಡು ವರ್ಷ ಹಿಂದೆ ನನ್ನ ಕೈಗೆ
ಚೆಂಡು ಮತ್ತು ರಾಕೆಟ್ ಕೊಟ್ಟರು."