ಪುಟ:ಮಿಂಚು.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

81

ಅಷ್ಟು ಹೇಳಿ ಮುಖ್ಯಮಂತ್ರಿ ರೆಪ್ಪೆ ಮುಚ್ಚಿ ತೆರೆಯದೆ, ದೂರದಲ್ಲಿ ಇತರ
ಮಂತ್ರಿಗಳ ಸಾಲಿನಲ್ಲಿ ಕುಳಿತಿದ್ದ ರಂಗಧಾಮನತ್ತ ನೋಡಿದಳು. ಅವನ ಬಾಯಿ
ತೆರೆದುಕೊಂಡು ಹಾಗೆಯೇ ಇತ್ತು ಹಲವು ನಿಮಿಷ, ತನ್ನೆದುರು ಕ್ಯಾಮರಾಗಳು
ಕಾಣಿಸಿದಂತಾಗಿ ರಂಗಧಾಮ ಬಾಯಿ ಮುಚ್ಚಿದ,
ಒಬ್ಬ ಪತ್ರಿಕಾ ಪ್ರತಿನಿಧಿ ಕೇಳಿದ :
ತಮ್ಮ ಹವ್ಯಾಸಗಳೇನು ? ಅಂತ ಆ ದಿನ ಕೇಳಿದಾಗ ಸೇವೆ_ ಸೇವೆ_
ಸೇವೆ ಎಂದಿದ್ದಿರಿ. ಈ ದಿನ ನಿಮ್ಮ ಕ್ರೀಡಾ ಪ್ರತಿಭೆ ಕಂಡ ಮೇಲೆ, ವಿನಯ
ಸಂಪನ್ನೆ ಯಾದ್ದರಿಂದ ನೀವು ಮುಚ್ಚು ಮರೆ ಮಾಡುತ್ತಿದ್ದೀರಿ ಅನಿಸ್ತಿದೆ. ಫುಟ್
ಬಾಲ, ಕ್ರಿಕೆಟ್...?”
“ಇಲ್ಲ. ಟೆನ್ನಿಸ್ ವಿಷಯ ಏನು ಬೇಕಾದರೂ ಕೇಳಿ.”
ಗೋಷ್ಠಿಯಲ್ಲಿ ಒಬ್ಬ ಕ್ರೀಡಾ ಸಂಪಾದಕನಿದ್ದ. ವಿಶೇಷ ಆಸಕ್ತಿಯಿಂದ
ವಾರ್ತಾಗೋಷ್ಠಿಗೆ ಬಂದವನು. ಆತ ಕೇಳಿದ :
“ಲವ್ ಗೇಮ್ ಆಗಬೇಕಾದರೆ ಹದಿನೈದು, ಮೂವತ್ತು, ನಾಲ್ವತ್ತು
ಯಾಕೆ ? ಒಂದು, ಎರಡು, ಮೂರು ಯಾಕಾಗಬಾರದು ?”
“ಟೆನ್ನಿಸ್ ಯೂರೋಪಿನಲ್ಲಿ ಆರಂಭವಾದಾಗ ಈ ಪ್ರಶ್ನೆಗೆ ಉತ್ತರವನ್ನು
ದೊಡ್ಡ ಗಡಿಯಾರದ ದುಂಡು ಮುಖ ಕೊಟ್ಟಿತು. ದೊಡ್ಡ ಮುಳ್ಳು ಚಲಿಸುತ್ತ
೧೫-೩೦-೪೫ ಹೀಗೆ ಗುರುತಿಸುತ್ತಿದ್ದು, ಆ ತಜ್ಞರಿಗೆ ಇದೇ ಚೆನ್ನ ಅನಿಸಿತು.
೪೦ಕ್ಕೆ ನಿಲ್ಲಿಸಿದರು.”
“ಹೀಯರ್ ! ಹೀಯರ್ !” ಎಂದು ಹಲವು ಸ್ವರಗಳು ಸುತ್ತಲಿಂದ ಕೇಳಿಸಿದುವು.
“ಈ ಚಂಡಿ ಪ್ರಚಂಡಿ !” ಎಂದುಕೊಂಡ ರಂಗಧಾಮ.
ವಾರ್ತಾ ಇಲಾಖೆಯ ನಿರ್ದೇಶಕ ಹೆಮ್ಮೆಯಿಂದ ಬೀಗಿದ.
ಮುಖ್ಯಮಂತ್ರಿ ಇನ್ನೂ ಅಂದರು :
“ಶುರುವಿನಲ್ಲಿ ಇದು ಹೆಂಗಸರ ಆಟ ಅಂತ ಮೂದಲಿಸ್ತಿದ್ರು. ಗ್ಯಾಕೆಟ್ ಬರುವ
ವರೆಗೆ ಇದಕ್ಕೆ ಅಂಗೈ ಆಟ ಅಂತ ಹೆಸರಿತ್ತು. ಫ್ರಾನ್ಸಿನಲ್ಲಿ ಹದಿನಾರನೇ ಶತ
ಮಾನ ಟೆನ್ನಿಸಿನ ಸ್ವರ್ಣಯುಗ ಅನಿಸ್ಕೊಳ್ಳು, ಆಲಿವರ್ ಕ್ರಾಮ್ವೆಲ್- ಚಾರ್ಲ್ಸ್
ದೊರೆಯ ರುಂಡ ಚೆಂಡಾಡಿದವನು-ಟೆನ್ನಿಸಿನ ತಲೆಗೆ ಮೊಟ್ಟಿದ. ಪುನಃ ಅರ
ಸೊತ್ತಿಗೆ ಬಂದಮೇಲೆ ಟೆನ್ನಿಸ್ ಮೆರೆಯಿತು.”
ಗೋಷ್ಠಿಯಲ್ಲಿದ್ದವರೂ ಇತರರೂ ಎದ್ದು ಒಂದೇ ಸಮನೆ ಚಪ್ಪಾಳೆ ತಟ್ಟಿದರು:
ಎಲ್ಲರೂ ಎದ್ದು ದನ್ನು ಕಂಡು ನಿಶ್ಚಲನಾಗಿದ್ದ ರಂಗಧಾಮನೂ ಎದ್ದು ನಿಂತು ಕರ
ತಾಡನ ಮಾಡಿದ.