ಪುಟ:ಮಿಂಚು.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

83



೧೧

ವಿಮಾನದ ಮೂತಿ ತಿರುಗುವ ಗಿರಿಗಿಟಿಯಾದಂತೆ ಈ ನಾಲ್ವರು ಬಿರುಸಿನ
ಹೆಜ್ಜೆ ಇಡುತ್ತ ಏರುವ ಏಣಿಯತ್ತ ನಡೆದರು, ಸಿಬ್ಬಂದಿ ಮೊದಲೇ ಬಂದು
ಬ್ಯಾಗೇಜ್, ಟಿಕೆಟ್ ಎಲ್ಲವನ್ನೂ ತೋರಿಸಿ ನೇರ್ಪಡಿಸಿದ್ದರು. ವೈಯಕ್ತಿಕ ಅಂಗ
ರಕ್ಷಕ, ಮುಖ್ಯಮಂತ್ರಿ, ಆಪ್ತ ಸಹಾಯಕ, ಅವನ ಹಿಂದೆ ಇನ್ನೊಬ್ಬ ಅಂಗರಕ್ಷಕ,
(ಈ ಅಂಗರಕ್ಷಕರು ಸೌದಾಮಿನಿಯ ಜತೆ ದಿಲ್ಲಿಯಿಂದ ಬಂದವರು, ಪುಟ್ಟ ಸಂಸಾರ
ಗಳ ಸಮೇತರಾಗಿ, ಮುಖ್ಯಮಂತ್ರಿಯ ದಿಲ್ಲಿಯಾನದ ವೇಳೆ ಇವರಿಗೂ ಹಾರಾ
ಟದ ಅವಕಾಶ ಇದಂತೂ ಕಲ್ಯಾಣನಗರದಿಂದ ದಿಲ್ಲಿಗೆ ಮೊದಲ ಪ್ರವಾಸ
ವಿಮಾನದೊಳಗೆ ಸುದ್ದಿ ಹರಡಿತು : “ ಕಿಷ್ಕಿಂಧೆಯ ಮುಖ್ಯಮಂತ್ರಿಣಿ ಸೌದಾಮಿನಿ
ದೇವಿ ದಿಲ್ಲಿಗೆ ಈ ಯಾನದಲ್ಲಿ ನಿಮ್ಮೊಂದಿಗಿದ್ದಾರೆ,'
ಹೊರಟುದೇ ಸಂಜೆ. ಇನ್ನು ತನ್ನ ಪಾಲಿಗೆ ಹಗಲೆಂಬುದಿಲ್ಲ ಇರುಳೆಂಬುದಿಲ್ಲ.
ಸದಾ ದುಡಿಮೆ. ನಡುರಾತ್ರೆ ಮುಂಚೆ ದಿಲ್ಲಿ ಸೇರಬಹುದು ಮುಂಜಾವಕ್ಕೆ ಮುಂಚೆ
ನಿದ್ದೆ ಹೋಗಬಹುದು. ರಾಷ್ಟ್ರ ಪಕ್ಷದ ಮಹಾ ಕಾರ್ಯದರ್ಶಿಯ ಅತಿಥಿ ತಾನು,
ಈ ಸಲ. ಹಿಂದಿನ ರಾತ್ರೆ ಫೋನ್ ಮಾಡಿದಾಗ “ವಿಮಾನ ನಿಲ್ದಾಣದಲ್ಲಿ ಇದಿರ್ಗೊ
ಛೇನೆ” ಎಂದಿದ್ದ,
ರಾಷ್ಟ್ರದ ರಾಜಧಾನಿಯಲ್ಲಿದ್ದ ಕಿಷ್ಕಿಂಧಾ ಕುಟೀರದಿಂದ ಜೀಪು ಬಂದು
ಕಾದಿತ್ತು, ಮುಖ್ಯಮಂತ್ರಿಯ ಸಿಬ್ಬಂದಿಗಾಗಿ, ರಾಷ್ಟ್ರಪಕ್ಷದ ಮಹಾ ಕಾರ್ಯ
ದರ್ಶಿಯ ವಾಹನವೂ ಇತ್ತು.
“ನಾನೀಗ ಕಾರ್ಯದರ್ಶಿಯವರ ಮನೆಗೆ ಹೋಗೇನೆ. ನಾಳೆ ಬೆಳಗ್ಗೆ
ಕುಟೀರಕ್ಕೆ ಬತ್ತೇನೆ” ಎಂದಳು ಪರಶುರಾಮನಿಗೆ.
“ಹೂಂ, ಮಾತಾಜಿ,”
“ರಾಮ್‌ಧನ್, ಭೋಲಾನಾಥ್, ನಾನು ಬೆಳಗ್ಗೆ ಕುಟೀರಕ್ಕೆ ಬಂದಮೇಲೆ
ನೀವು ನಿಮ್ಮ ಮನೆಗಳಿಗೆ ಹೋಗಿ ಬರುವಿರಂತೆ.”
“ಜೀ ಮಾತಾಜಿ."
ಗುಡ್ಡ ಬೆಟ್ಟಗಳನ್ನು ಹಸುರು ಕಾಡು ಆವರಿಸಿದಂತಿತ್ತು, ಸೌದಾಮಿನಿ
ಹೊದೆದುಕೊಂಡಿದ್ದ ಶಾಲು, ಸೂಟ್‌ಕೇಸ್‌ ಬಂದೊಡನೆ, ಜೀಪ್ ಹೊರಟೊಡನೆ,
ಕಾರ್ಯದರ್ಶಿಯ ವಾಹನ ಬೇರೆ ದಾರಿ ಹಿಡಿಯಿತು,