ಪುಟ:ಮಿಂಚು.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

86

ಮಿಂಚು

“ದಿಲ್ಲಿಯ 'ನೃಪತುಂಗ'ಕ್ಕೊ ?
ಮಹಾ ಕಾರ್ಯದರ್ಶಿ ಉತ್ತರಿಸಿದ:
“ನನ್ನ ಕೈಗಾರಿಕೋದ್ಯಮಿ ಮಿತ್ರನದೊಂದು ಅತಿಥಿ ಗೃಹ ಇದೆ. ಅಲ್ಲಿ ಅಡುಗೆ
ಸಿದ್ಧವಾಗಿರುತ್ತಾರೆ."
“ನಾವಿಬ್ಬರೇ ?”
“ಆಳುಗಳಿರ್ತಾರೆ. ಅವರು ಲೆಕ್ಕಕ್ಕಿಲ್ಲ. ಅಲ್ಲ, ಸೌದಾ, ನೀನು ಟೆನ್ನಿಸ್
ತಾರೆ ಆದೆ ಅನ್ನೋ ಸುದ್ದಿ ಎಲ್ಲ ಪತ್ರಿಕೆಗಳಲ್ಲೂ ಇತ್ತಲ್ಲ ?”
“ರಾಜ್ಯದ ಜನರಿಗೆ ಖುಶಿಯೋ ಖುಶಿ. ಆದರೆ ನಿನ್ನೆ ಸಂಪುಟದ ಸಭೆಯಲ್ಲಿ”
“ಏನಾಯ್ತು ?
“ರಾಜ್ಯದ ಪ್ರತಿಯೊಂದು ಶಾಲೆಯಲ್ಲ ಟೆನ್ನಿಸ್ ಲಾನ್ ಇರಬೇಕು-ಆಂದೆ.
ಒಬ್ಬನಿಂದ ವಿರೋಧ ಬಂತು.”
“ಯಾರು ಆತ ?”
“ಆ ದಿನ ಟೆನ್ನಿಸ್ ಆಟದಲ್ಲಿ ನನ್ನ ಎದುರಾಳಿಯಾಗಿದ್ದು ಸೋತವನು.”
“ಇನ್ನೂ ಹುಡುಗ, ತಲೆ ಸವರಿ ಸರಿಪಡಿಸು.”
“ಅಧಿಕ ಪ್ರಸಂಗಿ....”
“ಯಾರು-ನಾನೊ ? ಅವನೊ ?”
ಸೌದಾಮಿನಿಯ ತಲೆ ಮಹಾ ಕಾರ್ಯದರ್ಶಿಯ ಭುಜದ ಬಾಗಿತು.
“ಜಾಣಪ್ಪಗೊಂದು ರಾಜ್ಯಪಾಲ ಹುದ್ದೆ. ಐ. ಸಿ. ಎಸ್ ಚೀಫ್ ಸೆಕ್ರೆಟರಿಗೆ
ಕಡ್ಡಾಯ ನಿವೃತ್ತಿ ಅಥವಾ ವರ್ಗಾವಣೆ,”
“ಆಗಲೇ ನಿರ್ಧಾರವಾಗಿದೆ, ಜಾಣಪ್ಪ ಮುಂದಿನ ತಿಂಗಳು ಕೇರಳಕ್ಕೆ ಹೋಗ್ತಾರೆ.
ಚೀಫ್ ಸೆಕ್ರೆಟರಿಯನ್ನು ಇಲ್ಲಿಗೆ ಕರೆಸಿದರಾಯ್ತು. ಕಡ್ಡಾಯ ನಿವೃತ್ತಿ ಅಂಥದೆಲ್ಲ ಬೇಡ,
ದುಡುಕಬಾರದು ಸೌದಾ, ಕಿಷ್ಕಂಧೆ ಮೂಲದ ಹಿರಿಯ ಐಎಎಸ್ ಅಧಿಕಾರಿಗಳು
ಮೂವರು ನಾಲ್ವರು ಇರಬೇಕು, ಒಳ್ಳೆಯವನನ್ನು ಆರಿಸಿಕೊಡ್ತೀನೆ.”
“ಉಪಕೃತ.”
“ತಿಂಗಳ ಕಾಣಿಕೆಗೆ ಏರ್ಪಾಟು ಮಾಡಿದೀಯಾ ?”
“ಓಹೋ ! ಹಿರಿಬೆರಳು ನಿಮಗೆ ಕಿರುಬೆರಳು ರಾಜ್ಯ ಸಮಿತಿಗೆ....”
“ಪ್ರಧಾನಿಯ ಕಿವಿಗೆ ಈ ಬೆರಳು ಗಿರಳು ಸುದ್ದಿ ಬಿದ್ದರೆ ಸಿಟ್ಟಾಗ್ತಾರೆ.”
“ಬೇರೆ ಯಾವ ವಿಧಾನ ಅನುಸರಿಸಿ ?”
“ಹೊಸ ಸಲಹೆ ಕೊಟ್ಟಿದ್ದೇನೆ. ಒಂದೊಂದು ರಾಜ್ಯಕ್ಕೆ ಇಷ್ಟಿಷ್ಟು, ಹೆಚ್ಚಿನ
ಹಣಕ್ಕೆ ಮುಖ್ಯಮಂತ್ರಿ ಕೋಶಾಧಿಕಾರಿ.”
"ಇದೇ ಮೇಲು.”
“ಎಲ್ಲ ರಾಜ್ಯಗಳಿಂದ ಹಣ ಯಾರಿಗೆ ಬರುತ್ತೆ ಗೊತ್ತೋ ?"