ಪುಟ:ಮಿಂಚು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

87

"ನಿಮಗಲ್ಲವ ದೊರೆ ?”
“ಬುದ್ಧಿವಂತ, ನನ್ನ ಪ್ರಾಣ.”

***

ಮಹಾ ಕಾರ್ಯದರ್ಶಿ ಅಮೃತ ಸೇವಿಸಿದರು. “ದಿಲ್ಲಿಗೆ ಬಂದಾಗ ದಿಲ್ಲಿ
ಯವರ ಹಾಗಿರಬೇಕು,” ಎಂದು ಹೇಳಿ, ಸೌದಾಮಿನಿಯನ್ನೂ ಅಮೃತ ಪಾನಕ್ಕೆ
ಒಪ್ಪಿಸಿದರು.
ಅಮೃತವನ್ನೂ ಒಳಗೊಂಡ ಲೇಹ್ಯ ಪಕ್ಷದವಳು ತಾನೆಂದು ಸೌದಾಮಿನಿ
ಹೇಳಲಿಲ್ಲ. ಬದಲು, ಅವಳೆಂದಳು :
ಅಮೃತಕ್ಕೆ ಪರಮಾತ್ಮ ಅಂತಲೂ ಹೇಳ್ತಾರೆ, ಆಲ್ಲವೆ ?”
“ಓಹೋ, ಬೇಕಿದ್ದರೆ ಮಹಾತ್ಮ ಅಂತಲೂ ಹೇಳಬಹುದು.”
“ಮಹಾತ್ಮನನ್ನು ದೇವರು ಅಂತ ಭಾವಿಸುವ ಭೋಳೇ ಜನರೂ ಇದ್ದಾರೆ.”
ಅವತಾರ ಪುರುಷ. ದೇಶದ ನಾಲ್ಕು ಮೂಲೆಗಳಲ್ಲಿ ದೇವಸ್ಥಾನಗಳನ್ನು
ಕಟ್ಟಿಸಿ, ಗಾಂಧಿ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ಏರ್ಪಾಟು ಮಾಡುವ
ಯೋಚನೆಯೂ ಒಂದಿದೆ.”
“ಎಷ್ಟನೇ ಪಂಚವಾರ್ಷಿಕ ಯೋಜನೇಲಿ ?”
“ಪಂಚಲೋಹದ ವಿಗ್ರಹ.”
“ಮುಂದಿನ ಶತಮಾನದಲ್ಲಿ ವಿಗ್ರಹಚೋರರು
ಮಹಾತ್ಮಭಕ್ತರಾಗಬಹುದು.
ವಿದೇಶಗಳಿಗೆ ರವಾನೆ.”
“ದೇವಸ್ಥಾನಗಳ ಸುತ್ತಲೂ ಎತ್ತರದ ಪ್ರಾಕಾರ, ಮಹಾದ್ವಾರಕ್ಕೆ ಅತ್ಯಾ
ಧುನಿಕ ಬೀಗ ವ್ಯವಸ್ಥೆ,”
“ಸತ್ತು ಅಮರನಾದ. ಪುನಃ ಸೆರೆಮನೆ ಸೇರಿ, ಪೂಜೆಗೊಂಡು, ಭಕ್ತಾದಿ
ಗಳನ್ನು ಹರಸಿದ.”
“ನೀನು ವಾಚಾಳಿಯಾಗಿಬಿಟ್ಟೆ.”
“ನೀವೆ ಅಲ್ಲವ ಹೇಳಿಕೊಟ್ಟದ್ದು ರಾಜಕಾರಿಣಿಗೆ ಮಾತು. ಮುಖ್ಯ ಅಂತ ?”
“ಯೋಗ ಭೋಗ ಎರಡರಲ್ಲೂ ಸಮನ್ವಯ ಸಾಧಿಸಿದವಳು ನೀನು, ಏಳು
ಊಟಕ್ಕೆ.”
ಭೋಜನ ಭರ್ಜರಿಯಾಗಿತ್ತು. ಅಡುಗೆಯವರನ್ನು ದಿಲ್ಲಿಗೆ ಕಳಿಸಿ ಒಂದಿಷ್ಟು
ತರಬೇತಿ ಕೊಡಿಸೂಂತ 'ನೃಪತುಂಗ' ದವನಿಗೆ ಹೇಳಬೇಕು ಎಂದುಕೊಂಡಳು
ಸೌದಾಮಿನಿ,