ಪುಟ:ಮಿಂಚು.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

89

ವಿಶಿಷ್ಟತೆಯನ್ನು ಮನಗಂಡಿರುವ ಮನುಷ್ಯ. ನೀನು ನಿನ್ನ ಆ ಚೀಫ್ ಸೆಕ್ರೆಟರಿಗೆ
ಫೋನ್ ಮಾಡಿ, ಚೌಗುಲೆ ಬಂದ ತಕ್ಷಣ ಚಾರ್ಜ್ಕೊಟ್ಟು ದಿಲ್ಲಿಗೆ ಹೊರಡೋದಕ್ಕೆ
ಆಜ್ಞೆ ಕೊಡು. ಅಂಥವರಿಗೆ ನಮ್ಮ ಕಾರ್ಯಸೌಧದಲ್ಲಿ ಬೇಕಾದಷ್ಟು ಕಸದ ಬುಟ್ಟಿ
ಗಳಿವೆ.”
ಕುಟೀರದ ಆವರಣಕ್ಕೆ ಕಾರು ನಿಧಾನವಾಗಿ ಚಲಿಸಿದೊಡನೆ, ಬೀಡಿ ಸೇದುತ್ತ
ಮೆಟ್ಟಲ ಮೇಲೆ ಕುಳಿತಿದ್ದ ರಾಮ್‌ಧನ್ ಬೀಡಿಯನ್ನು ಹೂವಿನ ಕುಂಡಕ್ಕೆ ಚುರುಟಿ,
ಚಟ್ಟನೆದ್ದು ಸೆಲ್ಯೂಟ್ ಕೊಟ್ಟು ಕಾರಿನ ಹಿಂಬಾಗಿಲು ತೆರೆದ. ಇಳಿದುದು ಸೌದಾಮಿನಿ
ಒಬ್ಬಾಕೆಯೇ, ಡ್ರೈವರ್‌ ಸೂಟ್‌ಕೇಸ್ ಕೊಟ್ಟ, ಕಾರು ತುಸು ಹಿಂದಕ್ಕೆ ಚಲಿಸಿ
ರಸ್ತೆಗಿಳಿಯಿತು. ಇಳಿದನಿಯಲ್ಲಿ ಸೌದಾಮಿನಿ ಗದರಿದಳು :
“ಕತ್ತೆ, ಅವರಿಗೆ ಸೆಲ್ಯೂಟ್ ಕೊಡೋ"
ಕಾರಿನಲ್ಲಿದ್ದ ನೇತಾರರಿಗೆ ರಾಮ್‌ಧನ್ ಸೆಲ್ಯೂಟ್ ಕೊಟ್ಟ.
ಕುಟೀರದ ಒಳಭಾಗದಲ್ಲಿ ಕಾಫಿ ಹೀರುತ್ತಿದ್ದ ಪರಶುರಾಮ್, ಮುಖ್ಯಮಂತ್ರಿ
ಬಂದರೆಂದು ಬೋಲಾನಾಥನಿಂದ ತಿಳಿದು, ಕಪ್ಪಿನಲ್ಲಿದ್ದುದನ್ನು ಅವಸರದಲ್ಲಿ ಗುಟು
ಕರಿಸಿ ದ್ವಾರದ ಬಳಿಗೆ ಬಂದ. ಅವನ ನಮಸ್ಕಾರ ಮತ್ತು ಬೋಲಾನಾಥನ ಸೆಲ್ಯೂಟ್
ಸೌದಾಮಿನಿಗೆ ಒಟ್ಟಿಗೇ ದೊರೆತುವು.
ಕುಟೀರದ ಅವ್ಯವಸ್ಥೆ ಕಂಡು ಸೌದಾಮಿನಿ ದಂಗಾದಳು, ಕಿಷ್ಕಿಂಧೆ ವಾರ್ತಾ
ಕೇಂದ್ರದಲ್ಲಿ ಹಳೆಯ ಮೂರು ಪೇಪರುಗಳಷ್ಟೆ ಇದ್ದು ವು. ಇದ್ದ ಮೂರು ಕೊಠಡಿ
ಗಳಲ್ಲಿ ಕಿಷ್ಕಿಂಧೆಯ ಲೋಕಸಭಾ ಸದಸ್ಯರ ಶಿಫಾರಸು ಪತ್ರದೊಡನೆ ಕಲ್ಯಾಣನಗರ
ದಿಂದ ಬಂದಿದ್ದ ಅಪರಿಚಿತರು ಠಿಕಾಣಿ ಹೂಡಿದ್ದರು, ಸೋಫಾಗಳು ಹರಿದಿದ್ದು ವು.
ಸೌದಾಮಿನಿಯ ಮೈ ಉರಿಯಿತು. ಅವಳು ಬುಸುಗುಟ್ಟುತ್ತ ಹೊರಬಂದಳು,
ಕಿಷ್ಕಿಂಧೆಯ ರಾಜಧಾನಿಯ ಸುಪ್ರಸಿದ್ದ ರೋಜಾ ಗಿಡಗಳು ಆರೈಕೆಯಿಲ್ಲದೆ
ಸೊರಗಿದ್ದುವು.
ಫೋನಿನ ಕರೆಗಂಟೆ ಸದ್ದು ಮಾಡಿತು, ಪರಶುರಾಮ್ ಅಭ್ಯಾಸಬಲದಿಂದ
ಕೈಚಾಚಿದ.
“ಸದ್ಯಃ ಈ ಫೋನೊಂದು ಸತ್ತಿಲ್ಲವಲ್ಲ !” ಎಂದು ಮುಖ್ಯಮಂತ್ರಿ ಮೊದ
ಲಿಕೆಯ ಉದ್ಘಾರ ತೆಗೆದಳು.
“ಕಿಷ್ಕಿಂಧಾ ಕುಟೀರ.”
'ಪರಶುರಾಮ್‌ಜಿ, ಸಿಎಂ. ಬಂದರಾ ?'
"ಹ್ಞ."
“ಓ ದೇವರೇ ! ಜೀಪ್ ಕೆಟ್ಟು ಕೂತಿದೆ. ಗರಾಜಿನವನ ವಶಕ್ಕೆ ಕೊಟ್ಟು
ಫಟ್ ಫಟಿಯಲ್ಲಿ ಬತ್ತೇನೆ. ನನ್ನ ಪರವಾಗಿ ಸಿ, ಎಂ. ಅವರಿಗೆ'___
“ಆದಷ್ಟು ಬೇಗನೆ ಬನ್ನಿ.”