ಪುಟ:ಮಿಂಚು.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

92

ಮಿಂಚು

“ನಿಮ್ಮ ಹೆಸರೇನು ?”
(ನಡು ಬಗ್ಗಿಸಿ) “ಮಾತಾಜಿಯವರು ಈ ಬಡವನನ್ನು ಬಹುವಚನದಿಂದ
ಕರೆಯಬಾರದು, ನಾನು ಶ್ರೀಪಾದ.”
“ಆಚಾರ್ಯನೊ ? ರಾಯನೊ ?”
“ಎರಡರ ಬಳಕೆಯೂ ಉಂಟು.”
“ಒಳ್ಳೇದು. ಇವತ್ತು ಮಧ್ಯಾಹ್ನದ ಭೋಜನ ಇಲ್ಲಿಯೇ.”
“ಬೆಳಗ್ಗೆ ತಮಗೆ ತೊಂದರೆಯಾಯ್ತು. ನಮ್ಮನ್ನೆಲ್ಲ ಕ್ಷಮಿಸ್ಬೇಕು.”
“ಹೋಗಿ, ನಿಮ್ಮ ಕೆಲಸ ನೋಡಿ,”
“ಮೇಲೆ ಟ್ಯಾಂಕಿಗೆ ನೀರು ತುಂಬಿಸ್ತಿದ್ದಾರೆ. ತಾವು ಸ್ನಾನಮಾಡಿ ತುಸು
ವಿಶ್ರಾಂತಿ ತೆಗೆದುಕೊಳ್ಳಿ.”
ಹೊರಗೆ ಬಂದ ಶ್ರೀಪಾದ ತನ್ನ ದ್ವೀಪಕ್ಕೆ ಲಂಘಿಸುತ್ತಿದ್ದಂತೆ ಫೆರ್ನಾಂಡೀಸ್
ಅವನ ಬೆನ್ನಿಗೆ ಗುದ್ದಿ ಮೆಚ್ಚುಗೆ ಸೂಚಿಸಿದ.
ಪರಶುರಾಮ ಬಂದೊಡನೆ ಸೌದಾಮಿನಿ ಕೇಳಿದಳು :
“ಈ ನಮ್ಮ ಕುಟೀರಕ್ಕೆ ದಿಲ್ಲಿಯ ಬೆಳಗ್ಗಿನ ಪತ್ರಿಕೆಗಳು ಬರೋದಿಲ್ಲೊ ?”
ಬರುತ್ತಿದ್ದುವು, ಫೆರ್ನಾಂಡೀಸನ ಮನೆಯ ದಾರಿಯಾಗಿ, ಇವತ್ತು ಗಡಿಬಿಡಿ
ಯಲ್ಲಿ ಪತ್ರಿಕೆಗಳನ್ನು ಮನೆಯಲ್ಲಿ ಮರೆತು ಬಂದಿದ್ದ. ಇದ್ದುದನ್ನು ಪರಶುರಾಮ
ನಿಗೆ ಆತ ತಿಳಿಸಿ, “ನಿಮಿಷದಲ್ಲಿ ಬಂದ್ಬಿಟ್ಟೆ,” ಎಂದ. ಹೊರಹೋದ: ಪರಶುರಾಮ
ಅವನನ್ನು ಹಿಂಬಾಲಿಸಿ, “ಟೈಮ್ಸ್ ಅವರಿಗಿಷ್ಟ,” ಎಂದ.
ನ್ಯೂಸ್ ಸ್ಟಾಲ್‌ನಲ್ಲಿ `ಟೈಮ್' ಇರಲಿಲ್ಲ. ಆದರೆ ಮೂಲೆಯ ಗೂಡಂಗಡಿ
ಯವನು ಆ ಪತ್ರಿಕೆ ಕೊಳ್ಳುವುದು ಫೆರ್ನಾಂಡೀಸ್ಗೆ ಗೊತ್ತಿತ್ತು. ಓಡಿಬಂದವನನ್ನು
ಕುರಿತು, “ಸಿಗರೇಟು ಕೊಡೊ ?" ಎಂದ ಅಂಗಡಿಯವನು ಅಷ್ಟು ಹೇಳಿ
ಅವನೇ ಮುಂದುವರಿಸಿದ : ಇವತ್ತು ನಿಮಗೆ ಸಿಗರೇಟು ಬೇಡ. ನಿಮ್ಮ ಚೀಫ್
ಮಿನಿಸ್ಟರ್ ಬಂದಿದಾರಂತಲ್ಲ ? ಬಹುಶಃ ಅಲ್ಲಿ ನೀವು ಸೇದುವ ಹಾಗಿಲ್ಲ.”
“ಒಮ್ಮೆ ಇವತ್ತಿನ್ನು ನಿನ್ನ 'ಟೈಮ್ಸ್' ಕೊಡು ದೊರೆ.”
“ಎಲ್ಲಿ ನಿಮ್ಮ ಜೀಪ್ ಬಂದಂತಿಲ್ಲ ?”
“ಸ್ವಲ್ಪ ಚೆಕಪ್‌ಗೆ ಹೋಗಿದೆ.”
“ಪೇಪರ್‌ಗಳೆಲ್ಲ ಅದರಲ್ಲಿರಬೇಕು. ಜೀಪ್ ಬಂದ್ಯೋಡ್ಡ ನನ್ನದನ್ನು ವಾಪಸು
ಮಾಡೀಪ್ಪ ಮಿಸ್ಟರ್ ಫೆರ್ನಾಂಡೀಸ್.”
ಕುಟೀರದ ಅಧಿಕಾರಿ ಎರಡು ಮಿನಿಟುಗಳ ಮಟ್ಟಿಗೆ ಮಿಲ್ಖಾ ಸಿಂಗನಾದ.
ಪರಶು ಮೂಲಕ ಮುಖ್ಯಮಂತ್ರಿಗೆ ಪತ್ರಿಕೆ ಮುಟ್ಟಿಸಿದ.
ಹತ್ತು ಘಂಟೆಗೆ ಜೀಪ್ ಬಂತು, ಅದರಲ್ಲಿದ್ದ 'ಟೈಮ್'ನ ಪ್ರತಿ ಗೂಡಂಗಡಿ