ಪುಟ:ಮಿಂಚು.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

93

ಸೇರಿತು. ಉಳಿದ ಪತ್ರಿಕೆಗಳನ್ನು ಪರಶುರಾಮ, ಸೌದಾಮಿನಿ ಸ್ನಾನದ ಮನೆಯಲ್ಲಿ
ದ್ದಾಗ ಕೊಠಡಿಯಲ್ಲಿರಿಸಿದ.
ಆ ಪತ್ರಿಕೆಗಳ ಪುಟಗಳನ್ನೂ ಮುಖ್ಯಮಂತ್ರಿ ತಿರುವಿದಳು, ಒಂದು ಪತ್ರಿಕೆ
ಯಲ್ಲಿ ನಗರಕ್ಕೆ ಬಂದ ಪ್ರತಿಷ್ಠಿತರ ಬಗೆಗೆ ಒಂದು ಅಂಕಣವಿತ್ತು, ಭಾವಚಿತ್ರ
ಸಹಿತ, ಸೌದಾಮಿನಿಗೆ ಅನಿಸಿತು : ಈ ಫರ್ನಾಂಡೀಸ್‌ಗಿಂತ ಹೆಚ್ಚು ಬುದ್ದಿವಂತರು
ಇಲ್ಲಿ ಉಸ್ತುವಾರಿಗೆ ಇದ್ದಿದ್ದರೆ, ಕಿಷ್ಕಂಧೆಯ ಮುಖ್ಯಮಂತ್ರಿಯನ್ನು ಆ ಅಂಕಣ
ದಲ್ಲಿ ಮರೆಸಬಹುದಾಗಿತ್ತು.
ಹೇಗೂ ನಾಳ ಸಂಪಾದಕರೊಂದಿಗೆ ಅಶೋಕ ಭೋಜನ ಇದೆಯಲ್ಲ ? ಆದರೆ
ಅದು ಸುದ್ದಿಯಾಗುವುದಿಲ್ಲ. ಒಂದು ಬಗೆಯ ಉಪಯುಕ್ತ ಸಂವಾದ, ಅಷ್ಟೆ,
ಮಧ್ಯಾಹ್ನ ದಾಟಿದ ಮೇಲೆ ಒಬ್ಬಳು ತರುಣಿ ಬಂದಳು. ಅಂಗಸೌಷ್ಠವದ
ನಿಲುವಿನಿಂದ ಸ್ಪುರದ್ರೂಪಿಣಿ ಎನ್ನಬಹುದು.
ಅವಳು ಮುಖ್ಯಮಂತ್ರಿಯ ಮುಂದೆ ನಿಂತಳು, ಹೆಚ್ಚಿನ ಅಳುಕಿಲ್ಲದೆ.
ವಂದನೆಗೆ ಪ್ರತಿಯಾಗಿ ಸೌದಾಮಿನಿ ಅಂದಳು :
“ಯಾರು ?”
ಫರ್ನಾಂಡೀಸ್ ವಿವರವಿತ್ತ ;
“ಸಿತಾರಾ, ನಮ್ಮ ಪಾರ್ಟ್‌ಟೈಮ್ ಟೈಪಿಸ್ಟ್."
“ಎಲ್ಲೋ ನೋಡಿದಂತಿದೆ.”
ಇರಲಾರದು ಮಾತಾಜಿ. ನಾನು ದಿಲ್ಲಿಗೆ ಹೊಸಬಳು, ಮುಂಬಯಿ ನನ್ನ
ಊರು.”
ಸೌದಾಮಿನಿ ಕಣ್ಣು ಮುಚ್ಚಿ ತೆರೆದಳು. ಮುಂಬಯಿಯ ಜನಸಾಗರದಲ್ಲಿ ಈ
ಈ ಹನಿಯನ್ನು ಎಲ್ಲಿ ಕಂಡೆನೊ ?
“ಟೈಪ್‌ರೈಟರ್ ಕಾಣಿಸಲಿಲ್ಲ....?”
“ದಾಸ್ತಾನು ಕೊಠಡಿಯಲ್ಲಿದೆ.”
“ಹೊರಗೆ ತರಿಸು, ಸಿತಾರಾಗೆ ಶೀಘ್ರಲಿಪಿಯೂ ಬರುತ್ತಲ್ಲವೆ ?”
ಫೆರ್ನಾಂಡೀಸನಂದ :
“ಟೈಪಿಂಗ್ ಶಾರ್ಟ್‌ಹ್ಯಾಂಡ್ ನನಗೂ ಬತ್ತದೆ. ನಾನು ಖಾಸಗಿವಲಯದಿಂದ
ಬಂದ ಅಧಿಕಾರಿ.”
“ಸಿತಾರಾ, ಕಿಷ್ಕಿಂಧೆ ಚೀಫ್ ಸೆಕ್ರೆಟರಿಗೆ ಲೈಟಿಂಗ್ ಕಾಲ್ ಬುಕ್ ಮಾಡು.
ಸಿ. ಎಂ. ಮಾತನಾಡ್ತಾರೆ ಅನ್ನು,”
ಕಲ್ಯಾಣ ನಗರದಿಂದ “ಹಲ್ಲೋ” ಕೇಳಿಸಿದೊಡನೆ ಸೌದಾಮಿನಿ ರಿಸೀವರ್‌ನ
ಬಳಿ ಬಂದಳು,
“ನಮಸ್ಕಾರ, ನಾಳೆ ಶಿವಭಾವು ಚೌಗುಲೆ ಬರ್ತಾರೆ. ಅವರಿಗೆ ಚಾರ್ಚ್