ಪುಟ:ಮಿತ್ರ ದುಖಃ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೨೪ ---

ಈ ಪ್ರಕಾರ ಆರುಣನ ಭಾಷಣವು ನಡೆದಿರಲು, ಸೂ ರ್ಯನಿಗೆ ತುಸು ತುಸು ಜಾಗ್ರತೆಯಾಗಹತ್ತಿತ್ತು; ಅರುಣನು ನಡೆಸಿದ ಜಲವರ್ಣನೆಯು ಕೇಳಿಸುತ್ತಿದ ಬಳಿಕಂತ ಅವನು ಸಂಪೂರ್ಣವಾಗಿ ಎಚ್ಚತ್ರನು. ಸೂರ್ಯನು ಹೀಗೆ ಬಾಗ್ರತ ನಾದದ್ದು ಆರುಣನಿಗೆ ತಿಳಿಯಲು ಅವನು ತನ್ನ ಭಾಷಣವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟನು.

iv

ಬಳಿಕ ಸೂರ್ಯನು ಪನಃ ಚಂದ್ರನನ್ನು ಕುರಿತು, ------ ಚಂದ್ರಮಾ, ಅರುಣನು ಇದೀಗ ವರ್ಣಿಸಿದ ಪ್ರಸಂಗವು ಪ್ರ ತ್ಯಕ್ಷ ಒದಗಿರುವ ಕಾಲಕ್ಕೆ ಅಪ್ಪಿ ತಪ್ಪಿ ನಮ್ಮ ಹಾದಿಯಲ್ಲಿ ತಡಹಾಯು, ಆ ಪೀಫರ ಸಮಾಗಮದಿಂದ ನನ್ನ ರಥದ ಕುದುರೆಗಳು ಅದರ ಜಲ ಸಂಯದಲ್ಲಿ ನುಸಿದು, ವಿಶೇಷ ವಾದ ಆನಂದ ಸಾಮ್ರಾಜ್ಯದಲ್ಲಿ ಅಕಸ್ಮಾತ್ತಾಗಿ ಪ್ರವೇಶಿಸಿ ದಾಗ-ನನ್ನ ಮನಸ್ಸು ಆ ಸುಖಸಾಮ್ರಾಜ್ಯದ ಪಾಲುಗಾ ರಾಗಕ್ಕೆ ಹಾತೊರೆಯುತ್ತದೆ; ಹಾಗು ಆ ಜಲಸಮುದ್ಧ ಯದಲ್ಲಿಯ ಒಂದು ಕಣವಾದರೂ ನನಗೆ ಲಭಿಸೀತೇನೆಂಬ ಉತ್ಕಟೇಚ್ಛೆಯ ಲೋಭದಿಂದ ನಾನು ನನ್ನ ಕರಗಳನ್ನು ಮು೦ ದಕ್ಕೆ ಚಾಚುತ್ತೇನೆ; ಆದರೆ ಆಗ ನನ್ನ ಅಖಂಡ ದುರ್ದೈ ವವು ದೂತ್ತೆಂದು ನನ್ನ ಎದುರಿಗೆ ಬಂದು ನಿಲ್ಲುವದರಿಂದ ನಾನು ನನ್ನ ಕೈಗಳನ್ನು ಮುಂದೆ ಚಾಚುವೆನೋ ಇಲ್ಲವೋ, ಇಷ್ಟರಲ್ಲಿಯೇ ಆ ತುಪಾರಗಳು, ಅದೇಕೆ ಆ ಸಂಪೂರ್ಣ ಜಲ ಸಮುಚ್ಚಯವು ಹೇಳಹೆಸರಿಲ್ಲದಾಗುವದು! ಆಗ ನನ್ನಿ ಕುದುರೆಗಳು ತಮ್ಮ ಗೋಣುಗಳನ್ನು ಹಿಂದಕ್ಕೆ ಬೊಗ್ಗಿಸಿ, ನನ್ನನ್ನು ಒಳ್ಳೇ ಸಿಟ್ಟಿನಿಂದ ನೋಡತೊಡಗುತ್ತವೆ. ಈ ಪ್ರಕಾ ರದ ಅನುಭವವು ನನಗೆ ಎಷ್ಟೋ ಸಾರೆ ಬಂದಿದೆ. ಆದರಿಂದ